ಪಾಲಿಕೆ ನೈರ್ಮಲ್ಯ ಕಾರ್ಯಕರ್ತೆ ಎಸ್. ಪದ್ಮಾ 
ದೇಶ

ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಪಾಲಿಕೆ ಸ್ವಚ್ಚತಾ ಕಾರ್ಯಕರ್ತೆ | Gold ornaments

ಚೆನ್ನೈ: ತಮಿಳುನಾಡಿನ ಚೆನ್ನೈ ಮಹಾನಗರ ಪಾಲಿಕೆಯ ನೈರ್ಮಲ್ಯ ಕಾರ್ಯಕರ್ತೆಯೊಬ್ಬರು ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು(Gold ornaments) ಭಾನುವಾರ(ಜ. 11) ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪಾಲಿಕೆಯ ನೈರ್ಮಲ್ಯ ಕಾರ್ಯಕರ್ತೆ, ಟ್ರಿಪ್ಲಿಕೇನ್ ನಿವಾಸಿ ಎಸ್. ಪದ್ಮಾ(45) ಅವರು ಕೆಲಸ ಮುಗಿಸಿ ತಮ್ಮ ಪೊರಕೆ ಮತ್ತು ಕೈಗವಸುಗಳನ್ನು ಮೇಲಧಿಕಾರಿಗಳಿಗೆ ಹಿಂತಿರುಗಿಸಲು ಹೋದಾಗ ಟಿ. ನಗರದ ಮುಪಾತು ಅಮ್ಮನ್ ಕೊಯಿಲ್ ಬಳಿ ಆಕಸ್ಮಿಕವಾಗಿ ಬ್ಯಾಗ್ ಅನ್ನು ನೋಡಿದ್ದಾರೆ. ತಕ್ಷಣ ಬ್ಯಾಗ್ ಅನ್ನು ತೆರೆದು ನೋಡಿದಾಗ ಚಿನ್ನಾಭರಣಗಳು ಇರುವುದು ಪತ್ತೆಯಾಗಿದೆ. ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬಳಿಕ ಅದನ್ನು ಪಾಂಡಿ ಬಜಾರ್ ಪೊಲೀಸರಿಗೆ ಒಪ್ಪಿಸಿದ್ದಾರೆ. 
ಟಿ ನಗರದಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ಆಭರಣ ವ್ಯಾಪಾರಿಯೊಬ್ಬರು ತನ್ನ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಈ ಕುರಿತಾದ ದೂರಿನ ಮೇಲೆ ಮಾಲೀಕರನ್ನು ಹುಡುಕಿ ಅವರ ಆಭರಣಗಳನ್ನು ಹಿಂತಿರುಗಿಸಲಾಗಿದೆ. ಇನ್ನೂ ಸಿಕ್ಕ ಆಭರಣವನ್ನು ಒಪ್ಪಿಸಿದ್ದಕ್ಕೆ ಕಾರ್ಮಿಕಳಾದ ಪದ್ಮಾಅವರನ್ನು ಪೊಲೀಸರು ಅಭಿನಂದಿಸಿದ್ದಾರೆ (ಏಜೆನ್ಸೀಸ್).