Mumbai domestic violence case 
ದೇಶ

4 ಗಂಟೆ ಕೋಳಿಯಂತೆ ಕೂರುವ ಶಿಕ್ಷೆಯಿಂದ ತಪ್ಪಿಸಿಕೊಂಡ ಪತ್ನಿ; ಚಾಕುವಿನಿಂದ ಇರಿದ ಸೈಕೋ ಪತಿ..Mumbai

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 25 ವರ್ಷದ ಅರ್ಬಾಜ್ ಸೈಯದ್ ಎಂಬಾತ ಕ್ಷುಲಕ ಕಾರಣಕ್ಕೆ ತನ್ನ ಪತ್ನಿಗೆ ನಾಲ್ಕು ಗಂಟೆಗಳ ಕಾಲ ಕೋಳಿಯಂತೆ ಕೂರುವ ಶಿಕ್ಷೆ(domestic violence) ಕೊಟ್ಟು ಕ್ರೂರವಾಗಿ ಹಿಂಸಿಸಿದ ಘಟನೆ ಬೆಳಕಿಗೆ ಬಂದಿದೆ..
ಮುಂಬೈ ಮೂಲದ ಇತಿಹಾಸ ತಜ್ಞನಾದ ಅರ್ಬಾಜ್​ ಸೈಯದ್​​​ ಕೌಟುಂಬಿಕ ಕಲಹದ ಹಿನ್ನೆಲೆ ತನ್ನ ಪತ್ನಿಗೆ ಚಿತ್ರ ಹಿಂಸೆ ಕೊಟ್ಟಿದ್ದ, ಹಲ್ಲೆ ಮಾಡಿದ್ದ ಆನಂತರ ಮನೆಯಲ್ಲೇ ನಾಲ್ಕು ಗಂಟೆಗಳ ಕಾಲ ಕೋಳಿಯಂತೆ ಕುಳಿತಿರಬೇಕು ಎಂದು ಆದೇಶಿಸಿದ್ದ. ಈ ಹಿಂಸೆಗಳನ್ನು ಪಾಲಿಸಲಾಗದೆ ತವರಿಗೆ ಓಡುತ್ತಿದ್ದ ಪತ್ನಿಗೆ ಚಾಕುವಿನಿಂದ ಇರಿದು ಹಾನಿಗೊಳಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, 

ಮನಸೋ ಇಚ್ಛೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ಉಂಟಾದ ಕೌಂಟುಬಿಕ ಕಲಹದ ಕಾರಣಕ್ಕೆ ಪತ್ನಿಗೆ ನಾಲ್ಕು ಗಂಟೆ ಕೋಳಿಯಂತೆ ಕೂರುವ ಶಿಕ್ಷೆಯನ್ನು  ಕೊಟ್ಟಿದ್ದ. ಆದರೆ, ಆಕೆ ಇದನ್ನು ಉಲ್ಲಂಘಿಸಿ ತವರು ಮನೆಗೆ ಪರಾರಿಯಾಗಿದ್ದಳು. ಇದರಿಂದ ಮತ್ತಷ್ಟು ಕೆರಳಿದ ಆತನು, ಆಕೆ ಸಾಗುವ ದಾರಿಯಲ್ಲಿ ಹಿಂಬಾಲಿಸಿ, ತಾನು ಹೇಳಿದ ಕೆಲಸ ಮಾಡಿಲ್ಲವೆಂದು ಕೋಪದಿಂದ ಇರಿದಿದ್ದಾನೆ. ಮನಸೋ ಇಚ್ಛೆ ಥಳಿಸಿದ್ದಾನೆ ಎನ್ನಲಾಗಿದೆ.

ದೂರು ದಾಖಲು

ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಜೊತೆಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸಾ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ. ಘಟನೆ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಸಂತ್ರಸ್ತೆ ಕುಟುಂಬಸ್ಥರು ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿ ಮೇಲೆ ಕೌಟುಂಬಿಕ ದೌರ್ಜನ್ಯ,  ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ ಎಂದು  ಹೇಳಲಾಗಿದೆ, (ಏಜೆನ್ಸೀಸ್).