Blinkit Delivery Boy (ಚಿತ್ರ X) 
ದೇಶ

ಆರ್ಡರ್ ತಂದವನಿಗೆ ರಾಯಲ್ ವೆಲ್‌ಕಮ್!...ಮುಂಬೈ ಯುವಕನ ವಿಶಿಷ್ಟ ಆತಿಥ್ಯಕ್ಕೆ ಮನಸೋತ ನೆಟ್ಟಿಗರು.. Blinkit Delivery Boy

ಮುಂಬೈ: ಆನ್‌ಲೈನ್‌ನಲ್ಲಿ ಆಹಾರ ಅಥವಾ ದಿನಸಿ ಆರ್ಡರ್ ಮಾಡಿದಾಗ, ಡೆಲಿವರಿ ಮಾಡುವ ವ್ಯಕ್ತಿ ಮನೆಗೆ ಬಂದು ಆರ್ಡರ್ ತಲುಪಿಸಿ ಹೊರಟು ಹೋಗುವುದು ತೀರಾ ಸಾಮಾನ್ಯ. ಆದರೆ ಮುಂಬೈನಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್​ (Blinkit Delivery Boy) ಒಬ್ಬರಿಗೆ ಇತ್ತೀಚೆಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ಗ್ರಾಹಕರೊಬ್ಬರು ತಮಗೆ ದಿನಸಿ ತಂದುಕೊಟ್ಟ ಡೆಲಿವರಿ ಬಾಯ್‌ನನ್ನು ಕೇವಲ ಪ್ರೀತಿಯಿಂದ ನಡೆಸಿಕೊಂಡಿದ್ದಷ್ಟೇ ಅಲ್ಲದೆ, ಅವರೊಂದಿಗೆ ಆಟವಾಡಿ, ಭರ್ಜರಿ ಟಿಪ್ಸ್ ನೀಡಿ, ಒಟ್ಟಿಗೆ ಕುಳಿತು ಪೀಜ್ಜಾ ಸವಿದ ಘಟನೆಯೊಂದು ಸಾಮಾಜಿಕ ಮಾದ್ಯಮದಲ್ಲಿ ಭಾರೀ ವೈರಲ್​ ಆಗಿದೆ. 

ಘಟನೆ ಏನು?

ವರದಿಗಳ ಪ್ರಕಾರ, ಬ್ಲಿಂಕಿಟ್ ಡೆಲಿವರಿ ಬಾಯ್​ಯೊಬ್ಬರು ತಮ್ಮ ದಿನದ ಕೆಲಸದ ಭಾಗವಾಗಿ ಗಣೇಶ್ ಶರ್ಮಾ ಎಂಬ ವ್ಯಕ್ತಿಯೊಬ್ಬರ ಮನೆಗೆ ತಲುಪಿದ್ದರು. ಈ ವೇಳೆ ಆಹಾರವನ್ನು ಪಡೆದುಕೊಂಡ ಗಣೇಶ್​ ಅವರನ್ನು ಮನೆಯೊಳಗೆ ಬರುವಂತೆ ಆಹ್ವಾನಿಸಿದರು.  
ಮನೆ ಒಳಗಡೆ ಬಂದ ಡೆಲಿವರಿ ಬಾಯ್​ಗೆ ಗಣೇಶ್ ಶರ್ಮಾ, ಒಂದು ಆಕರ್ಷಕ ಆಫರ್ ಹಾಗೂ ಸವಾಲನ್ನು ಮುಂದಿಟ್ಟರು. ಮನೆಯ ಗೋಡೆಗೆ ಸಿಕ್ಕಿಸಿದ್ದ 'ಡಾರ್ಟ್ಸ್' (Darts - ಬಾಣ ಎಸೆಯುವ ಆಟ) ಬೋರ್ಡ್ ಅನ್ನು ತೋರಿಸಿ, ನೀವು ಈ ಆಟದಲ್ಲಿ ಸರಿಯಾದ ಗುರಿಗೆ ಬಾಣವನ್ನು ಎಸೆದರೆ, ನಿಮಗೆ 1,000 ರೂಪಾಯಿ ನಗದು ಟಿಪ್ಸ್ ಸಿಗುತ್ತದೆ ಎಂದು ಸವಾಲು ಹಾಕಿದರು. ಮೊದಲಿಗೆ ಡೆಲಿವರಿ ರೈಡರ್ ಸ್ವಲ್ಪ ಮುಜುಗರ ಹಾಗೂ ಆಶ್ಚರ್ಯ ಪಟ್ಟರೂ, ನಂತರ ನಗುತ್ತಲೇ ಆಟವಾಡಲು ಒಪ್ಪಿಕೊಂಡರು
ಡೆಲಿವರಿ ಬಾಯ್‌ಗೆ 1000ರೂ. ಟಿಪ್ಸ್ ಗೆಲ್ಲಲು ಡಾರ್ಟ್ಸ್ ಆಟದ ಚಾಲೆಂಜ್ !

ಶರ್ಮಾ ಮತ್ತು ಅವರ ಸ್ನೇಹಿತರು ಪ್ರೋತ್ಸಾಹಿಸಿದ ನಂತರ ವಿತರಣಾ ಪಾಲುದಾರನು ಶಾಟ್ ತೆಗೆದುಕೊಂಡು ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ವೇಳೆ ಶರ್ಮಾ ಡೆಲಿವರಿ ಬಾಯ್​ಗೆ ನಗದನ್ನು ಹಸ್ತಾಂತರಿಸುತ್ತಿದ್ದಂತೆಯೇ  ಕೋಣೆಯಲ್ಲಿ ಹರ್ಷೊದ್ಗಾರಗಳು ಮೊಳಗಿದವು. 
ಆದರೆ, ಕಥೆ ಇಲ್ಲಿಗೇ ಮುಗಿಯಲಿಲ್ಲ. ಕೇವಲ ಹಣ ನೀಡಿ ಕಳುಹಿಸುವ ಬದಲು, ಗಣೇಶ್ ಅವರು ಆ ರೈಡರ್‌ನನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡರು. ಆಗ ತಾನೇ ಮನೆಗೆ ಬಂದಿದ್ದ ಪಿಜ್ಜಾವನ್ನು ಹಂಚಿಕೊಂಡು ತಿಂದರು. ಕೇವಲ ಒಂದು ಸಾಮಾನ್ಯ ಡೆಲಿವರಿಯಾಗಿ ಆರಂಭವಾದ ಈ ಭೇಟಿ, ಇಬ್ಬರ ನಡುವಿನ ಒಂದು ಸುಂದರ ಹಾಗೂ ಮಾನವೀಯ ಸಂಬಂಧದ ಕ್ಷಣಕ್ಕೆ ಸಾಕ್ಷಿಯಾಯಿತು.
ಈ ಹೃದಯೀಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದರು. ಒಬ್ಬ ಬಳಕೆದಾರರು ಇಂತಹ ಸಣ್ಣ-ಪುಟ್ಟ ಮಾನವೀಯ ಕೆಲಸಗಳು ಸಮಾಜದಲ್ಲಿ ದೊಡ್ಡ ಬದಲಾವಣೆ ತರುತ್ತವೆ ಎಂದು ಕಾಮೆಂಟ್ ಮಾಡಿದ್ದರೆ, ದಿನವಿಡೀ ದಣಿದಿದ್ದ ಆ ಬ್ಲಿಂಕಿಟ್ ರೈಡರ್ ಪಾಲಿಗೆ ಮಾತ್ರ ಇದು ನಿಜಕ್ಕೂ ಒಂದು ಅದ್ಭುತ ಮತ್ತು ಸರ್ಪ್ರೈಸ್ ದಿನವಾಗಿ ಮೂಡಿಬಂದಿದೆ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).