ಹತ್ಯೆ ಮಾಡಿ ಮಂಗಳೂರಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಪನ್ವೇಲ್‌ನಲ್ಲಿ ಬಂಧಿಸಿದ ಪೊಲೀಸರು 
ದೇಶ

ಮುಂಬೈ ಲೋಕಲ್​ ಟ್ರೇನ್‌ನಲ್ಲಿ ದಾರುಣ ಹತ್ಯೆ: ಕೊಲೆ ಮಾಡಿ ಮಂಗಳೂರಿಗೆ ಓಡಿಹೋಗಲಿದ್ದ ಆರೋಪಿ; ಪನ್ವೇಲ್​ನಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ! Mumbai Local Murder

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಬಾಗಿಲು ಮುಚ್ಚುವ ಜಗಳಕ್ಕೆ ಯುವಕನ ಭೀಕರ ಕೊಲೆ!
  • ಮುಂಬೈ ಲೋಕಲ್ ರೈಲಿನಲ್ಲಿ ನಡೆದ ಘಟನೆ
  • ಹತ್ಯೆ ಮಾಡಿ ಮಂಗಳೂರಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಪನ್ವೇಲ್‌ನಲ್ಲಿ ಬಂಧಿಸಿದ ಪೊಲೀಸರು
ಮುಂಬೈ: ಮುಂಬೈನ ಜೀವನಾಡಿ ಎಂದೇ ಕರೆಯಲಾಗುವ ಮುಂಬೈ ಲೋಕಲ್​ ರೈಲಿನಲ್ಲಿ ಮಂಗಳವಾರ (ಜೂ.2.3) ರಂದು ರೈಲಿನ ಬಾಗಿಲನ್ನು ಮುಚ್ಚುವಲ್ಲಿ ಪ್ರಾರಂಭವಾದ ವಾಗ್ವಾದವೊಂದು ಕೊಲೆಯಲ್ಲಿ (Mumbai Local Murder) ಕೊನೆಗೊಂಡ ಘಟನೆ ಜರುಗಿತ್ತು.
ಚರ್ಚ್‌ಗೇಟ್‌ನಿಂದ ನಲಸೋಪಾರಾ ಕಡೆಗೆ ಚಲಿಸುತ್ತಿದ್ದ ಲೋಕಲ್ ರೈಲಿನ ಫಸ್ಟ್‌ ಕ್ಲಾಸ್ ಬೋಗಿಯಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಮಯಾಂಕ್ ಲೋಹರ್ ಎಂಬಾತನನ್ನು ರೋಶನ್ ಸುವರ್ಣ ಎನ್ನುವವನು ಚಾಕುವಿನಿಂದ ಚುಚ್ಚಿ ಸಾಯಿಸಿದ್ದನು.
ಇದನ್ನೂ ಓದಿ: 11 ವರ್ಷದ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ; ಪೊಲೀಸರಿಂದ ಶೂಟೌಟ್​! Delhi Police Encounter

ಬಾಗಿಲು ಮುಚ್ಚುವ ವಿಚಾರಕ್ಕೆ ಪ್ರಾರಂಭವಾದ ಜಗಳ

ಮಾಹಿತಿ ಪ್ರಕಾರ, ಮೃತ ಮಯಾಂಕ್ ಲೋಹರ್ ಮತ್ತು ಆರೋಪಿ ರೋಶನ್ ಸುವರ್ಣ ನಡುವೆ ರೈಲಿನ ಬಾಗಿಲನ್ನು ಮುಚ್ಚುವ ವಿಚಾರವಾಗಿ ವಾಗ್ವಾದ ಏರ್ಪಟ್ಟಿದೆ. ಇದರಿಂದ ಕುಪಿತನಾದ ರೋಶನ್ ಸುವರ್ಣ ತನ್ನಲ್ಲಿದ್ದ ಚಾಕುವೊಂದನ್ನು ಹೊರತೆಗೆದು ಮಯಾಂಕ್ ಲೋಹರ್ ಮೇಲೆ ಮನಸೋ ಇಚ್ಛೇ ದಾಳಿ ಮಾಡಿದ್ದಾನೆ.
ರೈಲಿನ ಸೀಟಿನ ಮೇಲೆಲ್ಲಾ ರಕ್ತ ಸಿಡಿದಿದೆ. ಪಕ್ಕದಲ್ಲಿದ್ದ ಜನ ಅವನು ಕೊಲೆ ಮಾಡಿಯೇ ಬಿಟ್ಟ ಎಂದು ಹೇಳಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಆದರೆ ಜನ ರೋಶನ್ ಸುವರ್ಣನ ಕೌರ್ಯವನ್ನು ನೋಡಿ ಮಾಯಾಂಕ್​ನನ್ನು ಬದುಕಿಸುವ ಪ್ರಯತ್ನ ಮಾಡಿಲ್ಲ.

ರೋಶನ್ ಅರೆಸ್ಟ್: ಊರು ಬಿಡಲು ತಯಾರಿಯಲ್ಲಿದ್ದ ಖದೀಮ!

ಕೊಲೆ ಮಾಡಿದ ಬಳಿಕ ಮುಂಬೈಯನ್ನು ತೊರೆದು ಬೇರೆ ಎಲ್ಲಾದರೂ ತಲೆಮರೆಸಿಕೊಳ್ಳಲು ರೋಶನ್ ಸುವರ್ಣಾ ಪ್ರಯತ್ನಿಸಿದ್ದಾನೆ. ಆದರೆ ಪನ್ವೇಲ್​ ನಿಲ್ದಾಣದಲ್ಲಿ ಇತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್​ ಮಾಹಿತಿ ಪ್ರಕಾರ, ಈ ರೋಶನ್​ ಕಾರ್ಗೊಗೆ ಸಂಬಂಧಿಸಿದ ಕೆಲಸವನ್ನು ಮಾಡಿಕೊಂಡಿದ್ದ. ಕೆಲಸ ಮುಗಿದ ನಂತರ ಇವನು ಒಂದಿಡಿ ಬಾಟಲ್​ ರಮ್​ನ್ನು ಕುಡಿದ್ದಿದ್ದಾನೆ. ನಂತರ ಮಳೆ ಜೋರಾದ ಕಾರಣ ಅಂಧೇರಿಯಲ್ಲಿ ರೈಲನ್ನು ಏರಿದ್ದಾನೆ.
ಮಳೆ ಜೋರಿಗೆ ರೈಲಿನ ಬಾಗಿಲನ್ನು ಹಾಕು ಎಂದು ಮಯಾಂಕ್​ನಿಗೆ ರೋಶನ್​ ಹೇಳಿದ್ದಾನೆ. ಮಯಾಂಕ್​ ಬಾಗಿಲನ್ನು ಹಾಕಲು ಒಪ್ಪದ್ದಿದ್ದಾಗ ರೋಶನ್​ ಚಾಕುವಿನಿಂದ ದಾಳಿ ನಡೆಸಿದ್ದೆನೆಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಕೊಲೆ ಮಾಡಿದ ಬಳಿಕ ಮನೆ ಸೇರಿದ ರೋಶನ್​, ಕೆಲ ದಿನಗಳ ಮಟ್ಟಿಗೆ ಆಚೆಗೆ ಹೋಗಿ ಬರುತ್ತೆನೆಂದು ಹೇಳಿದ್ದಾನೆ. ಇವನು ಪನ್ವೇಲ್​ನಿಂದ ರೈಲನ್ನು ಏರಿ ಕರ್ನಾಟಕದ ಮಂಗಳೂರನ್ನು ಸೇರಿಕೊಳ್ಳಲು ಯತ್ನಿಸಿದ್ದ. ಆದರೆ ಪನ್ವೇಲ್ ನಿಲ್ದಾಣದಕ್ಕೆ ಎಂಟ್ರಿ ಕೊಟ್ಟ ಪೊಲೀಸರು ರೋಶನ್​ ಸುವರ್ಣಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, (ಏಜನ್ಸೀಸ್​).