ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿ ಸಾವು  
ದೇಶ

ಬಿರಿಯಾನಿ, ಕಲ್ಲಂಗಡಿ ತಿಂದು ಸಾವು: ಫುಡ್ ಪಾಯಿಸನಿಂಗೋ? ಇಲ್ಲಾ ವಿಷಪ್ರಾಷವೋ? ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ವೈದ್ಯಕೀಯ ವರದಿ! Mumbai Biryani Watermelon death case

ಪ್ರಮುಖ ಮುಖ್ಯಾಂಶಗಳು

  • ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿ ಸಾವು ಪ್ರಕರಣ
  • ಪ್ರಾಥಮಿಕ ವೈದ್ಯಕೀಯ ವರದಿ ಲಭ್ಯ
  • ದೇಹದ ಅಂಗಾಂಗಗಳು ಹಸಿರು ಬಣ್ಣಕ್ಕೆ ತಿರುಗಿವೆ
ಮುಂಬೈ: ಬಿರಿಯಾನಿ ಮತ್ತು ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಕುಟುಂಬದ ನಾಲ್ವರು ಸಾವನ್ನಪ್ಪಿದ್ದ ಘಟನೆ ಮುಂಬೈನಲ್ಲಿ ವರದಿಯಾಗಿದ್ದು, ಈಗ ಮರಣೋತ್ತರ ಪರೀಕ್ಷೆ ವರದಿ (Post Mortem Report) ದೊರೆತಿದೆ.

ವರದಿಯಲ್ಲೇನಿದೆ?

ಮುಂಬೈನ ಪೈಧೋನಿ ಪ್ರದೇಶದಲ್ಲಿ ಬಿರಿಯಾನಿ ಮತ್ತು ಕಲ್ಲಂಗಡಿ ಹಣ್ಣನ್ನು ತಿಂದು, ಅಬ್ದುಲ್ಲಾ ದೊಕಾಡಿಯಾ (40), ನಸ್ರೀನ್ ದೋಕಾಡಿಯಾ (35), ಮತ್ತು ಅವರ ಪುತ್ರಿಯರಾದ ಆಯಿಷಾ (16) ಮತ್ತು ಜೈನಾಬ್ (13) ಸಾವನ್ನಪ್ಪಿದ್ದರು.
ಈದೀಗ ಪ್ರಾಥಮಿಕ ವರದಿ ದೊರೆತಿದ್ದು, ಈ ನಾಲ್ವರ ಸಾವು ಫುಡ್​ ಪಾಯಿಸ್ನಿಂಗ್​ನಿಂದ ಆಗಿದೆ ಎಂದು ಮೆಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ ಇವರ ದೇಹದ ಅಂಗಾಂಗಗಳು ಹಸಿರು ಬಣ್ಣಕ್ಕೆ ತಿರುಗಿರುವ ಕಾರಣ ವಿಷಪ್ರಾಷಣವಾಗಿರುವ ಸಾಧ್ಯತೆಯಿದೆ ಎಂಬ ಅನುಮಾನವಿದೆ. ಆದ್ದರಿಂದ ಇನ್ನು ಹೆಚ್ಚಿನ ತನಿಖೆ ನಡೆಸಿದ ನಂತರ ಅಧಿಕ ಮಾಹಿತಿ ದೊರೆಯಲಿದೆ ಎನ್ನುವುದು ವೈದ್ಯರು ನೀಡಿದ ಮಾಹಿತಿಯಾಗಿದೆ.

48 ಗಂಟೆಗಳಲ್ಲಿ ಕುಟುಂಬ ಖತಂ!

ಶನಿವಾರ (ಏ.25) ರಾತ್ರಿ ಇವರ ಮನೆಯಲ್ಲಿ ಔತಣಕೂಟವನ್ನು ಏರ್ಪಡಿಸಿದ್ದು, ಆ ದಿನ ಇವರೊಟ್ಟಿಗೆ ಇತರ ಐದು ಜನ ಊಟ ಮಾಡಿದ್ದಾರೆ. 10.30 ಸುಮಾರಿಗೆ ಅತಿಥಿಗಳು ತಮ್ಮ ಮನೆಗೆ ಹಿಂದಿರುಗಿದ ನಂತರ, ಇವರು ಸುಮಾರು ರಾತ್ರಿ ಒಂದು ಗಂಟೆಗೆ ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ.
ಮಾರನೇ ದಿನ ಬೆಳಿಗ್ಗೆ ನಾಲ್ಕು ಜನ ವಾಂತಿ, ಬೇಧಿ ಹಾಗೂ ಹೊಟ್ಟೆ ನೋವಿನಿಂದ ಬಳಲಲು ಪ್ರಾರಂಭಿಸಿದ್ದಾರೆ. ಕೂಡಲೇ ಕುಟುಂಬದ ವೈದ್ಯರನ್ನು ಇವರು ಸಂಪರ್ಕಿಸಿದ್ದಾರೆ. ಅವರು ಜೆಜೆ ಆಸ್ಪತ್ರೆಗೆ ದಾಖಲಾಗುವಂತೆ ನಿರ್ದೇಶಿಸಿದ್ದಾರೆ.
ಆದರೆ, ಆಸ್ಪತ್ರೆ ದಾಖಲಾಗುವ ಮೊದಲೇ ಮಗಳು ಆಯಿಷಾ ಸಾವನ್ನಪ್ಪಿದ್ದಾಳೆ. ಅದೇ ದಿನ ರಾತ್ರಿ ಮನೆ ಯಜಮಾನ ಅಬ್ದುಲ್ಲಾ ದೊಕಾಡಿಯಾ ಮೃತನಾಗಿದ್ದು, ಮಾರನೆ ದಿನ ಸೋಮವಾರ (ಏ.27) ನಸ್ರೀನ್ ದೋಕಾಡಿಯಾ ಮತ್ತು ಕಿರಿಯ ಮಗಳು ಜೈನಾಬ್ ಕೂಡ ಅಸುನಿಗಿದ್ದಾರೆ,(ಏಜನ್ಸೀಸ್​).