- ಈ ವಿಷಯದಲ್ಲಿ ವಿಶ್ವ ದಾಖಲೆ ಬರೆದ ಮುಂಬೈ ಏರ್ಪೋರ್ಟ್
- ಸದ್ಯ ಈ ಸಂಗತಿ ಹಲವರ ಹುಬ್ಬೇರಿಸಿದೆ
- 520 ಆಗಮನ ಮತ್ತು 516 ನಿರ್ಗಮನ ಫ್ಲೈಟ್ಸ್
Mumbai Airport: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ನವೆಂಬರ್ 21, 2025ರಂದು, 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 1,036 ವಿಮಾನಗಳ ಚಲನೆಯನ್ನು ನಿರ್ವಹಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ. ಸದ್ಯ ಈ ಸಂಗತಿ ಹಲವರ ಹುಬ್ಬೇರಿಸಿದೆ.
ಮುಂಬೈ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ದೆಹಲಿಯ ನಂತರದಲ್ಲಿ ಮುಂಬೈ ಏರ್ಪೋರ್ಟ್ ಈ ಸಾಲಿನಲ್ಲಿದೆ. ಇದರೊಟ್ಟಿಗೆ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಮುಂಬೈ ಕೂಡ ಒಂದು. ದೆಹಲಿ, ಲಂಡನ್, ದುಬೈ ಮತ್ತು ನ್ಯೂಯಾರ್ಕ್‌ನಂತೆ, ಮುಂಬೈ ಏರ್ಪೋರ್ಟ್ ಎರಡು ರನ್‌ವೇಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ, ನ.21ರಂದು 100 ಸೆಕೆಂಡುಗಳೊಳಗೆ 1,036 ಟೇಕ್‌ಆಫ್‌ಗಳು ಮತ್ತು ಲ್ಯಾಂಡಿಂಗ್‌ಗಳು ಸಂಭವಿಸಿವೆ.
ಈ ಮೂಲಕ ಮುಂಬೈ ಏರ್ಪೋರ್ಟ್ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ. ಇದೇ ನವೆಂಬರ್ 21, 2023ರಂದು, 1,032 ವಿಮಾನಗಳು ಹಾರಾಡಿತ್ತು. ಇದು ಇತ್ತೀಚೆಗೆ 1,036 ಸಂಖ್ಯೆಗೆ ತಲುಪಿರುವುದು ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ. ಇದರಲ್ಲಿ 755 ದೇಶೀಯ ಫ್ಲೈಟ್ಗಳು ಮತ್ತು 281 ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ. 520 ಆಗಮನ ವಿಮಾನಗಳು ಮತ್ತು 516 ನಿರ್ಗಮನ ವಿಮಾನಗಳು ಸೇರಿವೆ.
ನವೆಂಬರ್ 21ರಂದು 1,70,488 ಪ್ರಯಾಣಿಕರು ಪ್ರಯಾಣಿಸಿದ್ದಾರೆ. 121,527 ಪ್ರಯಾಣಿಕರು ದೇಶೀಯ ಮಾರ್ಗಗಳಲ್ಲಿ ಟ್ರಾವಲ್ ಮಾಡಿದ್ದಾರೆ ಮತ್ತು 48,961 ಅಂತರರಾಷ್ಟ್ರೀಯ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಪಯಣಗಳು ದೆಹಲಿ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್ ಮತ್ತು ಕೋಲ್ಕತ್ತಾಗೆ ದೇಶೀಯ ಮಾರ್ಗಗಳಲ್ಲಿ ನಡೆದಿವೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಜನವರಿ 11, 2025ರಂದು, ಮುಂಬೈ ಏರ್ಪೋರ್ಟ್ನಿಂದ ಅತಿ ಹೆಚ್ಚು ಪ್ರಯಾಣ ಮಾಡಲಾಗಿದೆ. ಆ ಒಂದೇ ದಿನ 170,516 ಜನರು ಪ್ರಯಾಣಿಸಿದ್ದಾರೆ. ದೆಹಲಿಯು ದೇಶದಲ್ಲಿ ಸ್ವಾಭಾವಿಕವಾಗಿಯೇ ಜನದಟ್ಟಣೆಯಿಂದ ಕೂಡಿದೆ. ಮುಂಬೈನಿಂದಲೂ ಇದೇ ರೀತಿಯ ಪ್ರಯಾಣಗಳು ನಡೆಯುತ್ತಿದ್ದು, ದೆಹಲಿ ನಂತರದಲ್ಲಿ ಮುಂಬೈ ಈ ಸ್ಥಾನದಲ್ಲಿದೆ,(ಏಜೆನ್ಸೀಸ್).