MP Kangana Ranaut  
ದೇಶ

ಇದು ದೇಹದಲ್ಲಿ ಕ್ಯಾನ್ಸರ್​ ಇದ್ದಂತೆ... CM ಮಮತಾ ಬ್ಯಾನರ್ಜಿ ವಿರುದ್ಧ ಸಂಸದೆ ಕಂಗನಾ ಕಿಡಿ!

ಪಶ್ಚಿಮ ಬಂಗಾಳ:ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗ ಮತ್ತು ಎಸ್​​ಐಆರ್​ ಕುರಿತು ನೀಡಿದ್ದ ಹೇಳಿಕೆಗೆ ಸಂಸದೆ ಕಂಗನಾ ರನೌತ್​​ ಆಕ್ರೋಶಗೊಂಡಿದ್ದಾರೆ.
ದೇಶ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ, ಕ್ಯಾನ್ಸರ್​ ರೋಗವು ದೇಹದ ಮೇಲೆ ಪರಿಣಾಮ ಬೀರುವಂತೆಯೇ, ಈ ಒಳನುಸುಳುವವರನ್ನು ಹೊರ ಹಾಕಲು ಇಡೀ ರಾಷ್ಟ್ರವು ಬಯಸುತ್ತಿದೆ ಎಂದು ಕಂಗನಾ ತಿರುಗೇಟು ನೀಡಿದ್ದಾರೆ.

ಮಮತಾ ಬ್ಯಾಜರ್ಜಿ ಹೇಳಿದ್ದೇನು?

ಭಾರತೀಯ ಚುನಾವಣಾ ಆಯೋಗವು ಡಿಸೆಂಬರ್ 9 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಿದೆ. ಇದು ಭೀಕರ ಮತ್ತು ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಎಸ್‌ಐಆರ್ ಹೆಸರಿನಲ್ಲಿ ಎನ್‌ಆರ್‌ಸಿಯನ್ನು ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ಮಮತಾ ಬ್ಯಾನರ್ಜಿ ಚುನಾವಣಾ ಆಯೋಗ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದರು.

ಪಾಕ್​ಗೆ ಭಯಭೀತಿಗೊಂಡಿದೆ

ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭದ ಬಗ್ಗೆ ಪಾಕಿಸ್ತಾನ ಆಕ್ರೋಶಗೊಂಡಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಈ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಗಮನ ಸೆಳೆಯುವಂತೆ ಒತ್ತಾಯಿಸಿದೆ. ಈ ಕುರಿತು ಕಂಗನಾ ರನೌತ್ ಮಾತನಾಡಿ, "ಪಾಕಿಸ್ತಾನ ದಿನೇ ದಿನೇ ಮುಳುಗುತ್ತಿರುವುದರಿಂದ ಭಯಭೀತರಾಗುತ್ತಿದೆ. ಅವರು ಭಿಕ್ಷಾಪಾತ್ರರಾಗಿದ್ದಾರೆ, ಆದರೆ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಮತ್ತು ಶೀಘ್ರದಲ್ಲೇ ಮೊದಲನೆಯವರಾಗುತ್ತೇವೆ" ಎಂದು ಹೇಳಿದರು(ಏಜೆನ್ಸೀಸ್​).