Crime 
ದೇಶ

ಪರ ಪುರುಷನ ಜೊತೆ ತಾಯಿಯ ಅಕ್ರಮ ಸಂಬಂಧ: ಇಬ್ಬರನ್ನು ಕೊಂದು ಶವಗಳನ್ನು ಪೊಲೀಸ್​ ಠಾಣೆಗೆ ಕೊಂಡೊಯ್ದ ಮಗ!

ಹರಿಯಾಣ: ತನ್ನ ತಾಯಿ ಬೇರೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದನ್ನು ಕಂಡ ಮಗ, ತಾಯಿ ಮತ್ತು ಆಕೆಯ ಜೊತೆಗಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ಶವಗಳನ್ನು ಪೊಲೀಸ್​ ಠಾಣೆಗೆ ಕೊಂಡೊಯ್ದ ಘಟನೆ ಹರಿಯಾಣದ ಸಿರ್ಸಾದಲ್ಲಿ ಶುಕ್ರವಾರ ನಡೆದಿದೆ.
ಪೊಲೀಸ್​ ಠಾಣೆ ಮುಂದೆ ಶವಗಳನ್ನು ನೋಡಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು, ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ಮಹಿಳೆಯನ್ನು 42 ವರ್ಷದ ಅಂಗೂರಿ ದೇವಿ ಮತ್ತು ಆಕೆಯ ಪ್ರಿಯಕರ 45 ವರ್ಷದ ಲೇಖರಾಜ್ ಎಂದು ಗುರುತಿಸಲಾಗಿದೆ.

ರೆಂಡ್​ಹ್ಯಾಂಡ್​ ಆಗಿ ಹಿಡಿದು ಕೊಂದ!

ರಾಜಕುಮಾರ್​ ಎಂಬ ಯುವಕ ಗುರುವಾರ ರಾತ್ರಿ ತನ್ನ ತಾಯಿ ನೆರೆಹೊರೆಯ ವ್ಯಕ್ತಿಯಾದ ಲೇಖರಾಜ್ ಜೊತೆ ಇರುವುದನ್ನು ಕಂಡಿದ್ದಾನೆ. ಇಬ್ಬರನ್ನು ರೆಂಡ್​ಹ್ಯಾಂಡ್​ ಆಗಿ ಹಿಡಿದಿದ್ದಾನೆ. ಕೋಪದಲ್ಲಿ ಇಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶವಗಳನ್ನು ರಾತ್ರಿ ಕಾರಿನಲ್ಲಿ ಹಾಕಿದ್ದಾನೆ. ಬಳಿಕ ಕಾರನ್ನು ಪೊಲೀಸ್​ ಠಾಣೆಗೆ ತಂದು ಪೋಲಿಸರ ಎದರೇ ಶವಗಳನ್ನು ಹೊರ ತೆಗೆದಿದ್ದಾನೆ.
ಇನ್ನು ಆರೋಪಿ ರಾಜುಕುಮಾರ್​, ನನ್ನ ತಾಯಿ ನೆರೆಮನೆಯವರೊಂದಿದೆ ಸಂಬಂಧ ಇತ್ತು. ಇದನ್ನು ಹಲವು ಬಾರಿ ನನ್ನ ತಾಯಿಗೆ ಎಚ್ಚರಿಸಿದ್ದೆ. ಅದರೆ, ಅವರು ನನ್ನ ಮಾತು ಕೇಳಲ್ಲೇ ಇಲ್ಲ. ಹೀಗಾಗಿ ಕೊಂದಿರುವೆ ಎಂದು ಹೇಳಿಕೆ ನೀಡಿದ್ದಾನೆ. ಈ ಘಟನೆ ಹರಿಯಾಣದ್ಯಾಂತ ಅಂತಕ ಸೃಷ್ಠಿಸಿದೆ(ಏಜೆನ್ಸೀಸ್​).