3 ಮಕ್ಕಳ ತಾಯಿ 6 ಮಕ್ಕಳ ತಂದೆಯ ಜತೆ ಮದುವೆ 
ದೇಶ

3 ಮಕ್ಕಳ ತಾಯಿಗೆ, 6 ಮಕ್ಕಳ ತಂದೆ ಜತೆ ಲವ್; ಮದುವೆಗೆ ಪಂಚಾಯಿತಿ ಗ್ರೀನ್ ಸಿಗ್ನಲ್! |Mother Of 3 Marries Father Of 6

ಪ್ರಮುಖ ಮುಖ್ಯಾಂಶಗಳು

  • 3 ಮಕ್ಕಳ ತಾಯಿ 6 ಮಕ್ಕಳ ತಂದೆಯ ಜತೆ ಮದುವೆ
  • ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ
  • ಕುಟುಂಬಕ್ಕೆ ತಿಳಿಸದೇ ಮದುವೆ, ಪಂಚಾಯಿತಿ ಒಪ್ಪಿಗೆ
Love Marriage: ಪ್ರೇಮಕ್ಕೆ ಕಣ್ಣಿಲ್ಲ ಎನ್ನುವುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಅಪರೂಪದ ಮದುವೆಯೊಂದು ಸಾಕ್ಷಿಯಾಗಿದೆ. ಮೂರು ಮಕ್ಕಳ ತಾಯಿ ಹಾಗೂ ಆರು ಮಕ್ಕಳ ತಂದೆ ಹಲವು ವರ್ಷ ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಗ್ರಾಮ ಪಂಚಾಯಿತಿಯೂ ಸಾಮಾಜಿಕ ಒಪ್ಪಿಗೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ
ಮೂವರು ಮಕ್ಕಳ ತಾಯಿ ತಬಸ್ಸುಮ್, ಆರು ಮಕ್ಕಳ ತಂದೆ ಮೊಹಮ್ಮದ್ ಉಮರ್ ಅವರನ್ನು ಮದುವೆಯಾಗಿದ್ದಾರೆ. ಈ ಘಟನೆ ಮುರಾದಾಬಾದ್‌ನ ಭೋಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿ ನಾಗಲ್ ಗ್ರಾಮದಲ್ಲಿ ನಡೆದಿದೆ. ತಬಸ್ಸುಮ್ ಪತಿ ರಿಯಾಜ್-ಉಲ್ ಸುಮಾರು 5 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಬಳಿಕ ತಬಸ್ಸುಮ್ ತನ್ನ ಅತ್ತೆ-ಮಾವನ ಮನೆಯಲ್ಲೇ ಮಕ್ಕಳನ್ನು ಜತೆ ಜೀವನ ನಡೆಸುತ್ತಿದ್ದರು.

ಮೂರು ವರ್ಷದ ಪ್ರೀತಿ

ಸುಮಾರು ಮೂರು ವರ್ಷಗಳ ಹಿಂದೆ ಕೊರಬಂಕು ಗ್ರಾಮದ ಮೆಕ್ಯಾನಿಕ್ ಉಮರ್ ಅವರು ಒಮ್ಮೆ ತಬಸ್ಸುಮ್ ಭೇಟಿಯಾಗಿದ್ದರು. ಪರಿಚಯ ಕ್ರಮೇಣ ಆತ್ಮೀಯತೆಗೆ ತಿರುಗಿದ್ದು, ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ನಂತರ ಇಬ್ಬರೂ ಕುಟುಂಬದವರಿಗೆ ಮಾಹಿತಿ ನೀಡದೆ ಕಲಿಯಾರ್ ಶರೀಫ್‌ಗೆ ತೆರಳಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಬಳಿಕ ಕೋರ್ಟ್ ಮ್ಯಾರೇಜ್‌ಗೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿದ್ದಾರೆ.

ಒಟ್ಟಿಗೆ ಬದುಕುತ್ತೇವೆ ಎಂದ ಜೋಡಿ

ಮದುವೆಯ ವಿಚಾರ ಗೊತ್ತಾದ ಬಳಿಕ ತಬಸ್ಸುಮ್ ಅವರ ಅತ್ತೆ-ಮಾವ ಹಾಗೂ ಊರಿನಿ ಮುಖಂಡರ ನಡುವೆ ಮಾ ತುಕತೆ ನಡೆದಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಸಭೆಯನ್ನೂ ಕರೆಯಲಾಗಿತ್ತು. ಪಂಚಾಯಿತಿ ಮುಂದೆ ತಬಸ್ಸುಮ್ ಮತ್ತು ಉಮರ್ ಇಬ್ಬರೂ ತಾವು ಒಟ್ಟಿಗೆ ಬದುಕುತ್ತೇವೆ ಪಟ್ಟುಹಿಡಿದಿದ್ದಾರೆ.

ಕುಟುಂಬದವರ ವಿರೋಧವಿಲ್ಲ

ತಬಸ್ಸುಮ್ ಅವರನ್ನು ಅವರ ಭಾವ ಹಾಗೂ ಕುಟುಂಬದವರು ಇಷ್ಟು ವರ್ಷ ಚೆನ್ನಾಗಿಯೇ ನೋಡಿಕೊಂಡಿದ್ದರು. ಆದರೆ ತಬಸ್ಸುಮ್ ತಮ್ಮ ಇಚ್ಛೆಯಂತೆ ಮದುವೆಯಾಗಿ ಹೊಸ ಜೀವನ ಬಯಸಿದ್ದಾರೆ. ಇದಕ್ಕೆ ಕುಟುಂಬದವರ ವಿರೋಧವಿಲ್ಲ ಎಂದು ಪಂಚಾಯಿತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪಂಚಾಯಿತಿಯೂ ಸಮ್ಮತಿ ನೀಡಿದೆ.

ತಬಸ್ಸುಮ್ ಜೊತೆ ಸಂಬಂಧವಿಲ್ಲ ಎಂದ ಅತ್ತೆ-ಮಾವ

ಈ ಅಪರೂಪದ ಮದುವೆಗೆ ಮನೆಯವರ ವಿರೋಧಿಸದಿದ್ದರೂ, ತಬಸ್ಸುಮ್ ಮತ್ತು ಅವರ ಮಕ್ಕಳನ್ನು ಉಮರ್ ಜತೆ ಕಳುಹಿಸಿದ್ದೇವೆ. ಅಲ್ಲದೆ ಅವರ ಪಾಲಿನ ಒಡವೆ-ವಸ್ತುಗಳನ್ನು ಕೊಟ್ಟಿದ್ದೇವೆ ಇನ್ನು ಮುಂದೆ ತಬಸ್ಸುಮ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಆಕೆಯ ಅತ್ತೆ-ಮಾವ ಸಂಪರ್ಕ ಕಡಿದುಕೊಂಡಿದ್ದಾರೆ. ಕೊನೆಗೆ ಗ್ರಾಮ ಪಂಚಾಯಿತಿ ಕೂಡ ತಬಸ್ಸುಮ್ ಮತ್ತು ಉಮರ್ ಒಟ್ಟಿಗೆ ಜೀವನ ನಡೆಸುವ ನಿರ್ಧಾರಕ್ಕೆ ಸಾಮಾಜಿಕ ಒಪ್ಪಿಗೆ ನೀಡಿದೆ,(ಏಜೆನ್ಸೀಸ್​).