ಅಮ್ಮ-ಮಗಳ ಸಾವು ಪ್ರಕರಣದಲ್ಲಿ ಸ್ಫೋಟಕ ಸಂಗತಿ ಬಯಲು
ತಿರುವನಂತಪುರಂ: ಕೇರಳದ ಕಮಲೇಶ್ವರಂನಲ್ಲಿ ಡೆತ್ನೋಟ್ ಬರೆದಿಟ್ಟು ತಾಯಿ ಮತ್ತು ಮಗಳ ಆತ್ಮಹತ್ಯೆ ( Mother and Daughter Death Case ) ಮಾಡಿಕೊಂಡ ಪ್ರಕರಣದಲ್ಲಿ ಆರೋಪಿ ಉನ್ನಿಕೃಷ್ಣನ್ ವಿರುದ್ಧ ನಿರ್ಣಾಯಕ ಸಾಕ್ಷ್ಯಗಳು ಇದೀಗ ಲಭ್ಯವಾಗಿದೆ.
ಉನ್ನಿಕೃಷ್ಣನ್ಗೆ ತನ್ನ ಪುರುಷ ಸ್ನೇಹಿತರ ಮೇಲೆ ಲೈಂಗಿಕ ಆಸಕ್ತಿ ಹೊಂದಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಅನೇಕ ಅಂತಾರಾಷ್ಟ್ರೀಯ ಸಲಿಂಗಕಾಮಿ ಗುಂಪುಗಳ ಸದಸ್ಯರು ಸಹ ಆಗಿದ್ದರು. ಉನ್ನಿಕೃಷ್ಣನ್ ಅವರ ಫೋನ್ ಪರಿಶೀಲಿಸಿದಾಗ ಈ ನಿರ್ಣಾಯಕ ಮಾಹಿತಿ ಸಿಕ್ಕಿದೆ.
ಅಂದಹಾಗೆ, ಗ್ರೀಮಾ ಮತ್ತು ಅವರ ತಾಯಿ ಸುನಿತಾ ಬುಧವಾರ ಕಮಲೇಶ್ವಂನ ಮನೆಯಲ್ಲಿ ಶವವಾಗಿ ಪತ್ತೆಯಾದರು. ಇಬ್ಬರೂ ಸಹಿ ಮಾಡಿದ ಡೆತ್ನೋಟ್ ಅನ್ನು ತಮ್ಮ ಸಂಬಂಧಿಕರಿಗೆ ಕಳುಹಿಸಿ ಸಾವಿಗೆ ಶರಣಾಗಿದ್ದಾರೆ.
ಡೆತ್ನೋಟ್ನಲ್ಲಿ ತಮ್ಮ ಸಾವಿಗೆ ಉನ್ನಿಕೃಷ್ಣನ್ ಕಾರಣ ಎಂದು ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಎರಡು ದಿನಗಳ ಹಿಂದಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಉನ್ನಿಕೃಷ್ಣನ್ನನ್ನು ಬಂಧಿಸಲಾಯಿತು.
ಅಂದಹಾಗೆ, ಗ್ರೀಮಾ ಮತ್ತು ಉನ್ನಿಕೃಷ್ಣನ್ ಆರು ವರ್ಷಗಳ ಹಿಂದೆ ವಿವಾಹವಾದರು. ಮದುವೆಯಾದ ಬಳಿಕ ಕೇವಲ 54 ದಿನಗಳ ಕಾಲ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು. ಈ ಸಮಯದಲ್ಲಿ, ಉನ್ನಿಕೃಷ್ಣನ್ ಗ್ರೀಮಾ ಅವರ ಮನೆಯಲ್ಲಿ ಕೇವಲ ಒಂದು ದಿನ ಮಾತ್ರ ಇದ್ದರು, (ಏಜೆನ್ಸೀಸ್).