ದೇಶ

ಎಣ್ಣೆ ಅಂಗಡಿಗೆ ನುಗ್ಗಿ ಮಂಗಣ್ಣನ ಹಾವಳಿ; ಕ್ವಾಟ್ರು ಖಾಲಿ ಮಾಡಿ ಫುಲ್ ಟೈಟ್, ಮಾಲೀಕನ ಗೋಳು ಕೇಳೋರಿಲ್ಲ!..Ranchi

  • ಎಣ್ಣೆ ಮತ್ತಲ್ಲಿ ಮಂಗಣ್ಣನ ರಂಪಾಟ, ಅಂಗಡಿ ಮಾಲಿಕ ಸುಸ್ತೋ ಸುಸ್ತು.

  • ರಾಂಚಿಯ ಮದ್ಯದಂಗಡಿಗೆ ನುಗ್ಗಿ ಮದ್ಯ ಸೇವಿಸಿದ ಗರ್ಭಿಣಿ ಮಂಗ.

  • ಪ್ರಾಣಿ ಸಂರಕ್ಷಣಾಲದಿಂದ ಮಂಗನ ರಕ್ಷಣೆ, ಸೂಕ್ತ ಚಿಕಿತ್ಸೆ ಪೂರೈಕೆ.

Monkey enters liquor shop in Ranchi: ಜಾರ್ಖಂಡ್​​ನ ರಾಂಚಿಯಲ್ಲಿ ಹೆಣ್ಣು ಮಂಗವೊಂದು ಕುತ್ತಿಗೆ ತನಕ ಎಣ್ಣೆ ಕುಡಿದು, ನಶೆಯೇರಿಸಿಕೊಂಡು ಮದ್ಯದ ಮಳಿಗೆಯಲ್ಲಿ ಮಾಲೀಕರಿಗೆ ಕ್ವಾಟ್ಲೆ ಕೊಟ್ಟ ವಿಡಿಯೋ ಎಕ್ಸ್​ನಲ್ಲಿ ವೈರಲ್ ಆಗ್ತಿದೆ. ಕೆಲ ನೆಟ್ಟಿಗರು ಗರ್ಭಿಣಿ ಮಂಗಕ್ಕೆ ಸಮಸ್ಯೆಯಾಗಬಹುದು ಎಂದು ಬೇಸರ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಈ ಪ್ರಸಂಗವನ್ನು ಕಾಮಿಡಿಯಾಗಿ ತೆಗೆದುಕೊಂಡು ಕಾಮೆಂಟ್ಸ್ ಮಾಡುತ್ತಿದ್ದಾರೆ.

ರಾಂಚಿಯ ಒರಮಾಂಝಿಯಲ್ಲಿನ ಬ್ಲಾಕ್​ ಚೌಕ್​ನಲ್ಲಿರುವ ವೈನ್​ ಶಾಪ್​ಗೆ ಶುಕ್ರವಾರ ಸಂಜೆ ಆಹಾರಕ್ಕೆಂದು 7 ಗಂಟೆಗೆ ತೆರಳಿದ ಮಂಗವು. ಅಂಗಡಿಗೆ ನುಗ್ಗಿದೆ. ಅಲ್ಲಿರುವ ಮಾಲೀಕರು ಸಹ ಅದರಿಂದ ಅಪಾಯ ಕಾಡುವ ಭಯದಲ್ಲಿ ಅದನ್ನು ತಡೆಯಲಿಲ್ಲ. ಹೀಗೆ ಬಂದ ಮಂಗವು ಮ್ಯಾಜಿಕ್​ ಮೊಮೆಂಟ್ಸ್​​ ಎನ್ನುವ ಮದ್ಯವನ್ನು ಕುಡಿದಿದೆ. ತೀವ್ರ ನಶೆಯೇರಿದ ಕಾರಣ ಅಂಗಡಿಯಲ್ಲಿದ್ದ ಶೇಖರಣಾ ಬಾಕ್ಸ್​ ಮೇಲೆ ಸುಸ್ತಾಗಿ ಮಲಗಿದ ದೃಶ್ಯಗಳು ಎಕ್ಸ್​ನಲ್ಲಿನ ವೈರಲ್ ವಿಡಿಯೋದಲ್ಲಿ ಇದೆ.

ನಶೆಯಲ್ಲಿ ರಂಪಾಟ

ಮಂಗನಿಗೆ ಎಣ್ಣೆ ಕುಡಿದ ಮತ್ತು ಏರುತ್ತಿದ್ದಂತೆ ಎಚ್ಚರಗೊಂಡ ಕೋತಿ ಅಂಗಡಿಯ ತುಂಬೆಲ್ಲ ಅಡ್ಡಾಡಿ ರಂಪಾಟ ಮಾಡಿದೆ. ಬೆಲೆ ಬಾಳುವ ಮದ್ಯದ ಬಾಟಲಿಯನ್ನು ಕೆಳಕ್ಕೆ ಬೀಳಿಸಿ ನಾಶ ಮಾಡಿದೆ. ಅದನ್ನು ಹೊರ ಹಾಕಲು ಮಾಲೀಕ ಎಷ್ಟೇ ಪ್ರಯತ್ನಿಸಿದರೂ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಮದ್ಯ ಕೊಂಡುಕೊಳ್ಳಲು ಬಂದಿದ್ದ ಗ್ರಾಹಕರಲ್ಲಿ ಕೆಲಕಾಲ ಆತಂಕದ ವಾತಾವರಣ ಮನೆ ಮಾಡಿತ್ತು.

ಕೋತಿಯ ಕ್ವಾಟ್ಲೆ ತಡೆಯಲಾಗದ ಮಾಲೀಕ ಮತ್ತು ಸ್ಥಳೀಯರು ಒರಮಾಂಝಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಮುಂಡಾ ಜೈವಿಕ ಉದ್ಯಾನದ ಪ್ರಾಣಿ ಸಂರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಗಿದೆ. ಆ ಕೂಡಲೇ ಸ್ಥಳಕ್ಕೆ ಸಿಬ್ಬಂದಿ ಕೋತಿಯನ್ನು ಸುರಕ್ಷಿತವಾಗಿ ಉದ್ಯಾನಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕೋತಿಯ ಈ ಪರಿಯ ರಂಪಾಟ ವೈರಲ್ ಆಗಿದೆ.

ನೆಟ್ಟಿಗರು ಏನಂದ್ರು?

ರಾಕ್‌ಸ್ಟಾರ್ ಅಮಿತ್ ಎಂಬುವವರು ಪೋಸ್ಟ್ ಮಾಡಿದ್ದು, ಮಾಂಕೇಶ್ ಭಾಯ್ ಫುಲ್ ಪಾರ್ಟಿ ಮೂಡ್​​ನಲ್ಲಿದ್ದಾರೆ. ಪಾರ್ಟಿ ಮುಗಿದಿದೆ, ದಯವಿಟ್ಟು ಡಿಸ್ಟರ್ಬ್ ಮಾಡಬೇಡಿ. ಈ ಕೋತಿಗೆ ತುಂಬಾ ಬಾಯಾರಿಕೆಯಾಗಿತ್ತು, ಅದು ಮದ್ಯದ ಅಂಗಡಿಯೊಳಗೆ ನಡೆದು, ಒಂದು ಬಾಟಲಿಯನ್ನು ಒಡೆದು, ಅರ್ಧ ಬಾಟಲಿ ಮದ್ಯ ಕುಡಿದಿದೆ. ನಂತರ ಸುಸ್ತಾಗಿಅಂಗಡಿಯೊಳಗೆ ಆರಾಮವಾಗಿ ನಿದ್ರೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ,( ಏಜೆನ್ಸೀಸ್).