ಲಖನೌ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಅಜಂ ಖಾನ್ ಅವರನ್ನು ಗಾಜಿಯಾಬಾದ್‌ನ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಭಾನುವಾರ(ನ. 01) 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದ ವರದಿಯಾಗಿದೆ.
ಪ್ಯಾನ್ ಕಾರ್ಡ್ ವಂಚನೆ ಪ್ರಕರಣದಲ್ಲಿ 11 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ಬಳಿಕ ನಿನ್ನೆ (ಅ. 31) ರಾತ್ರಿ ಜಾಮೀನಿನ ಮೇಲೆ ರಾಂಪುರ ಜೈಲಿನಿಂದ ಹೊರ ಬರುತ್ತಿದ್ದಂತೆ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿತ್ತು.
ಜಾರಿ ನಿರ್ದೇಶನಾಲಯ (ED) ಬೆಳಿಗ್ಗೆ 10.30 ರ ಸುಮಾರಿಗೆ ಬಿಗಿ ಭದ್ರತೆಯ ನಡುವೆ ವಿಶೇಷ ನ್ಯಾಯಾಧೀಶ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಅವನೀಶ್ ಕುಮಾರ್ ಪಾಂಡೆ ಅವರ ಮುಂದೆ ಅಜಂ ಖಾನ್ ಅವರನ್ನು ಹಾಜರುಪಡಿಸಿತು. ಸುಮಾರು 90 ನಿಮಿಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ನಂತರ ನ್ಯಾಯಾಲಯವು ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತು.
ಶನಿವಾರ ರಾತ್ರಿ ಅಜಂ ಖಾನ್ ಬಿಡುಗಡೆಗೆ ಸುಮಾರು 15 ನಿಮಿಷಗಳ ಮೊದಲು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ಬಿಗಿ ಭದ್ರತೆಯ ನಡುವೆ ಜೈಲಿನ ಆವರಣಕ್ಕೆ ಪ್ರವೇಶಿಸಿತ್ತು. ಮತ್ತು ಜೈಲಿನ ಹೊರಗೆ 24 CRPF ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ.
ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಖಾನ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾದಾಗ ಅಧಿಕಾರಿಗಳು ಮತ್ತು ಅವರ ಸ್ವಲ್ಪ ಸಮಯದವರೆಗೆ ಬಿಸಿ ವಾಗ್ವಾದ ನಡೆಯಿತು. ಮತ್ತು ಬೆಂಬಲಿಗರು-ಅಧಿಕಾರಿಗಳ ನಡುವೆ ತಳ್ಳಾಟ ನಡೆದಿದೆ.
ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಖಾನ್ ಮತ್ತು ಅಬ್ದುಲ್ಲಾ ಅವರಿಗೆ ವಿಧಿಸಲಾದ 10 ವರ್ಷಗಳ ಜೈಲು ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಅಮಾನತುಗೊಳಿಸಿತ್ತು. ಮತ್ತು ಅಕ್ಟೋಬರ್ 29ರಂದು ಇಬ್ಬರಿಗೂ ಜಾಮೀನು ನೀಡಿತ್ತು. ಇತ್ತ ಜೈಲಿನಿಂದ ಹೊರ ಬರುತ್ತಿದ್ದಂತೆ ಜೌಹರ್ ವಿಶ್ವವಿದ್ಯಾಲಯದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅವರನ್ನು ಬಂಧಿಸಿದೆ.
ರಾಂಪುರದಲ್ಲಿ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ 416.14 ಕೋಟಿ ರೂಪಾಯಿಗಳನ್ನು ವಿವರಿಸಲಾಗದಂತೆ ಖರ್ಚು ಮಾಡಿರುವ ಆರೋಪದ ಮೇಲೆ ಎಸ್‌ಪಿ ನಾಯಕನನ್ನು ಜೈಲಿನಲ್ಲಿ ದೀರ್ಘಕಾಲ ವಿಚಾರಣೆ ನಡೆಸಿದ ನಂತರ, ಅಕ್ಟೋಬರ್ 14 ರಂದು ಇಡಿ ಖಾನ್, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದೆ (ಏಜೆನ್ಸೀಸ್).