ಅಮಿತಾಭ್ ಜುಂಜುನ್ವಾಲಾ 
ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ; ರಿಲಯನ್ಸ್ ಗ್ರೂಪ್​ನ ಮಾಜಿ ಅಧಿಕಾರಿಗಳಾದ ಜುಂಜುನ್ವಾಲಾ, ಬಾಪ್ನಾರನ್ನು ಬಂಧಿಸಿದ ಇಡಿ | ED arrests

ಮುಂಬೈ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್(RHFL) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್(RCFL) ನಿಂದ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಗ್ರೂಪ್(ADAG)ನ ಮಾಜಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮಿತಾಭ್ ಜುಂಜುನ್ವಾಲಾ ಮತ್ತು ಅಮಿತ್ ಬಾಪ್ನಾ ಅವರನ್ನು ಜಾರಿ ನಿರ್ದೇಶನಾಲಯ (ED) ಬುಧವಾರ(ಏ. 15) ಬಂಧಿಸಿದೆ ಎಂದು ವರದಿಯಾಗಿದೆ.
ಅಮಿತಾಬ್ ಜುಂಜುನ್ವಾಲಾ ಈ ಹಿಂದೆ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ರಿಲಯನ್ಸ್ ಕ್ಯಾಪಿಟಲ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಮಿತ್ ಬಾಪ್ನಾ ಕೂಡ 2008 ಮತ್ತು 2020ರ ನಡುವೆ ರಿಲಯನ್ಸ್ ಕ್ಯಾಪಿಟಲ್‌ನ ಸಿಎಫ್‌ಒ ಮತ್ತು ಸಿಒಒ ಆಗಿ ಸೇವೆ ಸಲ್ಲಿಸಿದ್ದಾರೆ.
ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ಗೆ ಸಂಬಂಧಿಸಿದ ಶೆಲ್ ಸಂಸ್ಥೆಗಳ ಮೂಲಕ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪ ಕೇಳಿ ಬಂದಿದ್ದು, ಸಿಬಿಐ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇನ್ನೂ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಪಿಎಂಎಲ್‌ಎ ಅಡಿ ಇಬ್ಬರನ್ನು ಬಂಧಿಸಿ ದೆಹಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ ಎನ್ನಲಾಗಿದೆ.
ಇನ್ನೂ ಅನಿಲ್ ಅಂಬಾನಿಯವರ ವಕ್ತಾರರು, ದುಬೈ ಮತ್ತು ಸಿಂಗಾಪುರದಲ್ಲಿ ಕಾರ್ಯಾಚರಣೆಗಳೊಂದಿಗೆ ನಿಧಿ ವ್ಯವಸ್ಥಾಪಕರಾಗಿರುವ ಜುನ್‌ಜುನ್‌ವಾಲಾ ಅವರು ಇನ್ನು ಮುಂದೆ ರಿಲಯನ್ಸ್ ಎಡಿಎಜಿ ಜೊತೆ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಮಾ. 19 & 20ರಂದು ಅನಿಲ್ ಅಂಬಾನಿಯವರನ್ನು ಸಿಬಿಐ ವಿಚಾರಣೆ ನಡೆಸುವ ಮೊದಲು ಸಿಬಿಐ ಜುನ್‌ಜುನ್‌ವಾಲಾ ಅವರನ್ನು ಮೂರು ದಿನಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತ್ತು.
ಇನ್ನೂ ಇಡಿ, ಇಬ್ಬರೂ ಆರೋಪಿಗಳು ಕಾರ್ಪೊರೇಟ್ ಸಾಲಗಳನ್ನು ಮಂಜೂರು ಮಾಡಿದ ಶೆಲ್ ಘಟಕಗಳ ಬಗ್ಗೆ ತಿಳಿದಿದ್ದರು. ನಿರ್ಹಣೆಯ ಅನುಮೋದನೆ ಮತ್ತು ಸಾಲಗಳ ಮಂಜೂರು ಮತ್ತು ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದೆ (ಏಜೆನ್ಸೀಸ್).