ಮೊನಾಲಿಸಾ ದಂಪತಿ 
ದೇಶ

ಇದು ಅಸಲಿ 'ಕೇರಳ ಸ್ಟೋರಿ' ಅಂದ್ರೆ! ಫರ್ಮಾನ್​ ಕೈಹಿಡಿದ ಮೊನಾಲಿಸಾಗೆ ಶಿಕ್ಷಣ ಸಚಿವ ಮೆಚ್ಚುಗೆ​

ಪ್ರಮುಖ ಮುಖ್ಯಾಂಶಗಳು

  • ವೈರಲ್​ ಬೆಡಗಿಯ ಮದುವೆಗೆ ಕೇರಳ ಪೊಲೀಸರ ಸರ್ಪಗಾವಲು
  • 6 ತಿಂಗಳ ಪ್ರೀತಿಯಲ್ಲಿ ಮೊನಾಲಿಸಾ-ಫರ್ಮಾನ್​ ಖಾನ್
  • ತಂದೆಯ ವಿರೋಧದ ನಡುವೆಯೂ ಪ್ರಿಯಕರನ ಕೈಹಿಡಿದ ಚಿತ್ರನಟಿ ಮೊನಾಲಿಸಾ
ಕೇರಳ: ಮಹಾಕುಂಭಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದ ಬೆಡಗಿ ಮೊನಾಲಿಸಾ ಬಹುಬೇಗನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ಮದುವೆ ಅಂದುಕೊಂಡಂತೆ ನಡೆಯದರೆ ಹೋದರೂ ದೊಡ್ಡ ವಿವಾದಕ್ಕೆ ಗುರಿಯಾಗಿರುವುದು ಅಕ್ಷರಶಃ ಸತ್ಯ. ಇದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.
ಕಳೆದ 6 ತಿಂಗಳೆ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯವಾದ ಮುಸ್ಸಿಂ ಸಮುದಾಯದ ಯುವಕ ಫರ್ಮಾನ್ ಖಾನ್​ ಜೊತೆ ಮೊನಾಲಿಸಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ತಂದೆಯ ವಿರೋಧದ ಬೆನ್ನಲ್ಲೇ ಕೇರಳಕ್ಕೆ ಶೂಟಿಂಗ್​ಗೆ ಹೋದ ಸಂದರ್ಭದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ವಿವಾಹವಾದರು. ಆ ಕ್ಷಣದಿಂದ ಕೇರಳದಲ್ಲಿ ಭಾರೀ ವಿವಾದ ಸೃಷ್ಟಿಯಾಗಿದ್ದು, ಕೆಲವೇ ಕೆಲ ರಾಜಕೀಯ ನಾಯಕರು ಮೊನಾಲಿಸಾ ಜೋಡಿಯನ್ನು ಹೊಗಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು, ಹೆತ್ತವರ ಮಾತು ಕೇಳದೆ, ಶೂಟಿಂಗ್​ಗಾಗಿ ಬಂದ ವೇಳೆಯೇ ಮದುವೆ ಆಗಿರುವುದು ಸರಿಯಲ್ಲ. ಇದು ಲವ್​ ಜಿಹಾದ್​ ಬಿಟ್ಟರೆ ನಿಜವಾದ ಪ್ರೀತಿಯಲ್ಲ ಎಂದಿದ್ದಾರೆ. ಇನ್ನೂ ಕೆಲವರು, ಮೊನಾಲಿಸಾ ಅಪ್ರಾಪ್ತೆ. ಆಕೆಯದ್ದು ಮದುವೆ ವಯಸ್ಸಲ್ಲ ಎಂದು ಹೇಳಿದ್ದಾರೆ. ಈ ನೆಗೆಟಿವ್​ಗಳ ನಡುವೆ ಕೇರಳದ ಶಿಕ್ಷಣ ಸಚಿವ ಶಿವಾನ್ ಕುಟ್ಟಿ ಮಾತನಾಡಿ, ಇದಲ್ಲವೇ ನಿಜವಾದ ಕೇರಳ ಸ್ಟೋರಿ? ನಾವು ಹೆಮ್ಮೆ ಪಡಬೇಕು. ಇವರಿಬ್ಬರ ಧೈರ್ಯವನ್ನು ಮೆಚ್ಚಬೇಕು ಎಂದರು.

ಕೇರಳನ ಸ್ವರ್ಗ ಅನ್ನೋದು ಇದಕ್ಕೆ...

ಇದು ಅಸಲಿ 'ಕೇರಳ ಸ್ಟೋರಿ'. ಮಹಾಕುಂಭಮೇಳದಲ್ಲಿ ವೈರಲ್​ ಆಗಿದ್ದ ಮೊನಾಲಿಸಾ ಈಗ ಮಾಡೆಲ್​ ಫರ್ಮಾನ್​ ಖಾನ್​ರನ್ನು ಮದುವೆಯಾಗಿದ್ದಾಳೆ. ಈ ಜೋಡಿ ಪೊಲೀಸರ ರಕ್ಷಣೆ ಕೋರಿದ್ದರು. ಕೇರಳ ಅಂತಧರ್ಮೀಯ ಪ್ರೇಮಿಗಳಿಗೆ ನಿಜಕ್ಕೂ ಸ್ವರ್ಗ ಎಂದು ಥಾಮಸ್ ಐಸಾಕ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).