Monalisa Bhosle Files POCSO Complaint
- ಕುಂಭಮೇಳದ ಮೂಲಕ ಪ್ರಸಿದ್ಧಿಯಾದ ಯುವತಿಯಿಂದ ದೂರು.
- ಅಪ್ರಾಪ್ತೆಯಾಗಿದ್ದಾಗ ಲೈಂಗಿಕ ಕಿರುಕುಳ ನೀಡಿದ ಆರೋಪ.
- ಸಿನಿಮಾ ಅವಕಾಶದ ಹೆಸರಿನಲ್ಲಿ ಶೋಷಣೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ.
ತಿರುವನಂತಪುರಂ: ದ ಡೈರಿ ಆಫ್ ಮಣಿಪುರ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವ ಆಮಿಷವೊಡ್ಡಿ ಸೆಟ್ನಲ್ಲಿ ಅನುಚಿತವಾಗಿ ಹತ್ತು ಬಾರಿ ಸ್ಪರ್ಶಿಸಿದ್ದಾರೆ ಎಂದು ನಿರ್ದೇಶಕ ಸುನೋಜ್ ಮಿಶ್ರಾ ವಿರುದ್ಧ ಕುಂಭಮೇಳದ ಕಣ್ಣಿನ ಹುಡುಗಿ ಮೊನಾಲಿಸಾ ಭೋಸ್ಲೆ(Monalisa Bhosle) ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕುಂಭಮೇಳದಲ್ಲಿ ಮೋಹಕ ಕಣ್ಣುಗಳಿಂದಲೇ ಫೇಮಸ್ ಆಗಿದ್ದ ಮೋನಾಲಿಸಾ ಕಳೆದ ಕೆಲ ದಿನಗಳಿಂದ ನಾನಾ ವಿವಾದಗಳಿಂದಲೇ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತನ್ನ ಪೋಷಕರ ವಿರೋಧದ ನಡುವೆ, ತನ್ನ ಗೆಳೆಯ ಫರ್ಮಾನ್ ಖಾನ್ ಜೊತೆ ಕೇರಳದ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಇದು ಲವ್ ಜಿಹಾದ್ ಎಂದು ಹಲವರು ಆರೋಪಿಸಿದ್ದರು. ಈ ವಿವಾದಗಳ ಬೆನ್ನಲ್ಲೇ ಮತ್ತೊಂದು ಆರೋಪವನ್ನು ಮುಂದಿಟ್ಟು ವೈರಲ್ ಆಗಿದ್ದಾರೆ.
ಇಷ್ಟೇ ಅಲ್ಲದೇ ಆಕೆಗೆ ಮದುವೆಯಾದ ಸಂದರ್ಭದಲ್ಲಿ ಆಕೆಗಿನ್ನು 16 ವರ್ಷ ಎಂದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದರಿಂದ, ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿದ್ದರು.
ಸಿನಿಮಾ ಸೆಟ್ನಲ್ಲೇ ಲೈಂಗಿಕ ಕಿರುಕುಳ
ದ ಡೈರಿ ಆಫ್ ಮಣಿಪುರ (The Diary of Manipur)ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ಅವರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮೊನಾಲಿಸಾ ಅವರು ಬುಧವಾರ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟು ಈ ಬಗ್ಗೆ ಮಾತನಾಡಿದ್ದಾರೆ.
ಜೊತೆಗೆ , ಗುರುವಾರ ಸಂಜೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದರು ಮತ್ತು ತಮ್ಮ ಗೌಪ್ಯ ಹೇಳಿಕೆಯನ್ನು ಸಲ್ಲಿಸಿದರು. ಆಪಾದಿತ ಘಟನೆ ಬೇರೆ ರಾಜ್ಯದಲ್ಲಿ ನಡೆದಿರುವುದರಿಂದ ಈ ಪ್ರಕರಣವನ್ನು ಮಧ್ಯಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಕುಂಭಮೇಳದ ವಿಡಿಯೋ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಈ ಯುವತಿಗೆ, ಸಿನಿಮಾ ರಂಗದಲ್ಲಿ ನಟಿಸುವ ಅವಕಾಶ ನೀಡುವುದಾಗಿ ನಿರ್ದೇಶಕ ಭರವಸೆ ನೀಡಿದ್ದ ಎನ್ನಲಾಗಿದೆ. ಈ ಸೋಗಿನಲ್ಲಿ ಆತ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ. ಕೊಚ್ಚಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಿರ್ದೇಶಕ ನನ್ನನ್ನು ಕನಿಷ್ಠ 10 ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಈ ಬಗ್ಗೆ ನಾನು ಮನೆಯವರಿಗೆ ತಿಳಿಸಿದಾಗ ಅವರು ನನಗೆ ಬೆಂಬಲ ನೀಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಯುವತಿಯ ದೂರಿನ ಮೇರೆಗೆ ಎರ್ನಾಕುಲಂ ಪೊಲೀಸರು ನಿರ್ದೇಶಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ರಹಸ್ಯ ಹೇಳಿಕೆಯನ್ನು (ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಯು ಕೇರಳದ ಹೊರಗೆ ನಡೆದಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, (ಏಜೆನ್ಸೀಸ್).