ಮುಂಬೈನಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 84 ರೂಪಾಯಿಗೆ ಏರಿಕೆ
- ಮುಂಬೈನಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 84 ರೂಪಾಯಿಗೆ ಏರಿಕೆ
- ಪ್ರಧಾನಿ ಹೇಳಿಕೆ ಬೆನ್ನಲೆ ಏರಿಕೆ ಕಂಡ ಸಿಎನ್‌ಜಿ
- ಆಟೋ ರಿಕ್ಷಾ ಬಾಡಿಗೆ ಹೆಚ್ಚಳ
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಬಳಕೆಯನ್ನು ಮಿತಗೊಳಿಸಿ, ವಿದೇಶ ಪ್ರಯಾಣವನ್ನು ಕಡಿತಗೊಳಿಸಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಬೆಲೆ ಮತ್ತೊಮ್ಮೆ ಏರಿಕೆ (CNG Price Hike) ಕಂಡಿದೆ.
ಪ್ರಧಾನಿಗಳು ಸಾಂಪ್ರದಾಯಿಕ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವಂತೆ ದೇಶದ ನಾಗರಿಕರಿಗೆ ಕೇಳಿಕೊಂಡ ಪರಿಣಾಮ, ಮುಂಬೈ ಮೆಟ್ರೋ ಪೊಲಿಟನ್ ರಿಜನ್, ಸಿಎನ್ಜಿಯ ಬೆಲೆಯನ್ನು ಮತ್ತೊಮ್ಮೆ ಏರಿಕೆ ಮಾಡಿ ಈಗ ಕೆಜಿ ಸಿಎನ್‌ಜಿ ಬೆಲೆ 84 ರೂಪಾಯಿ ತಲುಪಿದೆ.
ಬೆಲೆ ಏರಿಕೆ ಮಾಡಿರುವ ಮಹಾನಗರ್ ಗ್ಯಾಸ್ ಲಿಮಿಟೆಡ್ ಕಂಪನಿ ಮಾರುಕಟ್ಟೆಯಲ್ಲಿ ಸಿಎನ್ಜಿಯ ಬೇಡಿಕೆ ಅಧಿಕವಾಗುತ್ತಿರುವ ಕಾರಣ ಈ ಬೆಲೆ ಏರಿಕೆಯನ್ನು ಮಾಡಲಾಗಿದೆ ಎಂದು ತಿಳಿಸಿದೆ. ಹಾಗೆಯೇ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಅಂತ್ಯವಾಗದ ಹಿನ್ನಲೆ ಈ ಬೆಲೆ ಏರಿಕೆ ಮುಂದಿನ ದಿನಗಳಲ್ಲಿ ಸಹ ಮುಂದುರಿಯಲಿದೆ ಎಂದು ತಿಳಿಸಿದ್ದಾರೆ.
ಆಟೋ ಬಾಡಿಗೆ ಹೆಚ್ಚಳ ಸಾಧ್ಯತೆ!
ಸಿಎನ್‌ಜಿ ಬೆಲೆ ಏರಿಕೆಯಾಗುತ್ತಿದಂತೆ ಆಟೋ ರಿಕ್ಷಾ ಚಾಲಕರು ತಮ್ಮ ಬಾಡಿಗೆ ಬೆಲೆಯನ್ನು ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ. ನಾವು ದಿನದ ದುಡಿಮೆಯನ್ನು ನಂಬಿಕೊಂಡು ಬದುಕುವ ವರ್ಗವಾಗಿದ್ದೆವೆ. ಒಂದು ಕಡೆ ಪೆಟ್ರೋಲ್, ಡೀಸೆಲ್ ದೊರೆಯುತ್ತಿಲ್ಲ, ಇನ್ನೊಂದು ಕಡೆ ಸಿಎನ್‌ಜಿ ಬೆಲೆ ಕೂಡ ಏರಿಯಾದರೆ ನಾವು ಜೀವನ ಹೇಗೆ ನಡೆಸಬೇಕು? ಹೀಗಾಗಿ ನಾವು ಕೂಡ ಬಾಡಿಗೆ ಬೆಲೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆಟೋ ರಿಕ್ಷಾ ಯೂನಿಯನ್ ಅವರು ಹೇಳಿದ್ದಾರೆ, (ಏಜನ್ಸೀಸ್).