ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್  
ದೇಶ

2026ರ ಅಂತ್ಯದ ವೇಳೆಗೆ ಮೋದಿ ಪ್ರಧಾನಿ ಸ್ಥಾನದಿಂದ ಇಳಿಯುವ ಸಾಧ್ಯತೆ ಇದೆ: ಅರವಿಂದ್ ಕೇಜ್ರಿವಾಲ್ | Arvind Kejriwal

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರಾಬಲ್ಯ ಕುಸಿಯುತ್ತಿದ್ದು, 2026ರ ಅಂತ್ಯದ ವೇಳೆ ನರೇಂದ್ರ ಮೋದಿ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವಾಗಲ್ಲ, ಅವರು ಇಳಿಯುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಹೇಳಿದ್ದಾರೆ.
ಸೋಮವಾರ(ಮಾ. 23) ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ಬರೆದ 'ಅನ್ಲೈಕ್ಲಿ ಪ್ಯಾರಡೈಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನನ್ನ ಮನಸ್ಸು ಮತ್ತು ರಾಜಕೀಯ ತಿಳುವಳಿಕೆ 2026ರ ಅಂತ್ಯದ ಬಳಿಕ ಅವರು ಮೋದಿ ಪ್ರಧಾನಿಯಾಗಿರಲ್ಲ ಎಂದು ಅನ್ನಿಸುತ್ತಿದ್ದು, ದೇಶದಲ್ಲಿ ಮೋದಿ, ಶಾ ಆಡಳಿತ ಕೊನೆಯಾಗುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳ ಸಾರ್ವಜನಿಕ ಚರ್ಚೆಯಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಈ ಹಿಂದೆ ಸರ್ಕಾರದ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳನ್ನು ನಿಗ್ರಹಿಸುತ್ತಿತ್ತು. ಆದರೆ ಈಗ ಪ್ರಧಾನಿಯನ್ನು ಗುರಿಯಾಗಿಸಿ ನಕರಾತ್ಮಕ ಕಮೆಂಟ್ ಮತ್ತು ಮೀಮ್ಸ್​ಗಳು ವ್ಯಾಪಕವಾಗಿ ಬರುತ್ತಿವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಯಾವುದೋ ಒಬ್ಬ ವ್ಯಕ್ತಿ ಮೋದಿ ವಿರುದ್ಧ ಮೀಮ್​ಗಳನ್ನು ಮಾಡಿದ್ರೆ ಜೈಲಿಗೆ ಹಾಕಲಾಗುತ್ತಿತ್ತು. ಆದರೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿಯ ಟೀಕೆಗಳಿಂದ ತುಂಬಿದೆ. ಇದು ಅವರ ಜನಪ್ರಿಯತೆಯ ಕುಸಿತವನ್ನು ತೋರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ, ಆದರೆ ಅವರು ಇನ್ನೂ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಚುನಾವಣಾ ಆಯೋಗವೇ ಕಾರಣ ಎಂದು ಆರೋಪಿಸಿದ ಕೇಜ್ರಿವಾಲ್, ಚುನಾವಣೆಗಳನ್ನು ಭ್ರಷ್ಟಾಚಾರದ ಮೂಲಕ ಗೆಲ್ಲಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ತಮ್ಮದೇ ಉದಾಹರಣೆ ನೀಡಿರುವ ಕೇಜ್ರಿವಾಲ್, ಜೈಲಿಗೆ ಹೋಗುವ ಮೊದಲು ಅವರು ಸುಮಾರು 1.48 ಲಕ್ಷ ಮತಗಳನ್ನು ಪಡೆದು ಗೆದ್ದಿದ್ದೆ, ಆದರೆ ಜೈಲಿನಿಂದ ಬಿಡುಗಡೆಯಾದ ಬಳಿಕ ಸುಮಾರು 42 ಸಾವಿರ ಮತದಾರರನ್ನು ಪಟ್ಟಿಯಿಂದ ಅಳಿಸಲಾಯಿತು. ಅದರ ಪರಿಣಾಮವಾಗಿ ಸುಮಾರು 3 ಸಾವಿರ ಮತಗಳಿಂದ ಸೋಲಬೇಕಾಯಿತು ಎಂದಿದ್ದಾರೆ (ಏಜೆನ್ಸೀಸ್).