ಕೈಮಗ್ಗಕ್ಕೆ ಡಿಜಿಟಲ್ ಸ್ಪರ್ಶ ನೀಡಿದ ಪ್ರಧಾನಿ ಮೋದಿ
- ಕೈಮಗ್ಗಕ್ಕೆ ಡಿಜಿಟಲ್ ಸ್ಪರ್ಶ ನೀಡಿದ ಪ್ರಧಾನಿ ಮೋದಿ
- ಯುವಕರಿಗೆ 'GRWM' (Get Ready With Me) ವಿಡಿಯೋ ಮಾಡುವಂತೆ ಕರೆ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ನವದೆಹಲಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi on Handlooms) ಇಂದು (ಆ.6) ಮತ್ತೊಮ್ಮೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಈಗ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿದೆ.
ನಾಳೆ (ಶುಕ್ರವಾರ, ಆ.7) ರಾಷ್ಟ್ರೀಯ ಕೈಮಗ್ಗದ ದಿನವಾಗಿದ್ದು, ಈ ಕುರಿತು ಪ್ರಧಾನಿ ಮೋದಿ, ಕಳೆದವಾರ ನಾವು ಫ್ರೆಂಡ್ಶಿಫ್ ಡೇ ಯನ್ನು ಆಚರಿಸದ್ದೆವು, ನಾಳೆ ರಾಷ್ಟ್ರೀಯ ಕೈಮಗ್ಗದ ದಿನವಾಗಿದ್ದು, ಕೈಮಗ್ಗದ ವೈವಿಧ್ಯತೆಯನ್ನು ವಿಶ್ವದಾದ್ಯಂತ ಹಂಚಿಕೊಳ್ಳಲು ದೇಶದ ಯುವ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಗೆಟ್ ರೆಡಿ ವಿಡಿಯೋ ವಿಥ್ ಮೀ ಎಂದ ಮೋದಿ!
1905 ರ ಆಗಸ್ಟ್ 7 ರಂದು ಸ್ವದೇಶಿ ಆಂದೋಲನ ಆರಂಭವಾಯಿತು. ಇದು ಭಾರತದ ಸ್ವಾಭಿಮಾನಕ್ಕೆ ಅಡಿಪಾಯ ಹಾಕಿತು ಎಂದು ಮೋದಿ ಹೇಳಿದ್ದಾರೆ. ಈ ಸವಿ ನೆನಪಿಗಾಗಿ ನಾವು ದೇಶದಲ್ಲಿ ರಾಷ್ಟ್ರೀಯ ಕೈಮಗ್ಗದ ದಿನವನ್ನು ಆಚರಿಸುತ್ತೇವೆ.
ಸ್ವಾತಂತ್ರ ಹೋರಾಟದ ಸಮಯದಲ್ಲಿ ಅಂದು ಜನ ಕೈ ಜೋಡಿಸಿದ್ದರು. ಇಂದು ನನ್ನ ಈಯುವ ಸಮುದಾಯ ನನ್ನ ಜೊತೆ ಕೈ ಜೋಡಿಸಲಿದೆ ಎಂದು ನಾವು ಭಾವಿಸುತ್ತೇನೆ. ನಾಳೆ ಪ್ರತಿಯೊಬ್ಬ ಯುವಕರು ಕೈಮಗ್ಗದಿಂದ ತಯಾರಿಸಿದ ಬಟ್ಟೆಯನ್ನು ಧರಿಸಿ ಗೆಟ್ ರೆಡಿ ವಿಡಿಯೋ ವಿಥ್ ಮೀ
(GRWM) ಎಂಬ ಟ್ರೆಂಡ್ ಅನ್ನು ಮಾಡಿ, ವಿಡಿಯೋ ಹಂಚಿಕೊಂಡು, ನಮ್ಮ ಕೈಮಗ್ಗದ ಬಟ್ಟೆಯನ್ನು ವಿಶ್ವದಾದ್ಯಂತ ಖ್ಯಾತಿಗೊಳಿಸಬೇಕಾಗಿ ವಿನಂತಿ ಎಂದಿದ್ದಾರೆ,
(ಏಜನ್ಸೀಸ್).