ಉತ್ತರಪ್ರದೇಶ: ( monkey ) ಪತಿ ತನ್ನನ್ನು ತಮಾಷೆಗೆ 'ಕೋತಿ' ಎಂದು ಕರೆದಿದ್ದಕ್ಕಾಗಿ ಮನನೊಂದ 24 ವರ್ಷದ ಮಾಡೆಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ತನ್ನು ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ವೃತ್ತಿಯಲ್ಲಿ ಮಾಡೆಲ್ ಆಗಿದ್ದರು. ಇವರು ರಾಹುಲ್ ಸಿಂಗ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆಕೆಯ ಪತಿ ಮಾಡಿದ ತಮಾಷೆಯ ಹೇಳಿಕೆಯಿಂದ ಆಕೆ ಮಾನಸಿಕವಾಗಿ ಆಘಾತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ನಡೆದಿದ್ದೇನು?
ತನ್ನು ಸಿಂಗ್ ತನ್ನ ಪತಿ ರಾಹುಲ್ ಜೊತೆ ಇಂದಿರಾನಗರ ಸೆಕ್ಟರ್ 14 ರಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಮಾಡೆಲಿಂಗ್ ಜಗತ್ತಿನಲ್ಲಿ ಸಕ್ರಿಯರಾಗಿದ್ದ ತನ್ನು ತನ್ನ ಇಮೇಜ್ ಮತ್ತು ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದರು. ಬುಧವಾರ, ಇಡೀ ಕುಟುಂಬವು ಸೀತಾಪುರ ಜಿಲ್ಲೆಯ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.
ಸಂಜೆ ಹಿಂದಿರುಗಿದ ನಂತರ, ಎಲ್ಲರೂ ಮನೆಯಲ್ಲಿ ಸಂತೋಷದಿಂದ ಇದ್ದರು. ಈ ಮಧ್ಯೆ, ಕುಟುಂಬದ ವಾತಾವರಣದಲ್ಲಿ ರಾಹುಲ್ ತನ್ನುಳನ್ನು "ಮಂಗ" ಎಂದು ಕರೆಯುವ ಮೂಲಕ ಕೀಟಲೆ ಮಾಡಿದನು. ಇದರಿಂದ ತನ್ನು ತುಂಬಾ ಮನನೊಂದಿದ್ದಳು.
ಪತಿ ರಾಹುಲ್ ಸಿಂಗ್ ತನ್ನ ಪತ್ನಿ ಶೈಲಿಯನ್ನು ತಮಾಷೆಗಾಗಿ "ಕೋತಿ" (Monkey) ಎಂದು ಕರೆದಿದ್ದ. ಈ ಸಣ್ಣ ವಿಚಾರ ಪತಿ-ಪತ್ನಿಯ ನಡುವೆ ದೊಡ್ಡ ಜಗಳಕ್ಕೆ ಕಾರಣವಾಯಿತು. ಜಗಳದ ನಂತರ ತನ್ನು ಸಿಂಗ್ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ನಂತರ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತಳ ಕುಟುಂಬದವರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ವರದಕ್ಷಿಣೆ ಕಿರುಕುಳ ಅಥವಾ ಬೇರೆ ಯಾವುದಾದರೂ ಕಾರಣವಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಪತಿ ರಾಹುಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.