MLA Rais Sheikh | ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್​ಗೆ ಪತ್ರ ಬರೆದಿರುವ ಶಾಸಕ ರೈಸ್ ಶೇಖ್ 
ದೇಶ

ಪಕ್ಷದ ಏಕತೆಗೆ ಅಧ್ಯಕ್ಷನೇ ಕಂಟಕವೆಂದು ಎಸ್​ಪಿ ಶಾಸಕ ರೈಸ್ ಶೇಖ್ ಗಂಭೀರ ಆರೋಪ! | MLA Rais Sheikh

ಮುಂಬೈ: ಪುರಸಭೆ ಚುನಾವಣೆಗೂ ಮುನ್ನವೇ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದಲ್ಲಿ ಅಸಮಧಾನ ಬುಗಿಲೆದ್ದಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್​ಗೆ ಪತ್ರ ಬರೆದಿರುವ ಶಾಸಕ ರೈಸ್ ಶೇಖ್, ರಾಜ್ಯ ಅಧ್ಯಕ್ಷ ಅಬು ಅಜ್ಮಿ ವರ್ತನೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಅಧ್ಯಕ್ಷ ಅಜ್ಮಿ ಉದ್ದೇಶಪೂರ್ವಕವಾಗಿ ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಪಕ್ಷದೊಳಗೆ ಅಡಚಣೆ ಉಂಟುಮಾಡುತ್ತಿದ್ದಾರೆ, ಭಿವಂಡಿ ಮತ್ತು ಮುಂಬೈನಲ್ಲಿ ಮುಂಬರುವ ಪುರಸಭೆ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂದು ಶೇಖ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಜ್ಮಿ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಹಿತಾಸಕ್ತಿಗಳನ್ನು ಕಡೆಗಣಿಸಿದ್ದಾರೆ, ಇದು ಪಕ್ಷದ ಸದಸ್ಯರಲ್ಲಿ ಅಸಮಧಾನವನ್ನುಂಟು ಮಾಡುತ್ತಿದ್ದು, ಪಕ್ಷದ ಭವಿಷ್ಯವನ್ನೇ ದುರ್ಬಲಗೊಳಿಸುತ್ತಿದೆ ಎಂದು ಶೇಖ್ ಆರೋಪಿಸಿದ್ದಾರೆ. ಅಜ್ಮಿಯವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಹೊಣೆಗಾರಿಕೆಯಿಲ್ಲದೆ ಬೆಳೆಯುತ್ತಿರುವ ದುರಹಂಕಾರ ಮತ್ತು ಅಧಿಕಾರದ ದುರುಪಯೋಗ ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷದೊಳಗಿನ ಏಕತೆ ಮತ್ತು ಶಿಸ್ತಿಗೆ ಹಾನಿಕಾರಕವಾಗಿದೆ ಎಂದಿದ್ದಾರೆ.

ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ

ಅಬು ಅಜ್ಮಿ ತಮ್ಮ ಕಾರ್ಯಗಳು ಮತ್ತು ಹೇಳಿಕೆಗಳ ಕುರಿತು ತಕ್ಷಣ ಸ್ಪಷ್ಟೀಕರಣ ನೀಡಬೇಕೆಂದು ರಾಯಿಸ್ ಶೇಖ್ ಒತ್ತಾಯಿಸಿದ್ದಾರೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಶೇಖ್ ರಾಷ್ಟ್ರೀಯ ಅಧ್ಯಕ್ಷ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್​ರನ್ನು ಒತ್ತಾಯಿಸಿದ್ದಾರೆ. "
ಪಕ್ಷವು ಇಂತಹ ದುಷ್ಕೃತ್ಯಗಳನ್ನು ನಿಯಂತ್ರಿಸದೆ ಹೋಗಲು ಬಿಡುವುದಿಲ್ಲ, ಏಕೆಂದರೆ ಇದು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸಬಹುದು ಎಂದು ಬರೆದಿದ್ದಾರೆ(ಏಜೆನ್ಸೀಸ್​).