Necklace 
ದೇಶ

ವಾಕಿಂಗ್​ಗೆ ತೆರಳಿದ್ದ ವೃದ್ಧೆ ನಾಪತ್ತೆ! ನೆಕ್ಲೇಸ್‌ನಲ್ಲಿ ಅಳವಡಿಸಿದ್ದ GPS ಮೂಲಕ ಪತ್ತೆ.. | Necklace

ಪ್ರಮುಖ ಮುಖ್ಯಾಂಶಗಳು

  • ಮುಂಬೈನಲ್ಲಿ ವಾಕಿಂಗ್​ಗೆ ತೆರಳಿದ್ದ 79 ವರ್ಷದ ಮಹಿಳೆ ನಾಪತ್ತೆಯಾಗಿದ ಘಟನೆ
  • ಮೊಮ್ಮಗ ಅಜ್ಜಿಯ ನೆಕ್ಲೇಸ್‌ನಲ್ಲಿ ಅಳವಡಿಸಿದ್ದ GPS ಡಿವೈಸ್​ನಿಂದ ಪತ್ತೆ ಮಾಡಿದ್ದಾರೆ
ಮುಂಬೈ:ವಾಕಿಂಗ್​ಗೆ ತೆರಳಿದ್ದ 79 ವರ್ಷದ ಮಹಿಳೆ ನಾಪತ್ತೆಯಾಗಿದ ಬಳಿಕ ನೆಕ್ಲೇಸ್‌ನಲ್ಲಿದ್ದ(Necklace) GPS ಮೂಲಕ ವೃದ್ಧೆಯನ್ನು ಪತ್ತೆ ಮಾಡಿದ ಘಟನೆ ಸೌತ್ ಮುಂಬೈನ ಸೀವ್ರಿ ಪ್ರದೇಶದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಹೌದು, ಮುಂಬೈನ ಸೀವ್ರಿ ಪ್ರದೇಶದಲ್ಲಿ ಇದೇ ಡಿಸೆಂಬರ್ 3 ರಂದು ಸಂಜೆ ವಾಕಿಂಗ್​ಗೆ ಹೊರಟಿದ್ದ 79 ವರ್ಷದ ಸೈರಾ ಬೀ ತಜುದ್ದೀನ್ ಮುಲ್ಲಾ ಅವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಮನೆಗೆ ಹಿಂತಿರುಗದ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡಿದ್ದರು.
ಆದರೆ, ಅವರ ಮೊಮ್ಮಗ ಮೊಹಮ್ಮದ್ ವಸೀಮ್ ಅಯ್ಯುಬ್ ಮುಲ್ಲಾ ಅವರು ಅವರ ನೆಕ್ಲೇಸ್‌ನಲ್ಲಿ ರಹಸ್ಯವಾಗಿ ಅಳವಡಿಸಿದ್ದ GPS ಟ್ರ್ಯಾಕರ್ ಅನ್ನು ಸಕ್ರಿಯಗೊಳಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾಳೆ. ಮೊಮ್ಮಗ ವಸೀಮ್ ಅವರು ನೆಕ್ಲೇಸ್‌ನಲ್ಲಿರುವ GPS ಡಿವೈಸ್ ಅನ್ನು ಆನ್ ಮಾಡಿ, ಸ್ಥಳವನ್ನು ಟ್ರ್ಯಾಕ್ ಮಾಡಿದ್ದಾರೆ. ಇದು ಮನೆಯಿಂದ ಕೇವಲ 5 ಕಿ.ಮೀ ದೂರದ ಆಸ್ಪತ್ರೆಯನ್ನು ಸೂಚಿಸಿದೆ.

ಆಗಿದ್ದೇನು..?

ಮಹಿಳೆ ವಾಕಿಂಗ್​​ ಮಾಡುತ್ತಿರುವಾಗ ಈ ವೇಳೆ ದ್ವಿಚಕ್ರ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ನಂತರ ಯಾರು ದಾರಿಯಲ್ಲಿ ಹೋಗುತ್ತಿದ್ದವರು ಅವರನ್ನು ರಕ್ಷಿಸಿ ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಹಿತಿಮ ತಿಳಿದ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ತಲೆಗೆ ಗಾಯವಾಗಿದ್ದ ಮುಲ್ಲಾ ಅವರನ್ನು ಜೆಜೆ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್​).