ಘಟನೆಯ ಸ್ಥಳ 
ದೇಶ

ರಷ್ಯಾದ ಕ್ರೈಮಿಯಾದಲ್ಲಿ ಮಿಲಿಟರಿ ವಿಮಾನ ಪತನ; ಆರು ಸಿಬ್ಬಂದಿ ಸೇರಿ 29 ಮಂದಿ ಸಾವು | plane crashes

ಮಾಸ್ಕೋ: ರಷ್ಯಾ ಕ್ರೈಮಿಯಾದಲ್ಲಿ ಮಂಗಳವಾರ(ಮಾ. 31) ಸಂಜೆ 6 ಗಂಟೆ ಸುಮಾರಿಗೆ ಮಿಲಿಟರಿ ವಿಮಾನವೊಂದು ಪತನಗೊಂಡಿದ್ದು(plane crashes), ವಿಮಾನದ ಆರು ಸಿಬ್ಬಂದಿ ಸೇರಿ 29 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆಂಟೊನೊವ್ ಆನ್ -26 ವಿಮಾನವು ಮಂಗಳವಾರ ಸಂಜೆ 6 ಗಂಟೆಗೆ ಕ್ರಿಮಿಯನ್ ಪರ್ಯಾಯ ದ್ವೀಪದ ಮೇಲೆ ಹಾರುತ್ತಿತ್ತು. ಅದೇ ಸಮಯದಲ್ಲಿ ವಿಮಾನದೊಂದಿಗಿನ ರಾಡಾರ್ ಸಂಪರ್ಕ ಕಡಿತಗೊಂಡಿದ್ದು, ವಿಮಾನವು ಪರ್ವತಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ರಷ್ಯಾದ ರಕ್ಷಣಾ ಸಚಿವಾಲಯಮ, ಘಟನೆಯಲ್ಲಿ ವಿಮಾನದಲ್ಲಿ ಎಲ್ಲಾ 23 ಸೈನಿಕರು ಮತ್ತು ಆರು ವಿಮಾನ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ವಿಮಾನದ ಮೇಲೆ ದಾಳಿ ನಡೆಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಪಘಾತದ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ಅಪಘಾತಕ್ಕೀಡಾದ ಆಂಟೊನೊವ್ ಆನ್-26 ವಿಮಾನಗಳನ್ನು 1960ರ ದಶಕದ ಉತ್ತರಾರ್ಧದಲ್ಲಿ ಪರಿಚಯಿಸಲಾಯಿತು. ಅವುಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಮತ್ತು ಸರಕು ಸಾಗಣೆಗೆ ಬಳಸಲಾಗುತ್ತದೆ. ಆದಾಗ್ಯೂ, ಈ ಮಾದರಿಯ ವಿಮಾನಗಳು ಕಳೆದ ಕೆಲವು ವರ್ಷಗಳಲ್ಲಿ ಅಪಘಾತಕ್ಕೀಡಾದ ಪ್ರಕರಣಗಳು ಹೆಚ್ಚಾಗಿವೆ (ಏಜೆನ್ಸೀಸ್).