ಸಾಂದರ್ಭಿಕ ಚಿತ್ರ 
ದೇಶ

ಜಮ್ಮು- ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ; ಅಂಡಮಾನ್ ನಿಕೋಬಾರ್​ನಲ್ಲೂ ಕಂಪಿಸಿದ ಭೂಮಿ | Earthquake

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು(ಫೆ. 02) ಬೆಳ್ಳಂಬೆಳಗ್ಗೆ ಲಘು ಭೂಕಂಪನ(Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.76ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಬೆಳಿಗ್ಗೆ 5.35ಕ್ಕೆ ಕಂಪನ ಸಂಭವಿಸಿದ್ದು, ಪಟ್ಟನ್ ಪ್ರದೇಶವು ಭೂಕಂಪದ ಕೇಂದ್ರಬಿಂದುವಾಗಿದೆ ಎಂದು ವರದಿಯಾಗಿದೆ. ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

ಅಂಡಮಾನ್ ನಿಕೋಬಾರ್​ನಲ್ಲೂ ಭೂಕಂಪನ

ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದ ಅಕ್ಷಾಂಶವು 9.03 ಉತ್ತರಕ್ಕೆ ಮತ್ತು ರೇಖಾಂಶವು 92.78 ಪೂರ್ವಕ್ಕೆ ವರದಿಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
1893-1984ರ ಭಾರತದ ಭೂಕಂಪನ ವಲಯ ನಕ್ಷೆಯ ಪ್ರಕಾರ, ಈ ದ್ವೀಪಗಳನ್ನು ಭೂಕಂಪನ ವಲಯ - V ರಲ್ಲಿ ವರ್ಗೀಕರಿಸಲಾಗಿದೆ. ಮತ್ತು ಇದು ವಿಶ್ವದ ಅತ್ಯಂತ ಭೂಕಂಪನಶೀಲ ಸಕ್ರಿಯ ಭಾಗಗಳಲ್ಲಿ ಒಂದಾಗಿದೆ. ಹಿಂದೆ ಹಲವಾರು ದೊಡ್ಡ ಭೂಕಂಪಗಳು ಸಂಭವಿಸಿವೆ (ಏಜೆನ್ಸೀಸ್).