ಮರ್ಸಿಡಿಸ್ ಕಾರಿನಲ್ಲಿ ಏಕಾಏಕಿ ಬೆಂಕಿ 
ದೇಶ

ಪೆಟ್ರೋಲ್ ಪಂಪ್ ಬಳಿಯೇ ಮರ್ಸಿಡಿಸ್ ಧಗ-ಧಗ; ತಪ್ಪಿದ ಭಾರೀ ಅನಾಹುತ | Mercedes Car Catches Fire

ಪ್ರಮುಖ ಮುಖ್ಯಾಂಶಗಳು

  • ಪೆಟ್ರೋಲ್ ಪಂಪ್ ಬಳಿ ಮರ್ಸಿಡಿಸ್ ಕಾರಿಗೆ ಬೆಂಕಿ
  • ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
  • ಆತಂಕ ಸೃಷ್ಟಿಸಿದ ಮಹಾರಾಷ್ಟ್ರದಲ್ಲಿ ನಡೆದ ಘಟನೆ
Mercedes catches fire: ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಐಷಾರಾಮಿ ಮರ್ಸಿಡಿಸ್ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನ ಚಿಖಾಲಿಯಲ್ಲಿ ನಡೆದಿದೆ.
ಬೆಳಗಿನ ಜಾವ ಚಿಖಾಲಿಯ ಶಿವ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದೆ. ಮರ್ಸಿಡಿಸ್ ಕಾರಿನ ಎಂಜಿನ್ ಹಾಗೂ ಬಾನೆಟ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ದೃಶ್ಯಗಳು ಸದ್ಯ ಲಭ್ಯವಾಗಿದ್ದು, ಕಾರಿನ ಮುಂಭಾಗದಿಂದ ಭಾರೀ ಪ್ರಮಾಣದಲ್ಲಿ ಜ್ವಾಲೆಗಳು ಮೇಲಕ್ಕೆ ಹರಡುವುದು ಕಂಡುಬಂದಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಬಾನೆಟ್ ಹಾಗೂ ಎಂಜಿನ್ ವಿಭಾಗವನ್ನು ಆವರಿಸಿದೆ.

ಪೆಟ್ರೋಲ್ ಪಂಪ್ ಸಮೀಪವೇ ಕಾರ್​ಗೆ ಬೆಂಕಿ

ಇನ್ನು, ವಿಷಯ ತಿಳಿಯುತ್ತಿದ್ದಂತೆ ಪಿಂಪ್ರಿ-ಚಿಂಚ್‌ವಾಡ್ ಮಹಾನಗರ ಪಾಲಿಕೆಯ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪೆಟ್ರೋಲ್ ಪಂಪ್ ಸಮೀಪವೇ ಬೆಂಕಿ ಕಾಣಿಸಿಕೊಂಡಿದ್ದರಿಂದ ದೊಡ್ಡ ಅನಾಹುತವಾಗದನ್ನು ತಪ್ಪಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದ್ದು, ಮರ್ಸಿಡಿಸ್ ಕಾರು ಮುಂಬಾಗ ಬಹುತೇಕ ಸುಟ್ಟುಹೋಗಿತ್ತು.

ಅಗ್ನಿಶಾಮಕ ದಳದ ಸಮಯಪ್ರಜ್ಞೆ

ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ಪೆಟ್ರೋಲ್ ಪಂಪ್​ಗೆ ಬೆಂಕಿ ಹರಡುವುದನ್ನು ತಡೆಯಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಂದ್ದು ಯಾಕೆ ನಿಖರ ಎಂಬ ಕಾರಣ ತಿಳಿದುಬಂದಿಲ್ಲ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿದೆ ಎಂದು ತಿಳಿದು ಬಂದಿದೆ,(ಏಜೆನ್ಸೀಸ್​).