ಸುಪ್ರೀಂ ಕೋರ್ಟ್ ಮಾರ್ಚ್ ವೇಳೆ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡ ಯುವ ವಿದ್ಯಾರ್ಥಿ ನಾಯಕಿ ಜನ್ನತ್ ಬಿಷ್ಣೋಯ್.
ಪರಿಸರ ಸಂರಕ್ಷಣೆ, ಮಹಿಳೆಯರ ಸುರಕ್ಷತೆ ಬಗ್ಗೆ ಬಿಎ ವಿದ್ಯಾರ್ಥಿ ಜನ್ನತ್ ಬಿಷ್ಣೋಯ್ ಹೆಚ್ಚು ಹೋರಾಟ.
ರಾಜಸ್ಥಾನ ಮೂಲದ ಜನ್ನತ್, , ಶ್ಯಾಮಾ ಪ್ರಸಾದ್ ಮುಖರ್ಜಿ ಕಾಲೇಜು ವಿದ್ಯಾರ್ಥಿನಿ.
ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಐಎನ್‌ಡಿಐ ಒಕ್ಕೂಟದ 11 ನಾಯಕರು ಸೋಮವಾರ ಎಸ್‌ಐಆರ್ ಅಕ್ರಮದ ಭಾಗವಾಗಿ ಸೋಮವಾರ ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು. ಇದೊಂದು ಕಡೆಯಾದರೆ, ಮತ್ತೊಂದು ಕಡೆ ಹೆಚ್ಚು ಗಮನ ಸೆಳೆದಿದ್ದು ರಾಹುಲ್ ಗಾಂಧಿ ಅವರ ಪಕ್ಕದಲ್ಲೇ ಬಿಳಿ ಶರ್ಟ್, ಬ್ಲೂ ಜೀನ್ಸ್..ಹರಿಬಿಟ್ಟ ಕೂದಲಿನೊಂದಿಗೆ ಕಾಣಿಸಿಕೊಂಡ 20ರ ಹರೆಯದ ಯುವ ಹೋರಾಟಗಾರ್ತಿ ಜನ್ನತ್ ಬಿಷ್ಣೋಯ್. ಈಕೆ ಯಾರು ಎನ್ನುವುದು ಸದ್ಯ ರಾಜಕೀಯ ಮತ್ತು ನೆಟ್ಟಿಗರ ಚರ್ಚಾವಲಯದಲ್ಲಿದೆ.
ಹೌದು , ಎಸ್‌ಐಆರ್ ಪ್ರಕ್ರಿಯೆ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಎಸ್‌ಐಆರ್ ಪ್ರಕ್ರಿಯೆ ಮೂಲಕ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಹಾಗೂ ಗಂಭೀರ ಅಕ್ರಮ ನಡೆದಿರುವುದಾಗಿ ಆರೋಪಿಸಿ ಸೋಮವಾರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಐಎನ್‌ಡಿಐ ಒಕ್ಕೂಟದ 11 ನಾಯಕರು ಸುಪ್ರೀಂಕೋರ್ಟ್‌ನಲ್ಲಿ ಜಂಟಿ ರಿಟ್ ಅರ್ಜಿ ಸಲ್ಲಿಸಿದರು. ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಕಡೆಗೆ ನಡೆದಾಗ, ಪ್ರಿಯಾಂಕಾ ಗಾಂಧಿ ಮತ್ತು ನೇಹಾ ಬೋರಾ ಅವರೊಂದಿಗೆ ಜನ್ನತ್ ಬಿಷ್ಣೋಯ್ ಕೂಡ ಫ್ರೇಮ್‌ನಲ್ಲಿ ಕಾಣಿಸಿಕೊಂಡರು.
ನೇಹಾ ಬೋರಾ, ರಾಹುಲ್ ಗಾಂಧಿ ಜೊತೆಗೆ ಜನ್ನತ್ ಬಿಷ್ಣೋಯ್ ನಿನ್ನೆಯ ಪ್ರತಿಭಟನೆಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ಜನ್ನತ್ ಬಿಷ್ಣೋಯ್ ಮೂಲತಃ ರಾಜಸ್ಥಾನದವರು. ಸದ್ಯ ದೆಗಲಿಯ ಶ್ಯಾಮಾ ಪ್ರಸಾದ್ ಮುಖರ್ಜಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ಓದುತ್ತಿರುವ ಅವರುದೆ ಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (DUSU) ಕಾರ್ಯಕಾರಿ ಕೌನ್ಸಿಲರ್. ಇಷ್ಟೇ ಅಲ್ಲದೆ ಜನ್ನತ್ ಕಾಂಗ್ರೆಸ್ನ ವಿದ್ಯಾರ್ಥಿ ವಿಂಗ್ ಆದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಸದಸ್ಯೆಯೂ ಹೌದು.
ಬಿಳಿ ಶರ್ಟ್, ಬ್ಲೂ ಜೀನ್ಸ್..ಹರಿಬಿಟ್ಟ ಕೂದಲಿನಲ್ಲಿ ಜನ್ನತ್ ಬಿಷ್ಣೋಯ್ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ನೇಹಾ ಬೋರಾ ಜೊತೆಗೆ ಟ್ರಕ್ ಮೇಲೆ ಕಾಳಿಸಿಕೊಂಡರು. ಕಾಂಗ್ರೆಸ್ನ ವಿದ್ಯಾರ್ಥಿ ವಿಂಗ್ನಲ್ಲಿರುವ ಕಾರಣ ಎಸ್‌ಐಆರ್ ಅಕ್ರಮ ವಿಚಾರವಾಗಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಅವರು ಸಹ ಹೋರಾಟ ನಡೆಸಿದರು.
ಜನ್ನತ್ ಬಿಷ್ಣೋಯ್ ತಮ್ಮ ಕ್ಯಾಂಪಸ್ನಲ್ಲಿ ಸಿಸಿಟಿವಿ ನೆಟ್‌ವರ್ಕ್ ಹಾಗೂ ಪಿಂಕ್ ಪೊಲೀಸ್ ಬೂತ್‌ಗಳ ನಿರ್ಮಾಣಕ್ಕೆ ಅವರು ಸತತವಾಗಿ ಆಗ್ರಹಿಸುತ್ತ ಬಂದಿದ್ದಾರೆ. ದೆಹಲಿಯ ಕಾಲಕಾಜಿಯಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇಷ್ಟೇ ಅಲ್ಲದೆ ರಾಜಸ್ಥಾನ ಮರ ರಕ್ಷಣೆ ಮಸೂದೆ ಸೇರಿದಂತೆ, ಪರಿಸರ ರಕ್ಷಣೆ ಕುರಿತು ನಡೆಯುವ ಅಭಿಯಾನಗಳಲ್ಲೂ ಪಾಲ್ಗೊಂಡಿದ್ದಾರೆ. ಪಿತೃಪ್ರಧಾನ ಕುಟುಂಬ ವ್ಯವಸ್ಥೆ ನಿರ್ನಾಮವಾಗಲಿ. ನಮಗೆ ನ್ಯಾಯಾ ಬೇಕು ಎಂದು ಹೋರಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇದೆ, (ಏಜೆನ್ಸೀಸ್).