ಅಂಗಡಿಯವನ ಮೇಲೆ ಹಲ್ಲೆ ಮಾಡುತ್ತಿರುವ ರೈಲ್ವೆ ಪೊಲೀಸರು
- ಮಥುರಾ ಜಂಕ್ಷನ್ನಲ್ಲಿ ರೈಲ್ವೆ ಪೊಲೀಸರ ದೌರ್ಜನ್ಯ
- ಚಹ ತಡವಾಗಿದ್ದಕ್ಕೆ ಅಂಗಡಿಯವನಿಗೆ ಥಳಿಸಿದ ರೈಲ್ವೆ ಪೊಲೀಸರು
- ಬಾಯಲ್ಲಿ ಮೂರ್ತವಿಸರ್ಜಿಸುವುದಾಗಿ ಬೆದರಿಕೆ ಹಾಕಿದ್ದ ವಿಡಿಯೋ ವೈರಲ್
ಉತ್ತರ ಪ್ರದೇಶ: ಆರ್ಡ್ರ್ ಮಾಡಿದ ಚಹ ಬರಲು ತಡವಾಗಿದಕ್ಕೆ ಅಂಗಡಿಯವನ ಮೇಲೆ ಹಲ್ಲೆ ನಡೆಸಿ ಬಾಯಲ್ಲಿ ಮೂರ್ತ ವಿಸರ್ಜಿಸುವುದಾಗಿ, ರೈಲ್ವೆ ಪೊಲೀಸ (Railway Police) ರು ಬೆದರಿಕೆ ಹಾಕಿರುವ ಘಟನೆ ಉತ್ತರಪ್ರದೇಶದ ಮಥುರಾ ಜಂಕ್ಷನ್ ಬಳಿ ನಡೆದಿದೆ.
ಅಂಗಡಿಯವನಿಗೆ ಅವಾಚ್ಯ ಪದಗಳಲ್ಲಿ ನಿಂದಿಸಿ, ಅವನ ಕೆನ್ನೆಗೆ ಹೊಡೆದಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ರೈಲ್ವೆ ಪೊಲೀಸರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಈ ಘಟನೆಯು ಬುಧವಾರ (ಫೆ.25) ನಡೆದಿದೆ ಎಂದು ತಿಳಿದು ಬಂದಿದ್ದು, ಬೆಳಿಗ್ಗೆ ತನ್ನ ಅಂಗಡಿಯನ್ನು ತೆರೆದ ಮಾಲೀಕನು ಅಂಗಡಿಯನ್ನು ಸ್ವಚ್ಚಗೊಳಿಸುತ್ತಿದ್ದಾಗ, ಇಬ್ಬರು ರೈಲ್ವೆ ಪೊಲೀಸರು ಅಂಗಡಿಗೆ ಬಂದು ಚಹ ತಯಾರಿಸಲು ಹೇಳಿದ್ದಾರೆ. ಆದರೆ ಅಂಗಡಿಯವನು ಸ್ವಚ್ಛತಾ ಕಾರ್ಯದಲ್ಲಿ ನಿರತನಾಗಿದ್ದರಿಂದ ಚಹ ತಯಾರಿಸಲು ಸ್ವಲ್ಪ ತಡವಾಗಿದೆ.
ಇದರಿಂದ ಕುಪಿತರಾದ ರೈಲ್ವೆ ಪೊಲೀಸರು, ಅಂಗಡಿಯವನಿಗೆ ಬಾಯಿಗೆ ಬಂದಹಾಗೆ ಬಯ್ದಿದ್ದಾರೆ, ಅಷ್ಟೇ ಅಲ್ಲದೇ ಅವನ ಮೇಲೆ ಹಲ್ಲೆ ಸಹ ಮಾಡಿದ್ದು, ನಿನ್ನ ಬಾಯಲ್ಲೇ ಮೂರ್ತ ವಿಸರ್ಜಿಸಿ ಬಿಡುತ್ತೇನೆ ಹುಷಾರ್! ಎಂದು ಆವಾಜ್ ಹಾಕಿದ್ದಾರೆ.
ಆಗ ಅಂಗಡಿಯವನು ತಾನು ಬೇರೆ ಕೆಲಸದಲ್ಲಿ ನಿರತರಾಗಿದ್ದೆ ಆದ್ದರಿಂದ ನಿಮ್ಮ ಚಹ ತಯಾರಿಸಲು ತಡವಾಯಿತು. ನೀವು ಈ ರೀತಿ ಹಲ್ಲೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾನೆ. ಇದಕ್ಕೆ ರೈಲ್ವೆ ಪೊಲೀಸರು ನೀನು ಏನು ಮಾಡ್ತಿಯಾ? ಪೊಲೀಸ್ ಕಂಪ್ಲೆಂಟ್ ಕೊಡ್ತಿಯಾ? ನಮ್ಮನ್ನು ಏನು ಮಾಡೊಕೊ ಆಗಲ್ಲ ಎಂದು ಹೇಳಿ ಕೆನ್ನಗೆ ಎರಡು ಬಾರಿ ಹೊಡೆದಿದ್ದಾರೆ.
ನೆಟ್ಟಿಗರಿಂದ ತೀವ್ರ ತರಾಟೆ
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಹೀಗೆ ಮಾಡಿದರೆ ಹೇಗೆ ಎಂದು ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.
ಈ ಪೊಲೀಸರ ದರ್ಪ ಎಷ್ಟು ಶತಮಾನ ಕಳೆದರೂ ಕಡಿಮೆಯಾಗದು ಎಂದು ಒಬ್ಬರು ಹೇಳಿದರೆ, ಇವರಿಗೆ ಚಹ ಬರಲು ತಡವಾದರೆ ಬೇರೆ ಅಂಗಡಿಗೆ ಹೋಗಬೇಕಿತ್ತು ಎಂದು ಇನ್ನೊಬ್ಬರು ಹೇಳಿದ್ದಾರೆ. ಪೊಲೀಸರು ಹೇಳಿದ್ದ ಮಾತನ್ನು ಆ ಅಂಗಡಿಯವನು ಹೇಳಿದ್ದರೆ ಇಲ್ಲಿಯವರೆಗೆ ಅವನ ಎನ್ಕೌಂಟರ್ ಆಗುತ್ತಿತ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ,(ಏಜನ್ಸೀಸ್).