ಸೋಲನ್: ಹಿಮಾಚಲ(Himachal) ಪ್ರದೇಶದ ಸೋಲನ್ ಜಿಲ್ಲೆಯ ನಲಗಢ ಪೊಲೀಸ್ ಠಾಣೆ ಬಳಿ ಗುರುವಾರ(ಜ.1) ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಸ್ಪೋಟ ನಡೆದ ಸ್ಥಳಲದಲ್ಲಿ ಯಾರೂ ಇರದ ಕಾರಣ ಯಾವುದೇ ಗಾಯಗಳಾಗಿಲ್ಲ ಮತ್ತು ಸ್ಫೋಟದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಸ್ಫೋಟದ ಪರಿಣಾಮವು ಎಷ್ಟು ಬಲವಾಗಿತ್ತೆಂದರೆ ಹತ್ತಿರದ ಕಟ್ಟಡಗಳು ಮತ್ತು ಸೇನಾ ಆಸ್ಪತ್ರೆಯ ಕಿಟಕಿಗಳು ಬಿರುಕು ಬಿಟ್ಟಿದ್ದು, ಮಾಹಿತಿ ದೊರೆತ ನಂತರ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಪ್ರದೇಶವನ್ನು ಸುತ್ತುವರೆದಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಠಾಣೆ ಬಳಿಯ ಓಣಿಯಲ್ಲಿ ಸ್ಫೋಟ ಸಂಭವಿಸಿದೆ ಮತ್ತು 400 ರಿಂದ 500 ಮೀಟರ್ ದೂರದಿಂದ ದೊಡ್ಡ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಚಹಾ ಅಂಗಡಿಯಲ್ಲಿ ಕುಳಿತಿದ್ದ ಜನರು ದೊಡ್ಡ ಶಬ್ದದಿಂದ ಬೆಚ್ಚಿಬಿದ್ದರು ಮತ್ತು ಏನಾಯಿತು ಎಂದು ಯಾರಿಗೂ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ.
ಗುರುವಾರ ಬೆಳಿಗ್ಗೆ 9:40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಸ್ಫೋಟದಿಂದ ನಲಗಢ ಪೊಲೀಸ್ ಠಾಣೆಯ ತನಿಖಾಧಿಕಾರಿ ಕೊಠಡಿ, ಸೇನಾ ಕ್ಯಾಂಟೀನ್ ಮತ್ತು ಹತ್ತಿರದ ಮನೆಗಳಿಗೆ ಹಾನಿಯಾಗಿದೆ. ಬಡಿ ಪೊಲೀಸ್ ತಂಡವು ಪ್ರದೇಶವನ್ನು ಸೀಲ್ ಮಾಡಿದೆ ಮತ್ತು ವಿಧಿವಿಜ್ಞಾನ ತಂಡವು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದೆ. ತನಿಖೆಗಳು ನಡೆಯುತ್ತಿವೆ ಮತ್ತು ಸ್ಫೋಟದ ಕಾರಣವನ್ನು ಗುರುತಿಸಲು ಪ್ರತಿಯೊಂದು ಅಂಶವನ್ನು ಪರಿಶೀಲಿಸಲಾಗುತ್ತಿದೆ. ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಧಿಮಾನ್ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಸ್ಕ್ರ್ಯಾಪ್ ಮತ್ತು ತ್ಯಾಜ್ಯ ವಸ್ತುಗಳು ಇರುವುದರಿಂದ ರಾಸಾಯನಿಕಗಳಿಂದ ಉಂಟಾಗಿರಬಹುದಾದ ಸ್ಫೋಟದ ಬಗ್ಗೆ ಪೊಲೀಸರಿಗೆ ಯಾವುದೇ ಬೆದರಿಕೆ ಮೇಲ್ ಅಥವಾ ಸಂದೇಶ ಬಂದಿಲ್ಲ ಎಂದು ಧಿಮಾನ್ ಹೇಳಿದರು. ಇತ್ತೀಚೆಗೆ ನಲಗಢ ಪೊಲೀಸ್ ಠಾಣೆ ಪ್ರದೇಶದಲ್ಲಿ ರಾಸಾಯನಿಕಗಳಿಂದ ಉಂಟಾದ ಇದೇ ರೀತಿಯ ಸ್ಫೋಟ ವರದಿಯಾಗಿದೆ ಮತ್ತು ಅದು ಈಗಾಗಲೇ ತನಿಖೆಯಲ್ಲಿದೆ ಎಂದು ಅವರು ಹೇಳಿದರು.
ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಯಾರಾದರೂ ಜವಾಬ್ದಾರರು ಎಂದು ಕಂಡುಬಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು,(ಏಜನ್ಸೀಸ್).