ಮಾರ್ಕ್ ಜುಕರ್ಬರ್ಗ್ಗೆ ಕಂಗನಾ ಎಚ್ಚರಿಕೆ
- ಭಾರತ ವಿರೋಧ ವಿಷಯಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ
- ಸೋಷಿಯಲ್ ಮೀಡಿಯಾನಲ್ಲಿ ಮೋದಿ ವಿಡಿಯೋ ಮಾಯ ವಿವಾದ
- ಕ್ಷಮೆ ಕೇಳಿದ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್
- ಮಾರ್ಕ್ ಜುಕರ್ಬರ್ಗ್ಗೆ ಕಂಗನಾ ಎಚ್ಚರಿಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸೋಷಿಯಲ್ ಮೀಡಿಯಾನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋ ಕೆಲ ಕಾಲ ಕಣ್ಮರೆಯಾದ ಬಗ್ಗೆ ಖುದ್ದು ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಕೇಳಿದ್ದಾರೆಂದು ತಿಳಿದು ಬಂದಿದೆ.
ಮಾರ್ಕ್ ಜುಕರ್‌ಬರ್ಗ್, ಮೋದಿ ಬಳಿ ಕೇಳಿರುವ ಕ್ಷಮೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut on Mark Zuckerberg) ಈ ರೀತಿ ತಪ್ಪುಗಳಿ ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದ್ದಾರೆ.
ಭಾರತದ ವಿರೋಧಿ ಕಂಟೆಂಟ್ಗಳಿಗೆ ಬ್ರೇಕ್ ಹಾಕಿ!
ಮಾರ್ಕ್ ಜುಕರ್‌ಬರ್ಗ್ ಕ್ಷಮಾಪಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಂಗನಾ, ನಮ್ಮ ಪ್ರಧಾನಿಗಳು ಹಂಚಿಕೊಂಡಿದ್ದ ವಿಡಿಯೋವನ್ನು ಮೆಟಾ 5 ಗಂಟೆ ವರೆಗೆ ಯಾರಿಗೂ ಕಾಣಿಸದಂತೆ ಮಾಡಿದ್ದು, ಇದು ಆ ವೇದಿಕೆಯಿಂದಾದ ತಪ್ಪಾದ ಕಾರಣ, ಇಂದು ಆ ಕಂಪನಿ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಕೇಳಿದ್ದಾರೆ.
ಈ ಕ್ಷಮೆಯನ್ನು ನಾವೆಲ್ಲರೂ ಸ್ವೀಕರಿಸುತ್ತೇವೆ, ಹಾಗೆಯೇ ಇತ್ತೀಚೆಗೆ ಭಾರತ ವಿರೋಧಿ ಕಂಟೆಂಟ್ಗಳ ಪ್ರಸಾರ ಹೆಚ್ಚಾಗುತ್ತಿದ್ದು, ಇದು ದೇಶಕ್ಕೆ ಮಾರಕವಾಗಿದೆ. ಇದನ್ನು ತಡೆಯುವ ಜವಾಬ್ದಾರಿ ಅವರ ಮೇಲಿದ್ದು, ಮುಂದಿನ ದಿನಗಳಲ್ಲಿ ನಮ್ಮ ದೇಶದ ಐಕ್ಯತೆಗೆ ಧಕ್ಕೆಯುಂಟಾಗುವ ವಿಷಯಗಳನ್ನು ಈ ವೇದಿಕೆಗಳಲ್ಲಿ ಹಂಚಿಕೊಳ್ಳದಂತ ವ್ಯವಸ್ಥೆಯನ್ನು ಅವರು ನಿರ್ಮಿಸಲಿ ಎಂದು ಸಂಸದೆ ಆಗ್ರಹಿಸಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ಕ್ಷಮೆ!
ಪ್ರಧಾನಿ ಮೋದಿ ದೇಶದ ಝೆನ್-ಜಿ ಗಳನ್ನು ಉದ್ದೇಶಿಸಿ ಹಂಚಿಕೊಂಡಿದ್ದ ವಿಡಿಯೋವೊಂದನ್ನು ಮೆಟಾ ಇಂಡಿಯಾ ಸುಮಾರು 5 ಗಂಟೆಗಳವರೆಗೆ ಈ ವಿಡಿಯೋವನ್ನು ಯಾರು ನೋಡದಂತೆ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಮಾಹಿತಿ ತಂತ್ರಜ್ಞಾನ ಸಚಿವ ನಿಶಿಕಾಂತ್ ದುಬೆ ಮಾರ್ಕ್ ಜುಕರ್‌ಬರ್ಗ್, ಪ್ರಧಾನಿ ಅವರಲ್ಲಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದರು.
ಕ್ಷಮೆ ಕೇಳದೆ ಹೋದರೆ. ಸೇಫ್ ಹಾರ್ಬ್ರ್ ರಕ್ಷಣೆಯನ್ನು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಬೆದರಿಕೆ ಹಿನ್ನಲೆ ಎಚ್ಚೆತ್ತುಕೊಂಡ ಮೆಟಾ ಮುಖ್ಯಸ್ಥ, ಮಾರ್ಕ್ ಜುಕರ್‌ಬರ್ಗ್ ತಮ್ಮ ವೇದಿಕೆಯಿಂದಾದ ತಾತ್ಕಾಲಿಕ ದೋಷಕ್ಕೆ ಕ್ಷಮೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).