- ವೆಜ್ ಬಿರಿಯಾನಿ ಅಂಗಡಿಯಲ್ಲಿ ಶವ ಪತ್ತೆ
- ಲಖನೌನಿನ ಹೋಟೆಲ್ನ ಫ್ರೀಜರ್ನಲ್ಲಿದ್ದ ಶವ
- ಪೊಲೀಸರಿಂದ ಮುಂದುವರೆದ ತನಿಖೆ
ಲಖನೌ: ಸಸ್ಯಹಾರಿಗಳಿಗೆ ಸದಾ ಒಂದು ಅನುಮಾನ ಇದ್ದೇ ಇರುತ್ತದೆ. ಅದೆನೆಂದರೆ ಮಾಂಸಹಾರಿ ಮತ್ತು ಸಸ್ಯಹಾರಿ ಎರಡು ಬಗೆಯ ಖಾದ್ಯ ದೊರೆಯುವ ಹೋಟೆಲ್ಗಳಲ್ಲಿ ಎರಡೂ ವಿಧದ ಆಹಾರಗಳನ್ನು ತಯಾರಿಸುವಲ್ಲಿ ಒಂದೇ ಸೌಟು ಮತ್ತು ಪಾತ್ರೆಗಳನ್ನು ಬಳಸುತ್ತಾರೆ ಎಂಬ ಗುಮಾನಿ ಇರುತ್ತದೆ. ಆದರೆ ಇತ್ತೀಚೆಗೆ ಉತ್ತರಪ್ರದೇಶದ ಲಖನೌನಲ್ಲಿ ವರದಿಯಾದ ಸುದ್ದಿಯನ್ನು ಕೇಳಿದರೆ ಸಸ್ಯಹಾರಿಗಳು ಹೋಟೆಲ್ಗೆ ಹೋಗುವುದನ್ನೇ ನಿಲ್ಲಿಸಿದರೂ ಅನುಮಾನವಿಲ್ಲ.
ಸಸ್ಯಹಾರಿ ಹೋಟೆಲ್‌ನಲ್ಲಿ ಮಾನವನ ದೇಹ ಪತ್ತೆ!
ಲಖನೌನಿನ ಜಿಸಿಆರ್‌ಜಿ ಕಾಲೇಜಿನ ಎದುರಿಗೆ ಇದ್ದ ವೆಜ್ ಬಿರಿಯಾನಿ (Biryani Shop) ಅಂಗಡಿಯೊಂದರ ಫ್ರೀಜರ್ನಲ್ಲಿ ಮಾನವನ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಅಂಗಡಿ ಮಾಲೀಕನ ತಂದೆ ತೀರಿಹೋಗಿದ್ದು ಅನವು ನಾಲ್ಕು ದಿನಗಳಿಂದ ಅಂಗಡಿಗೆ ಬೀಗ ಹಾಕಿ ಹೋಗಿದ್ದಾನೆ. ನಂತರ ಅಂಗಡಿಗೆ ಮರಳಿದ ಮಾಲೀಕ ಫ್ರೀಜರ್ನ್ನು ತೆಗೆದಾಗ ಅಲ್ಲಿ ಮನುಷ್ಯನ ದೇಹವಿರುವುದು ಗೊತ್ತಾದ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾನೆ.
ಮರಣೋತ್ತರ ಪರೀಕ್ಷೆಗೆ ಶವ ರವಾನೆ
ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಆ ವ್ಯಕ್ತಿಯ ದೇಹ ಹೇಗೆ ಅಂಗಡಿಯ ಫ್ರೀಜರ್ನ್ನು ಸೇರಿತು ಎಂದು ತಿಳಿದುಬಂದಿಲ್ಲ. ಪೊಲೀಸರು ಅಂಗಡಿಯಲ್ಲಿದ್ದ ಸಿಸಿಟಿವಿ ಪೂಟೇಜ್ನ್ನು ಪಡೆದುಕೊಂಡಿದ್ದು, ಅಂಗಡಿ ಮಾಲೀಕ ಮತ್ತು ಸ್ಥಳೀಯರನ್ನು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.
ತನಿಖೆ ನಡೆಯುತ್ತಿದೆ: ಪೊಲೀಸ್ ಆಯುಕ್ತ
ಈ ಪ್ರಕರಣದ ಕುರಿತು ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ ಗೋಪಾಲ್ ಕೃಷ್ಣ ಚೌಧರಿ, ಮೃತ ವ್ಯಕ್ತಿ ಯಾರು? ಮತ್ತು ಈ ಕೊಲೆ ಹೇಗೆ ನಡೆದಿರಬಹುದು ಎಂದು ಪರೀಶಿಲಿಸಲಾಗುತ್ತಿದೆ. ಘಟನಾ ಸ್ಥಳದಿಂದ ಸಿಸಿಟಿವಿ ಪೂಟೇಜ್ನ್ನು ಪಡೆದುಕೊಳ್ಳಲಾಗಿದ್ದು, ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ,(ಏಜನ್ಸೀಸ್).