2012ರಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ 'ಆತ್ಮಹತ್ಯೆ ಮಾಡಿಕೊಳ್ಳುವುದಾಗಿ' ಹೇಳಿದ್ದರೇ? 
ದೇಶ

ಮನಮೋಹನ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದೇಕೆ? ಮಾಜಿ ಮುಖ್ಯ ಚುನಾವಣಾ ಅಧಿಕಾರಿಯ ಪುಸ್ತಕದಲ್ಲಿರುವ ಸ್ಪೋಟಕ ಮಾಹಿತಿ ಏನು? Manmohan Singh Suicide

ಪ್ರಮುಖ ಮುಖ್ಯಾಂಶಗಳು

  • 2012ರಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ 'ಆತ್ಮಹತ್ಯೆ ಮಾಡಿಕೊಳ್ಳುವುದಾಗಿ' ಹೇಳಿದ್ದರೇ?
  • ಎಸ್.ವೈ. ಖುರೇಶಿ ಅವರ 'India and I' ಪುಸ್ತಕದಲ್ಲಿ ಉಲ್ಲೇಖವಾಗಿರುವ ಆ ಶಾಕಿಂಗ್ ಘಟನೆ ಏನು?
  • ಮಾಜಿ ಮುಖ್ಯ ಚುನಾವಣಾ ಅಧಿಕಾರಿ ಬಿಚ್ಚಿಟ್ಟ ರಹಸ್ಯವೇನು?
ನವದೆಹಲಿ: 2012 ರ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಯೊಂದರಿಂದ ಮನನೊಂದಿದ್ದ ಅಂದಿನ ಪ್ರಧಾನಿ ಡಾ. ಮನಮೋಹನ್​ ಸಿಂಗ್​ (Manmohan Singh Suicide) ಅವರು ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರೆಂಬ ಶಾಕಿಂಗ್​ ಸಂಗತಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಭಾರತೀಯ ಚುನಾವಣಾ ಆಯೋಗದ ಮಾಜಿ ಮುಖ್ಯ ಚುನಾವಣಾಧಿಕಾರಿಯಾಗಿ ಕೆಲಸ ಮಾಡಿದ್ದ ಎಸ್​.ವಾಯ್​. ಖುರೇಶಿ ಬರೆದಿರುವ India and I: A Hundred Memories, Not a Memoir ಎಂಬ ಪುಸ್ತಕದಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.

ಮುಸ್ಲಿಮರಿಗೆ ಶೇ.9 ರಷ್ಟು ಮೀಸಲಾತಿ!

2012 ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಸಿದ್ಧತೆ ನಡೆಯುತ್ತಿತ್ತು. ರಾಜ್ಯದಲ್ಲಿ ನೀತಿ ಸಂಹಿತರ ಕೂಡ ಜಾರಿಯಲ್ಲಿತ್ತು. ಈ ಸಮಯದಲ್ಲಿ ಅಂದಿನ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್, ಭಾಷಣಯೊಂದರಲ್ಲಿ ತಮ್ಮ ಪಕ್ಷವನ್ನು ಬಹುಮತದಿಂ ಗೆಲ್ಲಿಸಿದರೆ, ಈಗ ಮುಸ್ಲಿಮರಿಗೆ ಸರ್ಕಾರಿ ಉದ್ಯೋಗದಲ್ಲಿರುವ ಶೇ. 4.5 ರ ಮೀಸಲಾತಿಯನ್ನು ಶೇ. 9 ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದರು.
ಚುನಾವಣೆ ಸಮಯದಲ್ಲಿ ಈ ರೀತಿ ಆಶ್ವಾಸನೆ ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಿತ್ತು. ಬಿಜೆಪಿಯ ಅರ್ಜಿಯ ವಿಚಾರಣೆಯನ್ನು ಮಾಡಿದ ಚುನಾವಣಾ ಆಯೋಗ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು ಎಂದು ಲೇಖಕರು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್​ ಆಕ್ರೋಶ; ಪ್ರಧಾನಿ ಸಂತಾಪ!

ತಮ್ಮ ಸರ್ಕಾರದ ಸಚಿವನ ಮೇಲೆ ಚುನಾವಣಾ ಆಯೋಗ ಕಠಿಣ ಕ್ರಮ ತೆಗೆದುಕೊಂಡಿದ್ದನ್ನು ಕಾಂಗ್ರೆಸ್​ ಪಕ್ಷ ಸಹಿಸಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಹಲವು ಮಂತ್ರಿಗಳು ಚುನಾವಣಾ ಆಯೋಗವನ್ನು 'ದುರಹಂಕಾರಿ' ಮತ್ತು 'ಅನಿಯಂತ್ರಿತ' ವಾಗಿ ವರ್ತಿಸುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರು.
ಇದರಿಂದ ನನಗೆ (ಎಸ್​.ವಾಯ್​. ಖುರೇಶಿ) ಅತೀವ ಬೇಸರವಾದ ಹಿನ್ನಲೆ ಅಂದಿನ ಪ್ರಧಾನಿ ಮನಮೋಹನ್​ ಸಿಂಗ್​ ಅವರ, ಮಾಧ್ಯಮ ಕಾರ್ಯದರ್ಶಿ ಆಗಿದ್ದ, ಹರೀಶ್​ ಖಾರೆ ಅವರಲ್ಲಿ ಸರ್ಕಾರದ ಬಗ್ಗೆ ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದೆ. ಮಾರನೆ ದಿನ ಖುದ್ದು ಪ್ರಧಾನಿ ಮನಮೋಹನ್​ ಸಿಂಗ್​ ಅವರೇ ನನಗೆ ಕರೆಮಾಡಿ ನಿಮ್ಮನ್ನು ನಾನು ಬೇಟಿ ಮಾಡಬೇಕು ಎಂದಿದ್ದರು.
ನಂತರ ನಾನು, ಪ್ರಧಾನಿ ಅವರನ್ನು ಸಂಜೆ 7 ಗಂಟೆಗೆ ಅವರ ನಿವಾಸದಲ್ಲಿ ಬೇಟಿಯಾಗಾದ, ನಿಮ್ಮ ವಿಚಾರವನ್ನು ಹರೀಶ್​ ನನಗೆ ತಿಳಿಸಿದ್ದಾರೆ, ನಮ್ಮ ಸರ್ಕಾರದ ಬಗ್ಗೆ ನೀವು ಹೀಗೆ ಅಭಿಪ್ರಾಯವನ್ನು ಹೊಂದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೆನೆಂದು ಮನಮೋಹನ್​ ಸಿಂಗ್​ ಹೇಳಿದ್ದರೆಂದು ಖುರೇಶಿ ತಮ್ಮ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಚುನಾವಣಾ ಆಯೋಗ ಎನ್ನುವುದು ಕೇವಲ ಭಾರತದ ಹೆಮ್ಮೆ ಮಾತ್ರವಲ್ಲ, ಇದು ಪ್ರಜಾಪ್ರಭುತ್ವದ ಆತ್ಮವಗಿದ್ದ, ಈ ಸಂಸ್ಥೆಗೆ ಧಕ್ಕೆ ಉಂಟಾದರೆ, ನಾವು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರಂತೆ. ಪ್ರಧಾನಿ ಅವರನ್ನು ಬೇಟಿ ಮಾಡಿದ ಮರುದಿನದಿಂದ ಚುನಾವಣಾ ಆಯೋಗದ ಮೇಲೆ ಮಂತ್ರಿಗಳ ಆಕ್ರೋಶ ಸಮಾಪ್ತಿಯಾಯಿತೆಂದು ಖರೇಶಿ ಹೇಳಿದ್ದಾರೆ, (ಏಜನ್ಸೀಸ್​).