Mangala Ajji 
ದೇಶ

65ರಲ್ಲೂ ಆಟೋ ಸ್ಟೀರಿಂಗ್ ಹಿಡಿದ 'ಮಂಗಳಾ ಅಜ್ಜಿ': ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ನಿರೂಪಿಸಿದ ಸಾಧಕಿ!

ಮಹಾರಾಷ್ಟ್ರ:ಸಾಮಾನ್ಯವಾಗಿ 60 ವರ್ಷ ದಾಟಿದ ಮೇಲೆ ವಿಶ್ರಾಂತಿ ಜೀವನ ಬಯಸುವವರೇ ಹೆಚ್ಚು. ಆದರೆ ಮಹಾರಾಷ್ಟ್ರದಸತಾರಾ ಜಿಲ್ಲೆಯ ಕರಾಡ್ ನಿವಾಸಿ, 65 ವರ್ಷದ ಮಂಗಳಾ(Mangala Ajji) ಆವಳೆ (ಮಂಗಳಾ ಅಜ್ಜಿ) ಅವರ ಕಥೆಯೇ ಬೇರೆ.

ಇವರು ತಮ್ಮ65ನೇ ವಯಸ್ಸಿನಲ್ಲಿ ಆಟೋ ರಿಕ್ಷಾ ಚಾಲನೆಯನ್ನು ಕಲಿಯುವ ಮೂಲಕ ಸಮಾಜದ ಸಾಂಪ್ರದಾಯಿಕ ಚೌಕಟ್ಟುಗಳನ್ನುಮುರಿದು ಎದೆಯುಬ್ಬಿಸಿ ಬದುಕುತ್ತಿದ್ದಾರೆ.

ಮಂಗಳಾ ಅವರ ಜೀವನಅಷ್ಟು ಸುಲಭದ್ದಾಗಿರಲಿಲ್ಲ. ಪತಿಯ ನಿಧನದ ನಂತರ ಕೂಲಿ ಕೆಲಸ ಮಾಡಿಯೇ ನಾಲ್ಕು ಮಕ್ಕಳನ್ನು ಸಾಕಿ ಸಲಹಿದರು.ಇಂದು ಮಗ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿದ್ದಾನೆ, ಹೆಣ್ಣುಮಕ್ಕಳು ವಿವಾಹವಾಗಿ ನೆಮ್ಮದಿಯಾಗಿದ್ದಾರೆ.ಆದರೂ, ಮಕ್ಕಳ ಮೇಲೆ ಹಣಕಾಸಿನ ಹೊರೆಯಾಗಬಾರದು ಮತ್ತು ತಮ್ಮ ವೈದ್ಯಕೀಯ ವೆಚ್ಚಗಳನ್ನು ತಾವೇ ಭರಿಸಬೇಕುಎಂಬ ಉದ್ದೇಶದಿಂದ ಮಂಗಳಾ ಅಜ್ಜಿ ಆಟೋ ಓಡಿಸುವ ನಿರ್ಧಾರ ಮಾಡಿದರು.

ಕೇವಲ 15 ದಿನಗಳಲ್ಲಿಚಾಲನೆ ಕಲಿಕೆ!

ಮಗನ ಮಾರ್ಗದರ್ಶನದಲ್ಲಿಕೇವಲ 3 ದಿನಗಳಲ್ಲಿ ಆಟೋ ಯಂತ್ರದ ಕಾರ್ಯವೈಖರಿ ಕಲಿತ ಇವರು, 15 ದಿನಗಳಲ್ಲಿ ಪೂರ್ಣ ಪ್ರಮಾಣದ ಚಾಲಕಿಯಾಗಿಹೊರಹೊಮ್ಮಿದರು. ಪ್ರಸ್ತುತ ಇವರು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕರಾಡ್ ಮತ್ತು ಉಂಡಾಲೆನಡುವೆ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ.

"ಮನೆಯಲ್ಲಿಸುಮ್ಮನೆ ಕುಳಿತುಕೊಳ್ಳುವುದು ನನಗಿಷ್ಟವಿರಲಿಲ್ಲ. ಆಟೋ ಓಡಿಸುವುದು ನನಗೆ ಭಯ ತರುವುದಿಲ್ಲ. ರಸ್ತೆಯಲ್ಲಿಇತರ ಚಾಲಕರು ಕೂಡ 'ಅಜ್ಜಿ ಮೊದಲು ಹೋಗಲಿ' ಎಂದು ಗೌರವ ನೀಡುತ್ತಾರೆ. ಇದು ನನಗೆ ಕೇವಲ ಹಣವನ್ನಷ್ಟೇಅಲ್ಲ, ಆತ್ಮಗೌರವವನ್ನೂ ತಂದುಕೊಟ್ಟಿದೆ," ಎನ್ನುತ್ತಾರೆ ಮಂಗಳಾ ಅಜ್ಜಿ.

ಸಾಮಾಜಿಕ ಜಾಲತಾಣದಲ್ಲಿವೈರಲ್

ಮಂಗಳಾ ಅಜ್ಜಿಆಟೋ ಓಡಿಸುವ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. "ಕನಸುಗಳಿಗೆ ನಿವೃತ್ತಿಇಲ್ಲ, ಜನರಿಗಷ್ಟೇ ನಿವೃತ್ತಿ" ಎಂಬ ಶೀರ್ಷಿಕೆಯಡಿ ಇವರ ವಿಡಿಯೋ ಹರಿದಾಡುತ್ತಿದ್ದು, ಸಾವಿರಾರುಜನರು ಇವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. "65ನೇ ವಯಸ್ಸಿನಲ್ಲಿ ಇವರು ಸಾಹಸ ಮಾಡಬಲ್ಲರುಎಂದಾದರೆ, 25 ಅಥವಾ 35ರ ಹರೆಯದ ನಮಗೆ ಯಾಕೆ ಸಾಧ್ಯವಿಲ್ಲ?" ಎಂದು ಯುವಜನತೆ ಇವರನ್ನು ನೋಡಿಸ್ಫೂರ್ತಿ ಪಡೆಯುತ್ತಿದ್ದಾರೆ.

ದಿನಕ್ಕೆ500 ರಿಂದ 700 ರೂಪಾಯಿ ಸಂಪಾದಿಸುವ ಇವರು, "ಪ್ರತಿಯೊಬ್ಬ ಮಹಿಳೆಯೂ ಧೈರ್ಯ ಪ್ರದರ್ಶಿಸಿ ಸ್ವಾವಲಂಬಿಯಾಗಬೇಕು"ಎಂಬ ಸಂದೇಶ ನೀಡುತ್ತಿದ್ದಾರೆ,(ಏಜೆನ್ಸೀಸ್‌).