Passenger Tries To Open Emergency Exit Minutes Before Kochi Landing 
ದೇಶ

ಕೌಲಾಲಂಪುರದಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಹೈಡ್ರಾಮಾ; ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಕೇರಳದ ವ್ಯಕ್ತಿ ಅರೆಸ್ಟ್..Kochi

ಪ್ರಮುಖ ಮುಖ್ಯಾಂಶಗಳು

  • ಲ್ಯಾಂಡಿಗ್​ ಆಗುವ ಕೆಲವೇ ಹೊತ್ತಿನ ಹಿಂದೆ ಎಮರ್ಜೆನ್ಸಿ ಡೋರೆ ಹೊಡೆಯಲು ಯತ್ನಿಸಿದ ಪ್ರಯಾಣಿಕ.
  • ಪಾಲಕ್ಕಾಡ್ ಜಿಲ್ಲೆಯ ಕೂತನಾಡ್ ನಿವಾಸಿ 34 ವರ್ಷದ ಜಮ್ಶೀರ್ ಅಥಾನಿಕ್ಕಲ್ ಬಂಧನ.
  • ಮಲೇಷಿಯಾದ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಜಮ್ಶೀರ್ ಅಥಾನಿಕ್ಕಲ್ ವಿರುದ್ಧ ಕೇಸ್ ದಾಖಲು.
ಕೊಚ್ಚಿ: ಕೌಲಾಲಂಪುರದಿಂದ ಹೊರಟಿದ್ದ ಬಾಟಿಕ್​ ​ ವಿಮಾನವೂ ಕೊಚ್ಚಿ ಏರ್ಪೋರ್ಟ್​ನಲ್ಲಿ ಲ್ಯಾಂಡಿಗ್​​ ಆಗುವ ಕೆಲವೇ ಗಂಟೆಗಳ ಹಿಂದೆ ಪ್ರಯಾಣಿಕರೊಬ್ಬರು, ಎಮರ್ಜೆನ್ಸಿ ಡೋರ್ ಒಡೆದು, ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಪ್ರಯಾಣಿಕನ ಈ ವರ್ತನೆಯಿಂದ ಸಹ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಆರೋಪಿ ವಶಕ್ಕೆ

ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿಯನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೂತನಾಡ್ ನಿವಾಸಿ 34 ವರ್ಷದ ಜಮ್ಶೀರ್ ಅಥಣಿಕ್ಕಲ್ ಎಂದು ಗುರುತಿಸಲಾಗಿದೆ. ಮಲೇಷ್ಯಾದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ರಾತ್ರಿ 9.30 ರಿಂದ 11.05 ರ ನಡುವೆ ಬಾಟಿಕ್ ಏರ್ ವಿಮಾನ OD 231 ರಲ್ಲಿ ಪ್ರಯಾಣಿಸುತ್ತಿದ್ದರು.

ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆದ ಬಳಿಕ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.

ಎಮೆರ್ಜೆನ್ಸಿ ಡೋರ್​ ಒಡೆದು ರಂಪಾಟ

ಕೊಚ್ಚಿ ಏರ್ಪೋರ್ಟ್​ನಲ್ಲಿ ಲ್ಯಾಂಡ್​ ಆಗುವ ಕೆಲ ಗಂಟೆಗಳ ಹಿಂದೆ, ಇನ್ನು ವಿಮಾನ ಆಗಸದಲ್ಲಿ ಹಾರಾಡುತ್ತಿರುವ ವೇಳೆಯೆ 34 ವರ್ಷದ ಜಮ್ಶೀರ್ ಅಥಣಿಕ್ಕಲ್

ರಾತ್ರಿ 9.30 ರಿಂದ 11.05 ರ ನಡುವೆ

ಇದ್ದಕ್ಕಿದ್ದಂತೆ ಎದ್ದು ಎಮರ್ಜೆನ್ಸಿ ಡೋರ್​ಗೆ​ ಹೊಡೆಯಲು ಶುರು ಮಾಡಿ. ತೆರೆಯಲು ಯತ್ನಿಸಿದ. ಕ್ಯಾಬಿನ್​ ಸಿಬ್ಬಂದಿ ಹಾಗೂ ಪ್ರಯಾಣಿಕರು ಆತನನ್ನು ತಡೆಯಲು ಯತ್ನಿಸಿದಾಗ ಅವರಿಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ವಿಮಾನದ ಕಿಟಕಿ ಹಾಗೂ ಪ್ಯಾನೆಲ್​ಗೆ ಹಾನಿಯಾಗಿದೆ. ಅಲ್ಲದೆ ಸಹ ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದಾನೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಬಾಟಿಕ್​ ವಿಮಾನ ರಾತ್ರಿ 11:30ಕ್ಕೆ ಕೊಚ್ಚಿನ್​ ಏರ್ಪೋರ್ಟ್​​ನಲ್ಲಿ, ಲ್ಯಾಂಡ್​ ಆದ ಕೂಡಲೇ ಆತನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಯಿತು. ವಿಮಾನಕ್ಕೆ ಹಾನಿ ಮಾಡಲು ಯತ್ನ, ಕ್ರಿಮಿನಲ್​ ಬೆದರಿಕೆ ಹಾಗೂ ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸದಿರುವ ಆರೋಪದ ಮೇರೆಗೆ ಜಮ್ಶೀರ್ ಅಥಾನಿಕ್ಕಲ್ ವಿರುದ್ಧ ಕೇಸ್​ ದಾಖಲಿಸಿಕೊಳ್ಳಲಾಗಿದೆ,