Husband Kills Wife Haryana 
ದೇಶ

ಪ್ರೇಯಸಿ ಮನೆಗೆ ಪತ್ನಿಯನ್ನು ಕರೆದೊಯ್ದ ಶೂಟ್ ಮಾಡಿ ಕೊಂದ ಪತಿ; ಮದುವೆಯಾದ 3 ತಿಂಗಳಲ್ಲೇ ಭೀಕರ ಅಂತ್ಯ

ಪ್ರಮುಖ ಮುಖ್ಯಾಂಶಗಳು

  • ಮದುವೆಯಾದ 3 ತಿಂಗಳಲ್ಲೇ ಪತ್ನಿಯ ಭೀಕರ ಕೊಲೆ.
  • 3 ವರ್ಷಗಳ ಹಳೇ ಅಕ್ರಮ ಸಂಬಂಧ ಮುಂದುವರಿಸಲು ಪ್ರೇಯಸಿ ಜೊತೆಗೂಡಿ ಪತಿಯ ಸ್ಕೆಚ್‌.
  • ಹತ್ಯೆ ಮಾಡಿದ ಬಳಿಕ ಹರಿದ್ವಾರ ಮೂಲಕ ನೇಪಾಳಕ್ಕೆ ಎಸ್ಕೇಪ್ ಆಗಿದ್ದ ಜೋಡಿ.
Husband Kills Wife Haryana: ಪುಣೆಯ ಲೋಹ್​​ಗಡ್​​ ಕೋಟೆಯಲ್ಲಿ ನಡೆದ ಕೇತನ್​​ ಅಗರ್ವಾಲ್​ ಕೊಲೆ ಕೇಸ್​​ಗೆ ವಿಚಾರಣೆ ಇನ್ನೂ ಮುಂದುವರೆಯುತ್ತಿದೆ. ಇಂತಹ ಭೀಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಹರಿಯಾಣದ ಗುರುಗ್ರಾಮದಲ್ಲಿ ಮತ್ತೊಂದು ಘಟನೆ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿದ ಹುಡುಗಿ ಸಹಾಯ ಪಡೆದುಕೊಂಡು ಹೆಂಡತಿಯನ್ನು ಕೊಂದು ಹಾಕಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಮಾನ್​ಸೇರ್​​ನಲ್ಲಿ 25 ವರ್ಷದ ಅಂಕಿತ್ ಎನ್ನುವ ಯುವಕ ತನ್ನ ಪ್ರೇಯಸಿ ರಜನಿ ದೇವಿ (38) ಎಂಬಾಕೆಯೊಂದಿಗೆ ಸೇರಿ ಕೊಲೆ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಅಂಕಿತ್ ಮಾನೇಸರ್‌ನಲ್ಲಿ ತಂಬಾಕು ಅಂಗಡಿ ನಡೆಸುತ್ತಿದ್ದರೆ, ರಜನಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಫೆಬ್ರವರಿಯಲ್ಲಿ ಮಗಳಿಗೆ ಮಾನೇಸರ್ ನಿವಾಸಿ ಅಂಕಿತ್ ಜೊತೆ ವಿವಾಹವಾಗಿತ್ತು. ಮೇ 21ರಿಂದ ಮಗಳು ಕಾಣೆಯಾಗಿದ್ದಾಳೆ ಎಂದು ಮೇ 22 ರಂದು ಸಂತ್ರಸ್ತೆಯ ತಾಯಿ ಮಾನೇಸರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಂಕಿತ್​ ಹಾಗೂ ಆತನ ಮನೆಯವರ ಮೇಲೆ ಅನುಮಾನ ವ್ಯಕ್ತಪಡಿಸಿ ತಾಯಿ FIR ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಮೇ 22 ರಂದು ಮಾನೇಸರ್‌ನ ಒಂದು ಕೊಠಡಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು.

ಬ್ಯೂಟಿಷಿಯನ್​ ಜೊತೆಗೆ ಅಕ್ರಮ ಸಂಬಂಧ

ಕಳೆದ ಮೂರು ವರ್ಷಗಳಿಂದ ಅಂಕಿತ್​ ಹಾಗೂ ರಜನಿ ದೇವಿ ಎಂಬಾತನೊಂದಿಗೆ ಸಂಬಂಧ ಇರುವುದು ತಿಳಿದುಬಂದಿದೆ. ಮದುವೆ ನಂತರ ಆಕೆಯನ್ನು ಕೊಂದು ಸಂಬಂಧ ಮುಂದುವರೆಸುವ ಬಗ್ಗೆ ಪ್ಲ್ಯಾನ್​ ಮಾಡಿಕೊಂಡಿದ್ದರು. ಅದರಂತೆ ಮೇ 21 ರಂದು ಅಂಕಿತ್ ತನ್ನ ಪತ್ನಿಯನ್ನು ಆ ಕೊಠಡಿಗೆ ಕರೆತಂದು, ಇಬ್ಬರೂ ಸೇರಿ ಶೂಟ್ ಮಾಡಿ ಕೊಂದಿದ್ದಾರೆ. ಈ ಕೊಲೆಗಾಗಿಯೇ ಉತ್ತರ ಪ್ರದೇಶದಿಂದ ಎರಡು ತಿಂಗಳ ಮುಂಚಿತವಾಗಿಯೇ ಪಿಸ್ತೂಲ್ ಖರೀದಿಸಲಾಗಿತ್ತು ಎನ್ನಲಾಗಿದೆ.

ಕೊಲೆ ಮಾಡಿ ನೇಪಾಳಕ್ಕೆ ಪರಾರಿ

ಕೊಲೆ ಮಾಡಿದ ನಂತರ ಅಂಕಿತ್ ಮತ್ತು ರಜನಿ ಮೊದಲು ಹರಿದ್ವಾರಕ್ಕೆ ಓಡಿಹೋಗಿ, ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಿದ್ದರು. ಅಲ್ಲಿ ತಲೆಮರೆಸಿಕೊಂಡಿದ್ದ ಇವರು, ಜೂನ್ 30 ರಂದು ಭಾರತಕ್ಕೆ ಮರಳುತ್ತಿದ್ದಂತೆ ಮಾನೇಸರ್ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಸದ್ಯ ನ್ಯಾಯಾಲಯ ಇವರನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಕೊಲೆಗೆ ಬಳಸಿದ ಆಯುಧದ ಪತ್ತೆಗಾಗಿ ವಿಚಾರಣೆ ಮುಂದುವರಿದಿದೆ,(ಏಜೆನ್ಸೀಸ್).