No paycheck for 60 days viral post
- 60 ದಿನ ಸಂಬಳವಿಲ್ಲದೆ ಬದುಕಿದ ಬಗ್ಗೆ ಮಾಹಿತಿ ಹಂಚಿಕೊಂಡ ಕಾರ್ಪೋರೇಟ್ ಉದ್ಯೋಗಿ
- ಸಂಬಳಕ್ಕೆ ನಾವೆಷ್ಟು ಅಡಿಕ್ಟ್ ಆಗಿರುತ್ತೇವೆ ಗೊತ್ತಾ ಎಂದು ನೆಟ್ಟಿಗ
- ಸಂಬಳ ಕೈಲಿಲ್ಲದಾಗ ಅನಗತ್ಯ ಖರ್ಚು ಮಾಡೋದಿಲ್ಲ ಎಂದ ಟೆಕ್ಕಿ
Salary is a hard drug to quit: ತಿಂಗಳ ಪೂರ ಕಷ್ಟಪಟ್ಟು ದುಡಿದ ಹಣ ಮುಂದಿನ ತಿಂಗಳು ಬರಲಿಲ್ಲ ಎಂದರೆ, ಆ ಉದ್ಯೋಗಿಯ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಬಿಡುತ್ತದೆ. EMI, ಮನೆ ಬಾಡಿಗೆ, ದಿನನಿತ್ಯದ ಖರ್ಚು, ಬಟ್ಟೆ ಹೀಗೆ ನಾನಾ ವೆಚ್ಚಗಳನ್ನು ಮೈಮೇಲೆ ಸುರಿದುಕೊಂಡಿರುತ್ತೇವೆ. ಲೇ ಆಫ್ನಿಂದಾಗಿ ಅದೆಷ್ಟೋ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಬೆಳಕಿಗೆ ಬಂದಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ 60 ದಿನ ಸ್ಯಾಲರಿ ಇಲ್ಲದೆ ಬದುಕೋದು ಹೇಗೆ, ಸ್ಯಾಲರಿಗೆ ನಾವು ಎಷ್ಟು ಅಡಿಕ್ಟ್ ಆಗಿಬಿಟ್ಟಿದ್ದೇವೆ ಎಂದು ಮಾತನಾಡಿದ್ದಾರೆ.
ದುಡಿಯುವ ವರ್ಗದ ಜನರಾದ ನಾವು ಸಂಬಳಕ್ಕೆ ಎಷ್ಟು ಒಗ್ಗಿಕೊಂಡು ಬಿಟ್ಟಿರುತ್ತೇವೆ ಎಂದರೆ, ಒಂದು ತಿಂಗಳ ವೇತನ ಆಚೀಚೆಯಾದಾಗಲೇ ನಮಗೆ ಅದರ ಅಸ್ತಿತ್ವದ ಬಗ್ಗೆ, ಮೌಲ್ಯದ ಬಗ್ಗೆ ಅರಿವಾಗೋದು ಎಂದು '@attentionslop’ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ವ್ಯಕ್ತಿಯೊಬ್ಬರು ಪೋಸ್ಟರ್ ಹಂಚಿಕೊಂಡಿದ್ದಾರೆ.
ಸ್ಯಾಲರಿಗೆಷ್ಟು ಅಡಿಕ್ಟ್ ಆಗಿದ್ದೆ ಗೊತ್ತಾ?
'ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ ಕಂಪನಿಗೆ ನಾನು ಮಾರ್ಚ್ನಲ್ಲಿ ನನ್ನ ರಾಜೀನಾಮೆ ಕೊಟ್ಟೆ ಆಗಲೇ ನಾನು ಸಂಬಳಕ್ಕೆ ಎಷ್ಟು ಅಡಿಕ್ಟ್ ಆಗಿದ್ದೇನೆ ಎಂದು ತಿಳಿದಿದ್ದು. ನಾನು ನನ್ನ ಕೆಲಸ ರಿಸೈನ್ ಮಾಡಲು ಹಲವಾರು ತಿಂಗಳುಗಳಿಂದ ಚಿಂತಿಸುತ್ತಿದ್ದೆ. ಸಂಬಳಕ್ಕೆ ಒಗ್ಗಿಕೊಂಡಿದ್ದ ನಾನು ನನಗೆ ನಾನೇ ಸಮಾಧಾನ ಪಡಿಸಿಕೊಳ್ಳುತ್ತಿದ್ದೆ. ಈ ಬಾರಿ ನನ್ನ ಸ್ಯಾಲರಿ ಹೈಕ್ ಆಗಬಹುದು ಅಥವಾ ಕ್ವಾರ್ಟರ್ನಲ್ಲಿ ಪರಿಸ್ಥಿತಿ ಬದಲಾಗಬಹುದು. ಅಥವಾ ನಾನೇ ಮುಂದೆ ಬದಲಾಗಬಹುದು ಎಂದು ಚಿಂತಿಸಿ ಸುಮ್ಮನಾದೆ, ಆದರೆ, ರಿಸೈನ್ ಮಾಡಲು ನಿರ್ಧರಿಸಲೇ ಇಲ್ಲ. ನನಗೆ ನಾನೇ ಸಮಾಧಾನಿಸಿಕೊಳ್ಳುತ್ತಿದ್ದೆ.'
ಮುಂದುವರೆದು, 'ಆಗ ನನಗೆ ಅರ್ಥವಾದ ಪ್ರಮುಖ ವಿಚಾರ ಎಂದರೆ ಸಂಬಳ ಎಂದೂ ಬಿಡಲಾಗದ ಒಂದು ಡ್ರಗ್ನಂತೆ. ನಮ್ಮ ಇಡೀ ಜೀವನವನ್ನು ಇದರ ಸುತ್ತಲೇ ಎಣೆದುಕೊಂಡಿರುತ್ತೇವೆ. ನಮ್ಮ ದುರಾಭ್ಯಾಸ, ಒಳ್ಳೆ ಅಭ್ಯಾಸಗಳು, ಬಾಡಿಗೆ, ಮನೆಯ ಖರ್ಚು, ವಾರಾಂತ್ಯದ ಯೋಜನೆ, ಭದ್ರತಾ ಪ್ರಜ್ಞೆ ಎಲ್ಲವೂ ಸೇರಿರುತ್ತದ. ದೊಡ್ಡ ಕತ್ತೆಗಳಾದ ನಂತರವೂ ಪೋಷಕರಿಂದ ಹಣ ತೆಗೆದುಕೊಳ್ಳೋದು ಹೇಗೆ ಎನ್ನುವ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಅಪರಾಧಿ ಭಾವನೆ ಮೂಡುತ್ತದೆ. ಎಲ್ಲಿಂದಾದ್ರು ಹಣ ಬರತ್ತ, ಇನ್ನು ಎಷ್ಟು ಹಣವಿದೆ ಎನ್ನುತ್ತ ಪದೇ ಪದೇ ಮೊಬೈಲ್ ನೋಡ್ತಿರ್ತೀರಿ. ಏನೇ ಖರೀದಿ ಮಾಡುವ ಮುನ್ನ ನೂರಾರು ಬಾರಿ ಯೋಚನೆ ಮಾಡುತ್ತಿರಿ. ಸ್ಯಾಲರಿ ನಮ್ಮ ಕೈ ಸೇರದೆ ಇದ್ದಾಗ ನಮ್ಮ ಬೇಡದ ಅಭ್ಯಾಸಗಳು ತನ್ನಷ್ಟಕ್ಕೆ ತಾವೇ ದೂರವಾಗುತ್ತವೆ' ಎಂದಿದ್ದಾರೆ.
ಕೆಲಸ ಮಾಡ್ತಾ ಸಂತೋಷವಾಗಿದ್ವಾ?
ಮುಂದುವರೆದು, 'ನಾವು ಸಂಬಳ ಪಡೆದುಕೊಂಡು ಕೆಲಸ ಮಾಡುತ್ತಿದ್ದ ಕಾಲದಲ್ಲಿ ನಿಜಕ್ಕೂ ಸಂತೋಷವಾಗಿದ್ದೆವಾ? ಎಂದು ಯೋಚಿಸೋಕೆ ಹೋಗೋದೆ ಇಲ್ಲ. ತಿಂಗಳ ಮೊದಲ ದಿನ ಸ್ಯಾಲರಿ ಆದರೆ ಸಾಕು ಎಂತ ಚಾಕರಿಯನ್ನು ಬೇಕಾದರೂ ಮಾಡಲು ರೆಡಿಯಾಗಿರುತ್ತೇವೆ. ನಾವು ಕೆಲಸ ಕಳೆದುಕೊಂಡಾಗ ಅಥವಾ ಬಿಟ್ಟಾಗಲೇ ನಮ್ಮ ಕೆಲಸ ಎಷ್ಟರ ಮಟ್ಟಕ್ಕೆ ಸುಖವಾಗಿತ್ತು. ನಾವು ಎಷ್ಟು ಸಂತೋಷವಾಗಿದ್ದೆವು ಎನ್ನೋದು ಅರಿವಿಗೆ ಬರುತ್ತದೆ' ಎಂದು ಹೇಳಿದ್ದಾರೆ.
ನೆಟ್ಟಿಗರು ಏನಂದ್ರು?
ನಾನೂ ಕೂಡ ಇಂದು ನನ್ನ ಕೊನೆಯ ವರ್ಕಿಂಗ್ ಡೇ ಫ್ರೆಂಡ್ ಎಂದಿದ್ದಾರೆ. ಮತ್ತೊಬ್ಬರು ನಾನು ಸಹ ಯಾವ ಕೆಲಸದ ಆಫರ್ ಇಲ್ಲದೆ ರಿಸೈನ್ ಮಾಡ್ಬಿಟ್ಟಿದ್ದೇನೆ. ಸಾಕಾಗಿದೆ ಎಂದಿದ್ದಾರೆ. ನಾನೀಗ ರಿಸೈನ್ ಮಾಡಿದ್ದೇನೆ. ಜೂ.30ರಿಂದ ಹೊಸ ಬ್ಯುಸಿನಸ್ ಶುರು ಮಾಡ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).