ಅಹುಜಾ 
ದೇಶ

ಭಾರತೀಯ ಮತ್ತು ವಿದೇಶಿಯ ಯುವಕರ ಮಧ್ಯೆ ಇರೋ ವ್ಯತ್ಯಾಸವಿಷ್ಟೇ; ನೆಟ್ಟಿಗನ ಮನದಾಳದ ಮಾತು ವೈರಲ್.. Indian Youth

Indian Youth: ವಿದೇಶಿ ಯುವಕರು ತಮ್ಮ ಕನಸಿನ ಬೆನ್ನತ್ತಿ, ಸಾಧಿಸುವತ್ತ ಸಾಗುತ್ತಿದ್ದರೆ, ಭಾರತೀಯ ಯುವಕರು ಮಾತ್ರ ಇಚ್ಛಿಸಿದ ಕೆಲಸ ಮಾಡುವುದಕ್ಕಿಂತ ತಾವು ತೆಗೆದುಕೊಂಡ ನಿರ್ಧಾರವನ್ನು ಕುಟುಂಬ ಮತ್ತು ಸಮಾಜವನ್ನು ಒಪ್ಪಿಸುವುದರಲ್ಲೇ ತಮ್ಮ​ ವಯಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಇನ್​ಸ್ಟಾಗ್ರಾಮ್​ ಇನ್ಸ್​ಪ್ಲುಯರ್ ಒಬ್ಬ ಭಾರತೀಯ ಮತ್ತು ಪಾಶ್ಚಿಮಾತ್ಯ ಯುವಕರ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದು ವೈರಲ್ ಆಗಿದೆ.
ahuja.logs ಎಂಬ ಇನ್​ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಲಾದ ರೀಲ್ಸ್​​​ನಲ್ಲಿ, ತಾನು ನಾಲ್ಕು ವರ್ಷ ವಿದೇಶದಲ್ಲಿ ಇದ್ದಾಗ, ಭಾರತೀಯ ಮತ್ತು ವಿದೇಶದಲ್ಲಿರುವ ಯುವಕರ ಮಧ್ಯೆ ನಿರ್ಧಾರ ತೆಗೆದು ಕೊಳ್ಳುವುದು ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಇದ್ದ ವ್ಯತ್ಯಾಸವನ್ನು ಗಮನಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸಮರ್ಥನೆಯಲ್ಲೇ ಕಾಲ ಕಳೆಯುವ ಭಾರತೀಯರು

ಭಾರತದ ಯುವಕರು ತಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲಿ ತಮ್ಮ ವಯಸ್ಸನ್ನು ಕಳೆದುಕೊಳ್ಳುತ್ತಾರೆ. ಪಿಯುಸಿ ಆದ ನಂತರ ಯಾವ ಸಬ್ಜೆಕ್ಟ್​ ಆಯ್ಕೆ ಮಾಡಬೇಕು. ಡಿಗ್ರಿ ಮುಗಿಸಿದ ನಂತರ ಏನು ಮಾಡಬೇಕು? ಏನು ಬೇಡ? ಯಾವ ಕೆಲಸ ನಮಗೆ ಸೂಕ್ತ ಎನ್ನುವ ತೀರ್ಮಾನಿಸುವುದು ಪೋಷಕರು. ಜೊತೆಗೆ ಮದುವೆಯಾಗುವಾಗಲೂ ಈ ಹುಡಗಿ ಅಥವಾ ಹುಡುಗ ಬೇಡ ಬೇಕು ಎಂಬುವ ಆಯ್ಕೆಯೇ ಪೋಷಕರದ್ದೇ ಆಗಿರುತ್ತದೆ. ಅಕಸ್ಮಾತ್​ ಅವರ ವಿರುದ್ಧವಾಗಿ ಹೋದರೆ, ಜಗತ್ತಿಗೆ ಹಾಗೂ ತಂದೆ-ತಾಯಿಗೆ ಅದರ ಬಗ್ಗೆ ಸಮರ್ಥನೆ ಕೊಟ್ಟುಕೊಳ್ಳುವುದರಲ್ಲಿಯೇ ಕಾಲ ಕಳೆಯುತ್ತಾರೆ. ಆದರೆ ವಿದೇಶಿಗರು ಹಾಗಿಲ್ಲ ಎಂದು ಅಹುಜಾ ಹೇಳಿದ್ದಾರೆ.

ವಿದೇಶಿಗರು ಯುವಕರು

ವಿದೇಶದಲ್ಲಿರುವ ಯುವಕರು ತಮ್ಮ ಸಂಬಂಧ, ಸ್ಟಾರ್ಟ್ಅಪ್​, ದೇಹ, ಕೆಲಸ, ಶಾಂತಿ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಣಯ ತೆಗೆದುಕೊಳ್ಳುತ್ತಾರೆ. ಅವರು ಬೇರೆಯವರಿಗೆ ಒಪ್ಪಿಸುವ ಬದಲಾಗಿ ಕಾರ್ಯರೂಪಕ್ಕೆ ತರುವಲ್ಲಿ ಯೌವ್ವನವನ್ನು ಕಳೆಯುತ್ತಾರೆ. ಆದರೆ, ಭಾರತೀಯರಂತೆ ನಿರ್ಧಾರಗಳನ್ನು ಪೋಷಕರು, ಕುಟುಂಬಗಳು ಮತ್ತು ಸಮಾಜಕ್ಕೆ ಸಮರ್ಥಿಸುವ ಪ್ರಮೇಯವೇ ಅವರಿಗಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಈ ವಿಡಿಯೋ ವೈರಲ್ ಆಗಿದ್ದು, ತರಹೇವಾರಿ ಕಮೆಂಟ್​​ಗಳು ಬಂದಿವೆ. ಅದರಲ್ಲಿ ಓರ್ವ ಇದು ಒಳ್ಳೆಯ ಗುಣಲಕ್ಷಣವೋ ಅಥವಾ ಸಮಸ್ಯೆಯೋ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್)