Man Jumps To Death 
ದೇಶ

ಅವತ್ತು ಬೆಳಿಗ್ಗೆ 7:30ಕ್ಕೆ ಆ ಅಪಾರ್ಟ್‌ಮೆಂಟ್‌ನಲ್ಲಿ ಆಗಿದ್ದೇನು? ಮಗುವಿನ ಜೊತೆ 23ನೇ ಮಹಡಿಯಿಂದ ಜಿಗಿದ ಸ್ಕೂಲ್ ಮ್ಯಾನೇಜರ್! | Man Jumps To Death

ಗುರುಂಗಾವ್: 38 ವರ್ಷದ ವ್ಯಕ್ತಿಯೊಬ್ಬರು ತನ್ನ ಎರಡು ವರ್ಷದ ಮಗುವಿನೊಂದಿಗೆ ಅಪಾರ್ಟ್​ಮೆಂಟ್​ವೊಂದರ 23ನೇ ಫ್ಲೋರ್​ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ (Man Jumps To Death)ಘಟನೆ ಹರಿಯಾಣದ ಗುರುಗಾಂವ್​ನಲ್ಲಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ರಾಹುಲ್​ ವಿಜಯರನ್​ ಎಂದು ಗುರುತಿಸಲಾಗಿದೆ. ದೆಹಲಿಯ ನಂಗ್ಲೋಯಿಯ ನಿವಾಸಿಯಾದ ಈತ ಖಾಸಗಿ ಸ್ಕೂಲ್ ಮ್ಯಾನೇಜರ್. ರಾಹುಲ್​ ವಿಜಯರನ್​ ಮತ್ತು ಪತ್ನಿ ನೀತು ದಹಿಯಾ ಅವರೊಟ್ಟಿಗೆ ಗುರುಗಾಂವ್​​ನಲ್ಲಿರುವ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸ ಮಾಡುತ್ತಿದ್ದರು.
ಮಾ.17 ಸೋಮವಾರ ಬೆಳಿಗ್ಗೆ ನೀತು ದಹಿಯಾ ಅವರು ಅಡುಗೆ ಮಾಡುತ್ತಿದ್ದರು. ಅಡುಗೆ ಮಾಡುವ ವೇಳೆ ಮಗುವನ್ನು ಆಟವಾಡಿಸಲು ಕರೆದುಕೊಂಡು ಹೋಗುತ್ತೇನೆ ಎಂದು ಸೆಕ್ಟರ್ 102ಕ್ಕೆ ತೆರಳಿದ್ದ ಅವರು, ಸುಮಾರು ಬೆಳಗ್ಗೆ 7:30ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಕ್ತದ ಮಡುವಲ್ಲಿ ಬಿದ್ದಿದ್ದ ಪತಿ-ಮಗು

ಅಪಾರ್ಟ್​ಮೆಂಟ್​ ಸುತ್ತ ಮುತ್ತಲೂ ಗದ್ದಲ ಕೇಳಿ ಬರುತ್ತಿತ್ತು. ಇದನ್ನು ಆಲಿಸಿದ ನೀತು ಏನಾಗಿದೆ ಎಂದು ನೋಡಲು ಹೋದಾಗ ವ್ಯಕ್ತಿ ಮತ್ತು ಮಗುವಿನ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದುನ್ನು ನೋಡಿದ್ದಾರೆ. ನಂತರ ಹತ್ತಿರ ತೆರಳಿ ಪರಿಶೀಲನೆ ಮಾಡಿದಾಗ ಅದು ತನ್ನ ಪತಿ ಮತ್ತು ಮಗು ಎಂದು ತಿಳಿದು ಆಕೆ ದಿಗ್ಭ್ರಾಂತಳಾಗಿದ್ದಾಳೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರಿಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೃಷ್ಟಿ ಕಳೆದುಕೊಂಡಿದ್ದಕ್ಕೆ ನೊಂದಿದ್ದ

ಈ ಬಗ್ಗೆ ವಿಜಯರನ್​ ಅವರ ಸಹೋದರ ಮಾತನಾಡಿ, ಕೋವಿಡ್​ ಕಾಲದ ನಂತರ ಅವರು ಒಂದು ಕಣ್ಣು ದೃಷ್ಟಿ ಕಳೆದುಕೊಂಡಿತ್ತು. ಮತ್ತೊಂದರಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದರಿಂದ ಆತ ನೊಂದಿದ್ದ. ಹೀಗಾಯ್ತಲ್ಲ ಎಂದು ಬೇಸತ್ತು ಹೋಗಿದ್ದ. ಅದೇ ಘಟನೆ ಅವನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿರಬಹುದು ಎಂದು ಹೇಳಿದ್ದಾರೆ.
ವಿಜಯರನ್​ ಅವರ ಸಹೋದರ ಮತ್ತು ಪತ್ನಿಯ ಹೇಳಿಕೆ ಪಡೆದುಕೊಳ್ಳಲಾಗುತ್ತದೆ. ಆತ್ಮಹತ್ಯೆಗೆ ಕಾರಣ ಏನು ಎನ್ನುವ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಅವರು ಮತ್ತೊಂದು ಅಪಾರ್ಟ್​ಮೆಂಟ್​ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾದರು ಏಕೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ,(ಏಜನ್ಸೀಸ್).