Man Pretends To Be Transgender, Enters Woman's Home And Rapes Her In Mumbai 
ದೇಶ

ಲಿಂಗತ್ವ ಅಲ್ಪಸಂಖ್ಯಾತರ ಸೋಗಿನಲ್ಲಿ ಮಹಿಳೆ ಫ್ಲ್ಯಾಟ್​ಗೆ ಎಂಟ್ರಿ; ಮಕ್ಕಳಾಗಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಾಗಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಕಾಮುಕ
  • ಮುಂಬೈನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಬಂಧನ
  • ಲಿಂಗತ್ವ ಅಲ್ಪಸಂಖ್ಯಾತರ ವೇಷದಲ್ಲಿ ಫ್ಲ್ಯಾಟ್​ಗೆ ಎಂಟ್ರಿ ಕೊಟ್ಟು ಕೃತ್ಯ
ಮುಂಬೈ: ಲಿಂಗತ್ವ ಅಲ್ಪಸಂಖ್ಯಾತೆ ಎಂದು ಹೇಳಿಕೊಂಡು ಮಹಿಳೆಯೊಬ್ಬರ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನ ಮಧ್ಯ ಭಾಗದ ಪೊವೈನಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಕೊಟ್ಟ ದೂರಿನ ಆಧಾರದ ಮೇಲೆ 28 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
28 ವರ್ಷದ ಅನಿಲ್ ಶೇಷರಾವ್ ಶಿಂಧೆ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮನೆಗೆ ಅಂಟಿಕೊಂಡಿರುವ ದುಷ್ಟ ಶಕ್ತಿಯನ್ನು ಹೋಗಲಾಡಿಸುತ್ತೇನೆ ಎಂದು ಹೇಳಿಕೊಂಡು ಎಂಟ್ರಿಯಾದ ಈತ ಮಹಿಳೆ ಮೇಲೆ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಏನಾಗಿತ್ತು?

ಸಂತ್ರಸ್ತ ಮಹಿಳೆ ಮುಂಬೈನ ಮಧ್ಯ ಭಾಗದ ಪೊವೈನಲ್ಲಿರುವ ಫ್ಲ್ಯಾಟ್​ವೊಂದರಲ್ಲಿ ತನ್ನ ಪತಿ ಮತ್ತು ವೃದ್ಧ ಕುಟುಂಬ ಸದಸ್ಯರೊಂದಿಗೆ ಅಲ್ಲಿ ವಾಸಿಸುತ್ತಿದ್ದಾರೆ. ಮದುವೆಯಾಗಿ ಸುಮಾರು ನಾಲ್ಕೈದು ವರ್ಷಗಳಾಗಿದ್ದರು ಮಕ್ಕಳಾಗಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿ ಆಗಸ್ಟ್​ 18ರಂದು ಅನಿಲ್ ಶೇಷರಾವ್ ಶಿಂಧೆ ಸೀರೆಯುಟ್ಟು ಮಹಿಳೆ ಮನೆಗೆ ಬಂದಿದ್ದ.
ನಿಮ್ಮ ಮನೆಗೆ ಅಂಟಿಕೊಂಡಿರುವ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತೇನೆ ಹಾಗೂ ಮಕ್ಕಳಿಲ್ಲದ ಮಹಿಳೆಯನ್ನು ಆಶೀರ್ವದಿಸಲು ಬಂದಿದ್ದೇನೆ ಎಂದು ನಾಟಕವಾಡಿ ಒಳಗೆ ಪ್ರವೇಶ ಪಡೆದುಕೊಂಡಿದ್ದಾನೆ. ದುಷ್ಟನ ಬಗ್ಗೆ ಅರಿವಿರದ ಆಕೆ ಆತನನ್ನು ನಂಬಿ ಒಳಗೆ ಬಿಟ್ಟುಕೊಂಡಿದ್ದಾಳೆ.
ಒಳಗೆ ಬರುತ್ತಲೇ ಆತ ಆ

ಕೆಯ ಬೆಡ್‌ರೂಮ್‌ಗೆ ಹೋಗಿ ಜೀವ ಬೆದರಿಕೆ ಹಾಕಿದ್ದಾನೆ. ಆನಂತರ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜೊತೆಗೆ ಮನೆಯಿಂದ ಹೊರಹೋಗುವ ಮೊದಲು 2,000 ರೂ.ಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಪವಾಯಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ಕೊಟ್ಟಿದ್ದಾರೆ.

ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. ದೌರ್ಜನ್ಯ ಎಸಗಿ ಅಲ್ಲಿಂದ ಹೊರಟ ಸೀರೆ ಧರಿಸಿದ್ದ ಆರೋಪಿಯನ್ನು ಆಟೋರಿಕ್ಷಾದಲ್ಲಿ ಥಾಣೆಯ ಖರೇಗಾಂವ್‌ನ ಬಡಾವಣೆಯ ಕಡೆಗೆ ಹೊರಡುತ್ತಿರುವುದನ್ನು ಪತ್ತೆಹಚ್ಚಿದರು. ನಂತರ ಪೊಲೀಸರು ಅದೇ ರಾತ್ರಿ ಕಲ್ವಾದಿಂದ ಅವರನ್ನು ಬಂಧಿಸಿದರು,(ಏಜೆನ್ಸೀಸ್).