SBI passbook found at home
- ಮನೆಯನ್ನು ಸ್ವಚ್ಛಗೊಳಿಸುವಾಗ ಸಿಕ್ತು 20 ರಿಂದ 24 ವರ್ಷ ಹಳೆಯ ಎಸ್‌ಬಿಐ ಪಾಸ್‌ಬುಕ್
- ಎಸ್‌ಬಿಐ ಖಾತೆಯಲ್ಲಿ 1 ಲಕ್ಷ ರೂಪಾಯಿಗಿಂತಲೂ ಅಧಿಕ ಹಣ ಇರುವುದು ಪತ್ತೆ
- ಮೃತಪಟ್ಟ ಅಜ್ಜನ ಹೆಸರಿನಲ್ಲಿದ್ದ ಹಣವನ್ನು ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ನೆಟ್ಟಿಗರು
SBI passbook found at home: ಪೂಜಾ ಎಂಬ ಎಕ್ಸ್ ಬಳಕೆದಾರರೊಬ್ಬರು 20 ಕ್ಕೂ ಹೆಚ್ಚು ವರ್ಷ ಹಳೆಯ ಎಸ್‌ಬಿಐ ಪಾಸ್‌ಬುಕ್ ಸಿಕ್ಕ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೇ ಅದರಲ್ಲಿರುವ ಬ್ಯಾಲೆನ್ಸ್ ಇಡೀ ಕುಟುಂಬವನ್ನೇ ಅಚ್ಚರಿಗೊಳಗಾಗುವಂತೆ ಮಾಡಿದೆ. ಮನೆ ಸ್ವಚ್ಛಗೊಳಿಸುವಾಗ ಹಳೆಯ ವಸ್ತುಗಳು ಸಿಗುವುದು ಸಹಜ. ಆದರೆ, ಇದೇ ದಿನನಿತ್ಯದ ಕ್ಲೀನಿಂಗ್ ಸೆಷನ್ ಕುಟುಂಬವೊಂದಕ್ಕೆ ಅನಿರೀಕ್ಷಿತ ಆರ್ಥಿಕ ಅಚ್ಚರಿಯನ್ನು ತಂದಿದೆ.ಈ ಕುರಿತಾದ ಆಸಕ್ತಿದಾಯಕ ಕಥೆಯನ್ನು 'ಪೂಜಾ'ಹಂಚಿಕೊಂಡಿದ್ದಾರೆ.
1 ಲಕ್ಷಕ್ಕೂ ಹೆಚ್ಚು ಬ್ಯಾಲೆನ್ಸ್ ಇದೆ
ಮನೆ ಸ್ವಚ್ಛ ಮಾಡುವಾಗ 20 ರಿಂದ 24 ವರ್ಷಗಳಷ್ಟು ಹಳೆಯದಾದ ಎಸ್‌ಬಿಐ ಪಾಸ್‌ಬುಕ್ ಪತ್ತೆಯಾಗಿದೆ. ಇದನ್ನು ನಮ್ಮ ಮನೆಯ ಕೆಲಸದವ ಅಪ್ಪನಿಗೆ ತಂದು ತೋರಿಸಿದ. ಅದು ಅಪ್ಪನ ತಂದೆ ಅಂದರೆ ನಮ್ಮ ಅಜ್ಜನಿಗೆ ಸೇರಿದ್ದು ಎನ್ನುವುದು ತಿಳಿದುಬಂತು. ಪಾಸ್‌ಬುಕ್ ಕಳೆದು ಹೋಗಿದೆ ಎಂದು ಸುಮ್ಮನಾಗಿದ್ದೆವು,. ಆದರೆ, ಪಾಸ್‌ಬುಕ್ ಸಿಕ್ಕ ನಂತರ ಅದರಲ್ಲಿದ್ದ ಬ್ಯಾಲೆನ್ಸ್ ಎಷ್ಟು ಎಂದು ನೋಡಿದಾಗ 1 ಲಕ್ಷ ರೂಪಾಯಿಗಿಂತಲೂ ಅಧಿಕ ಬ್ಯಾಲೆನ್ಸ್ ಉಳಿದಿರುವುದು ಬೆಳಕಿಗೆ ಬಂದಿದೆ. ಇನ್ನು ಈ ಖಾತೆಯು ಎಷ್ಟು ಹಳೆಯದು ಎಂದರೆ, ಅದರಲ್ಲಿ ಖಾತೆ ಸಂಖ್ಯೆಯು ಕೇವಲ 4 ಅಂಕಿಗಳನ್ನು ಹೊಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪೂಜಾ ಕೇಳಿದ್ದೇನು?
ಎರಡು ದಶಕದಿಂದ ಯಾವುದೇ ಬ್ಯಾಂಕ್ ವಹಿವಾಟು ಈ ಖಾತೆಯಿಂದ ನಡೆದಿಲ್ಲ. ಈಗ ಎಸ್ಬಿಐನಿಂದ ಹಣ ಪಡೆದುಕೊಳ್ಳಬಹುದೇ?ಕಾನೂನುಬದ್ಧ ವಾರಸುದಾರರು ಆ ಹಣವನ್ನು ಕ್ಲೈಮ್ ಮಾಡಬಹುದೇ? ಎಂಬ ಪ್ರಶ್ನೆಯನ್ನು ನೆಟ್ಟಿಗರ ಮುಂದೆ ಇಟ್ಟಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಖಾತೆಯು ಹಲವು ವರ್ಷಗಳಿಂದ ನಿಷ್ಕ್ರಿಯಗೊಂಡಿರುವುದರಿಂದ ಮೊದಲು ಆರ್‌ಬಿಐನ ನ UDGAM ಪೋರ್ಟಲ್‌ನಲ್ಲಿ ಈ ಖಾತೆಯ ವಿವರಗಳನ್ನು ಪರಿಶೀಲಿಸುವಂತೆ ಕೆಲವರು ಸಲಹೆ ನೀಡಿದ್ದಾರೆ. ಕ್ಲೈಮ್ ಮಾಡದ ಠೇವಣಿ ಬಗ್ಗೆ ಹುಡುಕಾಟ ನಡೆಸಲು ಆರ್ಬಿಐ ಈ ಪೋರ್ಟಲ್ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ,
ನೇರ ಬ್ಯಾಂಕ್ಗೆ ತೆರಳಲು ಸಲಹೆ
10 ವರ್ಷಗಳಿಗಿಂತ ಹೆಚ್ಚು ಕಾಲ ವಹಿವಾಟು ನಿಷ್ಕ್ರಿಯವಾಗಿದ್ದರಿಂದ ಖಾತೆಯ ಹಣವು ಆರ್‌ಬಿಐನ 'ಡೆಪಾಸಿಟರ್ ಎಜುಕೇಶನ್ ಅಂಡ್ ಅವೇರ್ನೆಸ್' ಫಂಡ್‌ಗೆ ವರ್ಗಾವಣೆಯಾಗಿರುತ್ತದೆ. ಆದರೂ, ಮೂಲ ಪಾಸ್‌ಬುಕ್, ಖಾತೆದಾರರ ಮರಣ ಪ್ರಮಾಣಪತ್ರ ಮತ್ತು ಕಾನೂನುಬದ್ಧ ವಾರಸುದಾರರ ದಾಖಲೆಗಳನ್ನು ತೆಗೆದುಕೊಂಡು ಬ್ಯಾಂಕ್ಗೆತೆರಳಿ ನಿಮ್ಮ ಹಣ ವಾಪಸ್ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ
ಹಣ ಶಾಶ್ವತವಾಗಿ ಕಳೆದುಹೋಗಿದೆ ಎಂದು ಭಾವಿಸದೆ, ಸೂಕ್ತ ವೆರಿಫಿಕೇಶನ್ ಮೂಲಕ ಬ್ಯಾಂಕ್‌ನಿಂದ ಇದನ್ನು ಪಡೆಯಲು ಪ್ರಯತ್ನಿಸುವಂತೆ ಕಾಮೆಂಟರ್‌ಗಳು ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ, (ಏಜೆನ್ಸೀಸ್).