ಸಹದ್ಯೋಗಿಯನ್ನು ಬರ್ಬರ ಹತ್ಯೆ ಮಾಡಿದ ವ್ಯಕ್ತಿ ಅರೆಸ್ಟ್.
30 ಸಾವಿರ ರೂಪಾಯಿ ಸಾಲ ವಾಪಸ್ ಕೊಡದಿದ್ದಕ್ಕೆ ಸಿಟ್ಟು.
ಸ್ಮಶಾನದಲ್ಲಿ ಬೆತ್ತಲೆ ದೇಹ, ರೈಲ್ವೆ ಸ್ಟೇಷನ್ನಲ್ಲಿ ತಲೆ ಪತ್ತೆ.
ಸೂರತ್: ತೆಗೆದುಕೊಂಡಿದ್ದ ಮೂವತ್ತು ಸಾವಿರ ರೂಪಾಯಿ ವಾಪಸ್ ಕೊಟ್ಟಿಲ್ಲ ಎನ್ನುವ ದ್ವೇಷಕ್ಕೆ ಒಡಿಶಾ ಮೂಲದ ವ್ಯಕ್ತಿಯೊಬ್ಬ ತನ್ನ ಸಹೋದ್ಯೋಗಿಯನ್ನು ಕೊಂದು ದೇಹ ಮತ್ತು ತಲೆಯನ್ನು ಬೇರೆ ಬೇರೆ ಕಡೆ ಬಿಸಾಡಿದ ಅಮಾನುಷ ಕೃತ್ಯ ಗುಜರಾತ್ನ ಸೂರತ್ನಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಸಚಿತ್ ಕುಮಾರ್ ನರೇಂದ್ರ ಬಾಲ್ ಎಂದು ಗುರುತಿಸಲಾಗಿದೆ. ಸಚಿತ್ ಕುಮಾರ್ ನರೇಂದ್ರ ಬಾಲ್ ಮತ್ತು ಮೃತ ಯುವಕ ಆರು ತಿಂಗಳಿಂದ ಪವರ್ಲೂಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ಕಳೆದ ಕೆಲವು ದಿನದ ಹಿಂದೆ ಸಚಿತ್ ಕುಮಾರ್ ನರೇಂದ್ರ ಬಾಲ್ 30,000 ರೂಪಾಯಿ ಸಾಲ ಪಡೆದಿದ್ದನು. ಅದನ್ನು ವಾಪಸ್ ಕೇಳಿದಾಗ ಕೊಡಲು ನಿರಾಕರಿಸುತ್ತಿದ್ದ. ಇದರಿಂದ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಸಾಲದ ಹಣವನ್ನು ವಾಪಸ್ ನೀಡದ ಹಿನ್ನೆಲೆಯಲ್ಲಿ ಸಿಟ್ಟಾದ ಆರೋಪಿ ತನ್ನ ಸಹೋದ್ಯೋಗಿಯನ್ನು ಕೊಲೆ ಮಾಡಿದ್ದಾನೆ.
ನವೆಂಬರ್ 3 ರಂದು ಗೊಟ್ಲವಾಡಿ ಜಂಕ್ಷನ್ ಬಳಿಯ ಸ್ಮಶಾನದಲ್ಲಿ ಯುವಕನೊಬ್ಬನ ಬೆತ್ತಲೆಯಾಗಿ ಬಿದ್ದಿದ್ದ ತಲೆ ಇಲ್ಲದ ದೇಹ ಕಂಡಿದ್ದಾಗಿ ಪೊಲೀಸರಿಗೆ ದೂರು ನೀಡಿದ. ಮಾಹಿತಿ ಪಡೆದ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿ ಬಾಲ್ನನ್ನು ಕೊಲೆ ಮಾಡಿರುವುದು ಎಂದು ಪತ್ತೆ ಹಚ್ಚಿದ್ದಾರೆ. ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ನಂತರ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ನೀಡಿದ ಸುಳಿವಿನ ಮೇರೆಗೆ, ಸ್ಮಶಾನದಿಂದ ಸುಮಾರು ಮೂರು ಕಿಲೋಮೀಟರ್ ದೂರವಿರುವ ಅಲ್ಕಾಪುರಿ ರೈಲ್ವೆ ಬ್ರಿಡ್ಜ್ ಕೆಳಗಿನ ರೈಲ್ವೆ ಹಳಿಗಳ ಬಳಿ ಬಿಸಾಕಲಾಗಿದ್ದ ಕತ್ತರಿಸಿದ ತಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ ಈ ಕೊಲೆ ಸುಮಾರು ಎರಡು ದಿನಗಳ ಹಿಂದೆ ನಡೆದಿರಬಹುದು ಎನ್ನಲಾಗಿದೆ. ಪ್ರಸ್ತುತ ಮೃತದೇಹ ಮತ್ತು ಕತ್ತರಿಸಿದ ತಲೆಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, (ಏಜೆನ್ಸೀಸ್).