ದೀದಿ ವಿರುದ್ಧ ವಾಗ್ವಾದಕ್ಕೀಳಿದ ಮಾಜಿ ಬಂಟ
- ರಂಗೇರುತ್ತಿರುವ ಬಂಗಾಳ ವಿಧಾನಸಭಾ ಚುನಾವಣೆ
- ದೀದಿ ವಿರುದ್ಧ ವಾಗ್ವಾದಕ್ಕೀಳಿದ ಮಾಜಿ ಬಂಟ
- ಮಮತಾಗೆ ಮುಸ್ಲಿಮರ ಓಟ್ ಬೇಕು ಆದರೆ ಅಭಿವೃದ್ಧಿ ಬೇಕಾಗಿಲ್ಲ; ಹುಮಾಯೂನ್ ಕಬೀರ್
- ಅಲ್ಪಸಂಖ್ಯಾತರ ಭೂಮಿಯಲ್ಲಿ ಹಿಂದೂಗಳ ದೇವಸ್ಥಾನ ನಿರ್ಮಿಸಿದ ಆರೋಪ
ಕಲ್ಕತ್ತಾ: ಇನ್ನೇನು ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲ್ಲಿದ್ದು, ಅಧಿಕಾರವನ್ನು ಸ್ಥಾಪಿಸಲು ಎಲ್ಲಾ ಪಕ್ಷಗಳು ತಮ್ಮದೇ ಆದ ಪ್ರಯತ್ನದಲ್ಲಿವೆ.
ಮುಸ್ಲಿಮರ ಓಟ್ ಬೇಕು; ಆದರೆ ಅಭಿವೃದ್ಧಿ ಬೇಡ
ತ್ರಣಮೂಲಕ ಕಾಂಗ್ರೆಸ್ನಿಂದ ಹೊರಬದಂದಿರುವ ಹುಮಾಯೂನ್ ಕಬೀರ್ ಈಗ ಸಿಎಂ ಮಮತಾ ಬ್ಯಾನರ್ಜಿ (Humayun Kabir on Mamata Banerjee) ವಿರುದ್ಧ ತಿರುಗಿ ಬಿದ್ದಿದ್ದಾರೆ.
ಆಮ್ ಜನತಾ ಉನ್ನಿಯನ್ ಪಾರ್ಟಿ ಎಂಬ ಪಕ್ಷವನ್ನು ಕಟ್ಟಿಕೊಂಡಿರುವ ಕಬೀರ್, ಮಮತಾ ಬ್ಯಾನರ್ಜಿ ಇಷ್ಟು ವರ್ಷ ಮಾಡಿದ್ದೇನು? ಅವಳಿಕೆ ಕೇವಲ ಮುಸ್ಲಿಮರ ಮತ ಮಾತ್ರ ಬೇಕು; ಆದರೆ ಅಭಿವೃದ್ಧಿ ಬೇಕಾಗಿಲ್ಲ. ಮುಸ್ಲಿಮರ ಓಟ್ನ್ನು ಪಡೆದು ಹಿಂದೂಗಳಿಗೆ ದೇವಸ್ಥಾನವನ್ನು ಕಟ್ಟಿಸಿದ್ದು ಬಿಟ್ಟ ಮತ್ತೇನು ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾಳೆ. ಈ ಅವಧಿಯಲ್ಲಿ ಜಗನ್ನಾಥ ಧಾಮ್, ದಿಂಗಾ ಧಾಮ್ ಮತ್ತು ಹಲವಾರು ಕಾಳಿ ದೇವಸ್ಥಾನವನ್ನು ಮುಸ್ಲಿಮರ ಭೂಮಿಯಲ್ಲಿ ಕಟ್ಟಿಸಿದ್ದಾಳೆ. ಈ ಟಿಎಂಸಿ ಪಕ್ಷಕ್ಕೆ ಮತ ಮುಸ್ಲಿಮರದ್ದೂ ಬೇಕು ಆದರೆ ಅಭಿವೃದ್ಧಿ ಮಾತ್ರ ಹಿಂದೂಗಳಿಗೆ ಎಂದು ಕಿಡಿಕಾರಿದ್ದಾರೆ.
ಓವೈಸಿ ಜೊತೆ ಕೈ ಜೋಡಿಸಿರುವ ಕಬೀರ್
ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಹುಮಾಯೂನ್ ಕಬೀರ್ ನೇತೃತ್ವದ ಆಮ್ ಜನತಾ ಉನ್ನಿಯನ್ ಪಾರ್ಟಿ, ಅಸಾದುದ್ಧೀನ್ ಓವೈಸಿಯ ಎಐಎಂಐಎಂ ಪಕ್ಷದ ಜೊತೆಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.
ಈ ಎರಡು ಮುಸ್ಲಿಂ ಸಮುದಾಯದ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿರುವ ಕಾರಣ ಟಿಎಂಸಿ ಪಕ್ಷದ ಸಾಂಪ್ರದಾಯಿಕ ಮತದಾರರಾದ ಮುಸ್ಲಿಮರ ಮತ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಈ ಚುನಾವಣೆಯ ಫಲಿತಾಂಶ ಹೊರಬೀಳಲಿದೆ,(ಏಜನ್ಸೀಸ್).