- ಸರ್ಕಾರ ರಚಿಸಲು ವಿಜಯ್ಗೆ ಬೆಂಬಲ ನೀಡದ ಇತರ ಪಕ್ಷಗಳು, ರಾಜಿನಾಮೆ ನೀಡಲ್ಲ ಎಂದ ಮಮತಾ ಬ್ಯಾನರ್ಜಿ
- ಈ ರಾಜಕೀಯ ವಿದ್ಯಮಾನಗಳನ್ನಿಟ್ಟುಕೊಂಡು ತಮಾಷೆಯಾಗಿ ಬಿಂಬಿಸುತ್ತಿರುವ ಟ್ರೋಲರ್ಸ್ಗಳು
- ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಸೇರಿ ಆನ್ಲೈನ್ನಲ್ಲಿ ರಾಜಕೀಯ ಕುರಿತಾದ ಫನ್ನಿ ಪೋಸ್ಟ್ ವೈರಲ್
ಬಂಗಾಳ ಮತ್ತು ತಮಿಳುನಾಡು ಚುನಾವಣೆ ಫಲಿತಾಂಶ ಪ್ರಕಟಣೆಯಾಗಿ ನಾಲ್ಕೈದು ದಿನ ಕಳೆಯುತ್ತಾ ಬಂದರೂ ಸಹ ರಾಜಕೀಯ ಬಿಸಿ ಮಾತ್ರ ಆರಿಲ್ಲ. ಸದ್ಯ ಎಲ್ಲ ಕಡೆಯೂ ಎರಡೇ ವಿಚಾರ ಚರ್ಚೆಯಾಗುತ್ತಿರುವುದು ಒಂದು ವಿಜಯ್ಗೆ ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡಲು ಪಕ್ಷಗಳ ಬೆಂಬಲ ದಕ್ಕುತ್ತಿಲ್ಲ ಎನ್ನುವುದು. ಇನ್ನೊಂದು ಮಮತಾ ಬ್ಯಾನರ್ಜಿಯವರು ನಾನು ರಾಜೀನಾಮೆ ಕೊಡೋದಿಲ್ಲ ಎಂದು ಕುಳಿತಿರುವುದು. ಈ ವಿಚಾರವನ್ನೇ ಇಟ್ಟುಕೊಂಡು ಟ್ರೋಲರ್ಸ್ಗಳು ಮೀಮ್ಸ್ ಮಾಡುತ್ತಿದ್ದಾರೆ.
ರಾಜಕೀಯ ಬಿಕ್ಕಟ್ಟು
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಪರಿಸ್ಥಿತಿ ಆನ್ಲೈನ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೇ.4ರಂದು ಎಲೆಕ್ಷನ್ ರಿಸಲ್ಟ್ ಬಂದ ನಂತರ ಮಮತಾ ಬ್ಯಾನರ್ಜಿಯವರು ರಾಜೀನಾಮೆ ಕೊಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದೇ ಹೊತ್ತಿನಲ್ಲಿ ಬಂಗಾಳದ ರಾಜ್ಯಪಾಲರಾದ ಆರ್ಎನ್ ರವಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದು ಮತ್ತಷ್ಟು ಚರ್ಚೆಗೆ ಎಡೆ ಮಾಡಿ ಕೊಟ್ಟಿತ್ತು.
ಇತ್ತ ತಮಿಳುನಾಡಿನಲ್ಲಿ 108 ಸ್ಥಾನ ಗೆದ್ದುಕೊಂಡಿದ್ದ ಟಿವಿಕೆಗೆ 10 ಸ್ಥಾನಗಳ ಕೊರತೆ ಕಾಡಿತ್ತು ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಮಾತ್ರ ಮೈತ್ರಿ ಮಾಡಿಕೊಂಡಿದ್ದು, ಬೇರೆ ಯಾವ ಪಕ್ಷವೂ ಅಷ್ಟಾಗಿ ಬೆಂಬಲ ನೀಡುತ್ತಿಲ್ಲ ಎನ್ನಲಾಗಿದೆ, ಈ ಬಗ್ಗೆ ಕಮಲ್ ಹಾಸನ್ ಸೇರಿದಂತೆ ಹಲವರು ಕಿಡಿಕಾರಿದ್ದಾರೆ. ಇದು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ ಎಂದಿದ್ದಾರೆ. ಈ ಎರಡು ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜೋ ಕರ್ ಎನ್ನು ಎಕ್ಸ್ ಖಾತೆಯಿಂದ ಈ ರೀತಿ ಮೀಮ್ಸ್ ಕ್ರಿಯೇಟ್ ಮಾಡಲಾಗಿದೆ.
ಮೀಮ್ಸ್ನಲ್ಲಿರೋದೇನು?
ಕರೆಂಟ್ ಸಿಚುವೇಶನ್ ಇನ್ ತಮಿಳುನಾಡು ಎಂದು ಶೀರ್ಷಿಕೆ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ಇತರ ಪಕ್ಷಗಳು ಸ್ವೀಟ್ ತಿನ್ನುತ್ತಿರುವುದು. ವಿಜಯ್ ಮರದ ಕೆಳಗೆ ಕೂತು ಅಳುತ್ತಿರುವುದು ಇದೆ.
ಮತ್ತೊಬ್ಬರು ಬಂಗಾಳದ ರಾಜಕೀಯ ಸ್ಥಿತಿ ಬಗ್ಗೆ ಮೀಮ್ಸ್ ಹಂಚಿಕೊಂಡಿದ್ದು, ಮಮತಾ ಬ್ಯಾನರ್ಜಿಯವರು ನಾನು ರಿಸೈನ್ ಮಾಡುವುದಿಲ್ಲ ಎನ್ನುವುದು ಅದಕ್ಕೆ ಅಖಿಲೇಶ್ ಯಾದವ್ ಅವರು ನಿಮ್ಮ ತಂತ್ರವೇ ತಪ್ಪು ಎಂದು ಹೇಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಎಕ್ಸ್ ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾ ಬಳಕೆದಾರರು ಭಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಸುವೇಂದು ಪಿಎ ಕೊಲೆ
ಮೇ.6ರ ರಾತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಚಂದ್ರನಾಥ ರಥ್ ಅವರು ತಮ್ಮ ಫ್ಲ್ಯಾಟ್ಗೆ ತೆರಳುತ್ತಿದ್ದ ಸಮಯದಲ್ಲಿ ಕಾರಿನಲ್ಲಿದ್ದ ಅವರಿಗೆ ಗುಂಡಿಟ್ಟು ಕೊಲೆ ಮಾಡಿದ ಘಟನೆ ಸದ್ಯ ಮತ್ತೊಂದು ಚರ್ಚೆಯಾಗಿದೆ. ಸುವೇಂದು ಅವರ ಆಪ್ತರು ಇಲ್ಲಿಯವರೆಗೂ 2013ರಿಂದ ಇಲ್ಲಿಯವರೆಗೂ ನಾಲ್ವರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ, (ಏಜೆನ್ಸೀಸ್).