ಪಶ್ಚಿಮ ಬಂಗಾಳ ಚುನಾವಣೆ 2026ಕ್ಕೆ TMC ಪ್ರಣಾಳಿಕೆ ಬಿಡುಗಡೆ
- ಪಶ್ಚಿಮ ಬಂಗಾಳ ಚುನಾವಣೆ 2026ಕ್ಕೆ TMC ಪ್ರಣಾಳಿಕೆ ಬಿಡುಗಡೆ
- ಸಾಮಾನ್ಯ ವರ್ಗದ ಮಹಿಳೆಯರಿಗೆ 1,500 ಪ.ಜಾತಿ/ಪಂಗಡದ ಮಹಿಳೆಯರಿಗೆ 1,700 ಮಾಸಿಕ ಧನ ಸಹಾಯ
- ಇಷ್ಟು ದಿನ ನಿಮ್ಮ ಸ್ತ್ರೀ ಸಬಲೀಕರಣ ಏಲ್ಲಿತ್ತು ಎಂದ ಮೈಥಿಲಿ ಠಾಕೂರ್
ಪಶ್ಚಿಮ ಬಂಗಾಳ: ಇನ್ನೇನು ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆ ಆರಂಭವಾಗಲಿರುವ ಹಿನ್ನಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಪ್ರನಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರನಾಳಿಕೆಯಲ್ಲಿ, ಸಾಮಾನ್ಯ ವರ್ಗದ ಮಹಿಳೆಯರಿಗೆ ಮಾಸಿಕ 1,500 ಹಾಗೂ ಎಸ್/ಎಸ್ಟಿ ಮಹಿಳೆಯರಿಗೆ ಮಾಸಿಕ 1,700 ನೀಡುವುದಾಗಿ ಟಿಎಮ್ಸಿ ಪಕ್ಷ ಘೋಷಿಸಿದೆ.
ಇಷ್ಟು ದಿನ ಏನು ಮಾಡಿದಿರಿ?
ಈಗ ಈ ಪ್ರನಾಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಹಾರದ ಬಿಜೆಪಿ ಎಮ್ಎಲ್ಎ ಮೈಥಿಲಿ ಠಾಕೂರ್ (Maithili Thakur on Mamata Banerjee), ಇವರಿಗೆ ಮಹಿಳೆಯರ ಮೇಲೆ ಇಷ್ಟೊಂದು ಕಾಳಜಿ ಇದ್ದರೆ ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಈ ಪ್ರನಾಳಿಕೆ ಕೇವಲ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದ್ದು, ಬಿಹಾರ ಚುನಾವಣೆ ಸಂದರ್ಭದಲ್ಲಿ ಸಹ ತಮ್ಮ ಪಕ್ಷ ಸೋಲುತ್ತದೆ ಎಂದು ತಿಳಿದಾಗ ಇದೇ ರೀತಿಯ ಯೋಜನೆಗಳನ್ನು ಜಾರೊ ಗೊಳಿಸುವ ಭರವಸೆ ನೀಡಿರುವುದನ್ನು ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಮತಾ ಪ್ರಕಟಿಸಿರುವ ಪ್ರನಾಳಿಕೆಯಲ್ಲಿ ಏನಿದೆ?
ಮುಂಬರುವ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಜಯಗಳಿಸಲು ಸಿಎಂ ಮಮತಾ ಬ್ಯಾನರ್ಜಿ ಹತ್ತು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
1. ಸಾಮಾನ್ಯ ವರ್ಗದ ಮಹಿಳೆಯರಿಗೆ ಮಾಸಿಕ 1,500 ರೂಪಾಯಿ
2. ಪರಿಸಿಷ್ಟ ವರ್ಗ ಹಾಗೂ ಪ. ಜಾತಿಯ ಮಹಿಳೆಯರಿಗೆ 1,700 ರೂಪಾಯಿ
3. ನಿರುದ್ಯೋಗಿ ಯುವಕರಿಗೆ ಮಾಸಿಕ 1,500 ರೂಪಾಯಿ ಆರ್ಥಿಕ ಸಹಾಯ
4. ರೈತರಿಗಾಗಿ 30,000 ಕೋಟಿ ಪ್ರತ್ಯೇಕ ಬಜೆಟ್
5. ಪ್ರತಿ ಕುಟುಂಬಕ್ಕೂ ಪಕ್ಕಾ ಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
6. ವಾರ್ಷಿಕ ಆರೊಗ್ಯ ಶಿಬಿರದ ಮೂಲಕ, ಪ್ರತಿ ಮನೆಯವರಿಗೆ ಆರೋಗ್ಯ ಭಾಗ್ಯ
7. ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಭರವಸೆ
8. ಹಿರಿಯ ನಾಗರಿಕರಿಗೆ ನಿರಂತರ ಪಿಂಚಣಿ
9. ಏಳು ಹೊಸ ಜಿಲ್ಲೆಗಳ ಸ್ಥಾಪನೆ
10. ನಗರ ಸ್ಥಳೀಯ ಸಂಸ್ಥೆಗಳ ಸಂಖ್ಯೆ ಹೆಚ್ಚಿಸುವುದಾಗಿ ಭರವಸೆ
2021 ರ ಚುನಾವಣೆ ಫಲಿತಾಂಶ
2021 ರಲ್ಲಿ 292 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಆಡಳಿತರೂಢ ತ್ರಣಮೂಲ ಕಾಂಗ್ರೆಸ್ ಪಕ್ಷವು 213 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಭಾರಿಗೆ ಅಧಿಕಾರಕ್ಕೆ ಬಂದಿತು.
2016 ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆಲ್ಲುವು ಮೂಲಕ ವಿರೋಧ ಪಕ್ಷದ ಸ್ಥಾನ ಪಡೆಯಿತು.
ದಶಕಗಳ ಕಾಲ ಬಂಗಾಳವನ್ನು ಆಳಿದ್ದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟ ಈ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದವು,(ಏಜನ್ಸೀಸ್).