Mallikarjun Kharge, Rahul Gandhi Skip Independence Day Event For 2nd Straight Year
- 80ನೇ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರು.
- ಸತತ ಎರಡನೇ ವರ್ಷವೂ ದೂರ ಉಳಿದಿದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ.
- ಕಾಂಗ್ರೆಸ್ ನಾಯಕರ ನಡೆ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕರು.
Congress leaders skip Independence Day: ದೆಹಲಿಯ ಕೆಂಪುಕೋಟೆಯಲ್ಲಿ ನಡೆದ
80ನೇ ಸ್ವಾತಂತ್ರ್ಯೋತ್ಸವಕ್ಕೆ
ಲೋಕಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸತತ ಎರಡನೇ ಬಾರಿ
ಗೈರಾದ ಹಿನ್ನೆಲೆ, ಬಿಜೆಪಿ ನಾಯಕರು ಭಾರಿ ವಾಗ್ದಾಳಿ ನಡೆಸಿದೆ. ವಿಪಕ್ಷ ನಾಯಕನಾಗಿರಲು ಅನ್ಫಿಟ್, ದಿಮಾಗಿ ನಕ್ಸಲ್ ಎಂದು ಟೀಕೆ ಮಾಡಿದ್ದಾರೆ.
80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಪ್ರಲ್ಹಾದ್ ಜೋಶಿ,
ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಸಿಜೆಪಿ ಸೂರ್ಯಕಾಂತ್, ಚುನಾವಣಾ ಆಯೋಗದ ಆಯುಕ್ತ
ಜ್ಞಾನೇಶ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರ ಗೈರು ಹಾಜರಿಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇದೊಂದು "ದುರದೃಷ್ಟಕರ" ಎಂದು ಕಿಡಿಕಾರಿದ್ದಾರೆ
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ರಾಹುಲ್ ಗಾಂಧಿ ಅವರು ಎರಡನೇ ಬಾರಿಗೆ
ಸ್ವಾತಂತ್ರ್ಯ ದಿನಾಚರಣೆಗೆ ಗೈರಾಗಿದ್ದಾರೆ. ದೇಶ ಭಕ್ತ, ವಿಪಕ್ಷ ಸ್ಥಾನದಲ್ಲಿರುವ ನಾಯಕ ಹೀಗೆ ಮಾಡಲು ಸಾಧ್ಯವೇ?. ಅವರಿಗೆ ವಂದೇ ಮಾತರಂ ಮೇಲೆ ಇರುವ ದ್ವೇಷವನ್ನು ಇದು ತೋರಿಸುತ್ತದೆ.
ರಾಹುಲ್ ಗಾಂಧಿ ಅವರು ವಿಪಕ್ಷ ನಾಯಕನ ಸ್ಥಾನದಲ್ಲಿರಲು ಅಸಮರ್ಥ. ಅವರ ಮನಸ್ಥಿತಿಯು ಅಸ್ವಸ್ಥ ನಕ್ಸಲ್ ಚಿಂತನೆಯನ್ನು ಬಿಂಬಿಸುತ್ತದೆ ಎಂದು ಗುಡುಗಿದರು.
2024ರಲ್ಲಿ ಶುರುವಾದ ವಿವಾದ
2024ರ ಸ್ವಾತಂತ್ರ್ಯೋತ್ಸವದಂದು ನಡೆದ ಸಮಾರಂಭದಲ್ಲಿ ವಿವಾದವೊಂದು ಭುಗಿಲೆದ್ದಿತ್ತು. ಸಂಪುಟ ದರ್ಜೆಯ ಸಚಿವರ ಸಮಾನ ಗೌರವ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಸಂಪ್ರದಾಯ ಹಾಗೂ ಪ್ರೋಟೋಕಾಲ್ ನಿಯಮಗಳನ್ನು ಮೀರಿ ಮುಂಭಾಗದ ಸಾಲಿನ ಬದಲಿಗೆ ಕೊನೆಯಿಂದ ಎರಡನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು
ಪ್ರೋಟೋಕಾಲ್ ಪ್ರಕಾರ ವಿರೋಧ ಪಕ್ಷದ ನಾಯಕರಿಗೆ ಮುಂಭಾಗದ ಸಾಲಿನಲ್ಲಿ ಆಸನ ಕಲ್ಪಿಸಬೇಕಾಗುತ್ತದೆ. ಕಾಂಗ್ರೆಸ್ ಸಂಸದರಿಗೆ ಇಂತಹ ಆಸನ ಹಂಚಿಕೆ ಮಾಡಿರುವುದು ಜನರಿಗೆ ಮಾಡಿದ ಅವಮಾನ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ಆದಾಗ್ಯೂ, ಕಾರ್ಯಕ್ರಮವನ್ನು ಆಯೋಜಿಸಿದ್ದ ರಕ್ಷಣಾ ಸಚಿವಾಲಯವು, ಆವರಣದಲ್ಲಿ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ಈ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು
,
(ಏಜೆನ್ಸೀಸ್).