July 1 Rules ಸಾಂದರ್ಭಿಕ ಚಿತ್ರ
- ಪ್ರತಿ ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ದೇಶದಲ್ಲಿ ಹಲವು ಆರ್ಥಿಕ ಮತ್ತು ಹಣಕಾಸು ನಿಯಮಗಳು ಬದಲಾಗುವುದು ಸಾಮಾನ್ಯ
- ಜುಲೈ 1 ರಿಂದ ಜನರ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತಿವೆ
- ಹೊಸ ತಿಂಗಳಿನಿಂದ ಏನೆಲ್ಲಾ ಬದಲಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ
- ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಜುಲೈ 1 ರಿಂದ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ
July 1 Rules: ಪ್ರತಿ ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ದೇಶದಲ್ಲಿ ಹಲವು ಆರ್ಥಿಕ ಮತ್ತು ಹಣಕಾಸು ನಿಯಮಗಳು ಬದಲಾಗುವುದು ಸಾಮಾನ್ಯ. ಜೂನ್ ತಿಂಗಳು ಮುಕ್ತಾಯದ ಹಂತ ತಲುಪಿದ್ದು, ಜುಲೈ ತಿಂಗಳು ಆರಂಭವಾಗುತ್ತಿದೆ. ಜುಲೈ 1 ರಿಂದ ಆಧಾರ್ ಕಾರ್ಡ್ ನವೀಕರಣ, ಬ್ಯಾಂಕಿಂಗ್ ನಿಯಮಗಳು, ಕ್ರೆಡಿಟ್ ಕಾರ್ಡ್ ಶುಲ್ಕಗಳು ಮತ್ತು ರೈಲ್ವೆ ನಿಯಮಗಳು ಸೇರಿದಂತೆ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತಿವೆ. ಈ ಬದಲಾವಣೆಗಳು ನಿಮ್ಮ ಮಾಸಿಕ ಬಜೆಟ್ ಮೇಲೆಯೂ ಪರಿಣಾಮ ಬೀರಬಹುದು. ಹಾಗಾದರೆ ಹೊಸ ತಿಂಗಳಿನಿಂದ ಏನೆಲ್ಲಾ ಬದಲಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
1.ಆಧಾರ್ ಕಾರ್ಡ್ ಉಚಿತ ನವೀಕರಣಕ್ಕೆ ಕೊನೆಯ ಅವಕಾಶ
ಆಧಾರ್ ನೀಡುವ ಸಂಸ್ಥೆಯಾದ ಯುಐಡಿಎಐ ಹೊಸ ತಿಂಗಳಿನಿಂದ ಆಧಾರ್ ಕಾರ್ಡ್‌ಗಳನ್ನು ನವೀಕರಿಸಲು ವಿಶೇಷ ಸೌಲಭ್ಯವನ್ನು ಒದಗಿಸುತ್ತಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಇಮೇಲ್ ಐಡಿಯನ್ನು ನವೀಕರಿಸಲು ನೀವೇನಾದರೂ ಬಯಸಿದರೆ, ಜುಲೈ 1 ರಿಂದ ಆಧಾರ್ ಅಪ್ಲಿಕೇಶನ್ ಮೂಲಕ ನೀವು ಅದನ್ನು ಉಚಿತವಾಗಿ ಮಾಡಬಹುದು. ಮೊದಲು, ಈ ಮೊದಲು ಅದನ್ನು ನವೀಕರಿಸಲು ನೀವು 75 ರೂ.ಗಳನ್ನು ಪಾವತಿಸಬೇಕಾಗಿತ್ತು.
2. ರೈಲ್ವೆ ನಿಯಮಗಳು
ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಜುಲೈ 1 ರಿಂದ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಇದಕ್ಕೆ ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ. ವರದಿಗಳ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಹೆಚ್ಚಿಸಲು ಈಗಾಗಲೇ ಸಿದ್ದತೆಗಳು ನಡೆಯುತ್ತಿದ್ದು, ರೈಲ್ವೆ ಆವರಣ ಮತ್ತು ರೈಲುಗಳಲ್ಲಿ ಶಿಸ್ತು ಕಾಯ್ದುಕೊಳ್ಳಲು ಇನ್ನೂ ಅನೇಕ ನಿಯಮಗಳನ್ನು ಬಿಗಿಗೊಳಿಸಬಹುದು.
3. ಎಲ್‌ಪಿಜಿ ಬೆಲೆ ಮತ್ತು ನಿಯಮಗಳು
LPGಯಿಂದ PNGಗೆ ಬದಲಾಯಿಸಲು ನೀಡಿದ್ದ 90 ದಿನಗಳ ಗಡುವು ಜೂನ್ 30ಕ್ಕೆ ಕೊನೆಗೊಳ್ಳುತ್ತಿದ್ದು, ಜುಲೈನಿಂದ ಹೊಸ ನಿಯಮ ಜಾರಿಗೆ ಬರಬಹುದು. ತಪ್ಪಿದಲ್ಲಿ ಗ್ಯಾಸ್ ಸಂಪರ್ಕ ರದ್ದಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಮಧ್ಯಪ್ರಾಚ್ಯದಲ್ಲಿ ಯುದ್ಧ ಕೊನೆಗೊಂಡು ಹಾರ್ಮುಜ್ ಜಲಸಂಧಿ ಮುಕ್ತವಾಗಿರುವುದರಿಂದ, ಕಳೆದ ಕೆಲವು ತಿಂಗಳುಗಳಿಂದ ಏರಿಕೆಯಾಗುತ್ತಿದ್ದ ದೇಶೀಯ ಹಾಗೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಶೀಘ್ರದಲ್ಲೇ ಭಾರಿ ಪರಿಹಾರ ನೀಡುವ ನಿರೀಕ್ಷೆಯಿದೆ.
4. ಐಟಿಆರ್ ಅಂತಿಮ ದಿನಾಂಕ
ITR-1 ಮತ್ತು ITR-2 ಫಾರ್ಮ್‌ಗಳನ್ನು ಸಲ್ಲಿಸುವ ತೆರಿಗೆದಾರರು 2025-26ನೇ ಹಣಕಾಸು ವರ್ಷದ ರಿಟರ್ನ್ ಅನ್ನು ಸಲ್ಲಿಸಲು ಜುಲೈ 31, 2026 ಕೊನೆಯ ದಿನಾಂಕವಾಗಿದೆ. ಈ ಗಡುವನ್ನು ತಪ್ಪಿಸಿಕೊಂಡರೆ ದಂಡ ವಿಧಿಸಬಹುದು ಮತ್ತು ಕೆಲವು ತೆರಿಗೆ ಪದ್ಧತಿಗಳನ್ನು ಆಯ್ಕೆ ಮಾಡುವುದರಿಂದ ಅನರ್ಹತೆಗೆ ಕಾರಣವಾಗಬಹುದು.
5. ಪಾಸ್‌ಪೋರ್ಟ್ ಶುಲ್ಕ
ಪಾಸ್‌ಪೋರ್ಟ್ ಪಡೆಯುವುದು ಶೀಘ್ರದಲ್ಲೇ ಸಾಮಾನ್ಯ ಮತ್ತು ತತ್ಕಾಲ್ ಅರ್ಜಿದಾರರಿಬ್ಬರಿಗೂ ಹೆಚ್ಚು ದುಬಾರಿಯಾಗಲಿದೆ. ವಿದೇಶಾಂಗ ಸಚಿವಾಲಯವು ಜುಲೈ1 ರಿಂದ ಜಾರಿಗೆ ಬರುವಂತೆ ನಿಯಮಿತ ಮತ್ತು ತತ್ಕಾಲ್ ಪಾಸ್‌ಪೋರ್ಟ್‌ಗಳಿಗೆ ಸೇವಾ ಶುಲ್ಕವನ್ನು ಹೆಚ್ಚಿಸಿದೆ. ಇದರರ್ಥ ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ, ನೀವು ಮೊದಲಿಗಿಂತ ಹೆಚ್ಚು ಪಾವತಿಸಬೇಕಾಗುತ್ತದೆ.
6. ಕ್ರೆಡಿಟ್ ಕಾರ್ಡ್ ನಿಯಮಗಳು
ಎಸ್‌ಬಿಐ ಕಾರ್ಡ್ ತನ್ನ ಪ್ರಮುಖ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳಾದ PhonePe SBI Card SELECT BLACK ಮತ್ತು PURPLE ನ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡುತ್ತಿದೆ. ಹೊಸ ನಿಯಮದಡಿ ಮಾಸಿಕ ರಿವಾರ್ಡ್ ಗಳಿಕೆಗೆ ಹೊಸ ಮಿತಿಗಳನ್ನು ಹೇರಲಾಗಿದೆ. ಅಲ್ಲದೆ ಇನ್ಮುಂದೆ ಶೈಕ್ಷಣಿಕ ಶುಲ್ಕ, ಚಿನ್ನಾಭರಣ ಖರೀದಿ, ಟೋಲ್ ಪಾವತಿ ಹಾಗೂ ಫೋನ್‌ಪೇ ಆ್ಯಪ್ ಹೊರತುಪಡಿಸಿ ಬೇರೆಡೆ ಮಾಡುವ ಯುಟಿಲಿಟಿ ಮತ್ತು ಇನ್ಶೂರೆನ್ಸ್ ವಹಿವಾಟುಗಳಿಗೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ಸಿಗುವುದಿಲ್ಲ.
ಇದಲ್ಲದೆ, ಎಚ್‌ಡಿಎಫ್‌ಸಿ (HDFC) ಕ್ರೆಡಿಟ್ ಕಾರ್ಡ್ ನಿಯಮಗಳೂ ಬದಲಾಗುತ್ತಿವೆ. ಕಾರ್ಡ್‌ದಾರರು ಪ್ರತಿ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ಮೂರು ಬಾರಿ ಉಚಿತ ದೇಶೀಯ ವಿಮಾನ ನಿಲ್ದಾಣದ ಲೌಂಜ್ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಈ ಸೌಲಭ್ಯವನ್ನು ಪಡೆಯಲು ಗ್ರಾಹಕರು ಅದರ ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಕನಿಷ್ಠ 60,000 ರೂ.ಗಳನ್ನು ಖರ್ಚು ಮಾಡಿರಬೇಕಿರುವುದು ಇನ್ಮುಂದೆ ಕಡ್ಡಾಯವಾಗಿದೆ (ಏಜೆನ್ಸೀಸ್).