ಮೇ 1ರಿಂದ LPG ನಿಯಮಗಳಲ್ಲಿ ಭಾರೀ ಬದಲಾವಣೆ: ಗ್ರಾಹಕರು ತಿಳಿಯಲೇಬೇಕಾದ ಹೊಸ ರೂಲ್ಸ್ ಇಲ್ಲಿದೆ!
ನವದೆಹಲಿ: ಮಧ್ಯಪ್ರಾಚ್ಯದ ಸಂಘರ್ಷ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಏರಿಳಿತದ ನಡುವೆ, ಭಾರತದ ಅಡುಗೆಮನೆಯ ಮೇಲೆ ಈಗ ಹೊಸ ನಿಯಮಗಳ ದಾಳಿಯಾಗುತ್ತಿದೆ. ಮೇ 1ರಿಂದ ಜಾರಿಗೆ ಬರುವಂತೆ ಎಲ್‌ಪಿಜಿ (LPG Price Hike) ಸಿಲಿಂಡರ್ ಬೆಲೆ ಮತ್ತು ಬುಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳು ನಿರೀಕ್ಷಿತವಾಗಿದ್ದು, ಸಾಮಾನ್ಯ ಗ್ರಾಹಕರಲ್ಲಿ ಆತಂಕ ಮತ್ತು ಕುತೂಹಲ ಎರಡೂ ಮನೆಮಾಡಿದೆ.
ಏನಿದು ಹೊಸ ಬದಲಾವಣೆ? ಬಿಗ್ ಅಪ್ಡೇಟ್ಸ್ ಇಲ್ಲಿವೆ
1. ಬೆಲೆ ಏರಿಕೆಯ ಭೀತಿ
ಮಾರ್ಚ್ ತಿಂಗಳಿನಿಂದ ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ದೇಶೀಯ 14.2 ಕೆಜಿ ಸಿಲಿಂಡರ್ ಬೆಲೆ ಈಗಾಗಲೇ ಸುಮಾರು 60 ರೂಪಾಯಿಗಳಷ್ಟು ಏರಿಕೆಯಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಂತೂ ತಿಂಗಳಲ್ಲಿ ಮೂರು ಬಾರಿ ಏರಿಕೆ ಕಂಡಿದೆ. ಮೇ 1ರಂದು ತೈಲ ಕಂಪನಿಗಳು (IOCL, BPCL, HPCL) ಬೆಲೆಗಳನ್ನು ಪರಿಷ್ಕರಿಸಲಿದ್ದು, ಮತ್ತೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2. ಬುಕಿಂಗ್ ಅವಧಿಯಲ್ಲಿ ಬದಲಾವಣೆ
ಈ ಮೊದಲು ನಗರ ಪ್ರದೇಶಗಳಲ್ಲಿ ಎರಡು ಸಿಲಿಂಡರ್‌ಗಳ ಬುಕಿಂಗ್ ನಡುವೆ 21 ದಿನಗಳ ಅಂತರವಿತ್ತು. ಆದರೆ ಈಗಿನ ಹೊಸ ಪ್ರಸ್ತಾವನೆಯಂತೆ ಈ ಅವಧಿಯನ್ನು 25 ದಿನಗಳಿಗೆ ಹೆಚ್ಚಿಸುವ ಸಾಧ್ಯತೆಯಿದೆ. ಗ್ರಾಮೀಣ ಭಾಗದಲ್ಲಿ ಇದು 45 ದಿನಗಳವರೆಗೆ ಇರಲಿದೆ. ಅಂದರೆ, ನೀವು ಒಮ್ಮೆ ಸಿಲಿಂಡರ್ ಬುಕ್ ಮಾಡಿದರೆ, ಮುಂದಿನ ಸಿಲಿಂಡರ್‌ಗಾಗಿ ಕನಿಷ್ಠ 25 ದಿನ ಕಾಯಲೇಬೇಕು.
3. ಒಟಿಪಿ ಆಧಾರಿತ ವಿತರಣೆ ಕಡ್ಡಾಯ
ಸಬ್ಸಿಡಿ ಸಿಲಿಂಡರ್‌ಗಳ ದುರುಪಯೋಗ ತಡೆಯಲು ಮತ್ತು ಪಾರದರ್ಶಕತೆ ತರಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಅಥವಾ ಒಟಿಪಿ ಆಧಾರಿತ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗುತ್ತಿದೆ. ಈಗ ಡೆಲಿವರಿ ಬಾಯ್ ಮನೆಗೆ ಬಂದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನೀಡಿದರೆ ಮಾತ್ರ ಸಿಲಿಂಡರ್ ಪಡೆಯಲು ಸಾಧ್ಯವಾಗುತ್ತದೆ.
4. ಇ-ಕೆವೈಸಿ ಅನಿವಾರ್ಯ
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಿತಾನುಭವಿಗಳಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಅಥೆಂಟಿಕೇಶನ್ ಕಡ್ಡಾಯಗೊಳಿಸಲಾಗಿದೆ. ಇನ್ನು ಸಾಮಾನ್ಯ ಗ್ರಾಹಕರೂ ಸಹ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಕಡಿತಗೊಳ್ಳುವ ಅಥವಾ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಎಲ್‌ಪಿಜಿ ಬದಲಿಗೆ ಪಿಎನ್‌ಜಿ (PNG) ಕಡೆಗೆ ಕೇಂದ್ರದ ಚಿತ್ತ!
ಬಜೆಟ್ ಮೇಲೆ ಹೊರೆಯಾಗುತ್ತಿರುವ ಎಲ್‌ಪಿಜಿ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಎಲ್ಲಿ ಪಿಎನ್‌ಜಿ ಸೌಲಭ್ಯ ಲಭ್ಯವಿದೆಯೋ ಅಲ್ಲಿನ ಗ್ರಾಹಕರು ನಿಗದಿತ ಅವಧಿಯೊಳಗೆ ಬದಲಾಗದಿದ್ದರೆ, ಅವರ ಎಲ್‌ಪಿಜಿ ಸಂಪರ್ಕವನ್ನು ಕಡಿತಗೊಳಿಸುವ ಕಠಿಣ ನಿಲುವನ್ನು ಸರ್ಕಾರ ತಳೆಯುವ ಸಾಧ್ಯತೆಯಿದೆ.
ಎಲ್‌ಪಿಜಿ ಬದಲಿಗೆ ಪಿಎನ್‌ಜಿ (PNG) ಕಡೆಗೆ ಕೇಂದ್ರದ ಚಿತ್ತ!
ಬಜೆಟ್ ಮೇಲೆ ಹೊರೆಯಾಗುತ್ತಿರುವ ಎಲ್‌ಪಿಜಿ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಎಲ್ಲಿ ಪಿಎನ್‌ಜಿ ಸೌಲಭ್ಯ ಲಭ್ಯವಿದೆಯೋ ಅಲ್ಲಿನ ಗ್ರಾಹಕರು ನಿಗದಿತ ಅವಧಿಯೊಳಗೆ ಬದಲಾಗದಿದ್ದರೆ, ಅವರ ಎಲ್‌ಪಿಜಿ ಸಂಪರ್ಕವನ್ನು ಕಡಿತಗೊಳಿಸುವ ಕಠಿಣ ನಿಲುವನ್ನು ಸರ್ಕಾರ ತಳೆಯುವ ಸಾಧ್ಯತೆಯಿದೆ,
ಗ್ರಾಹಕರು ಏನು ಮಾಡಬೇಕು..?
ಮುಂಚಿತವಾಗಿ ಬುಕ್ ಮಾಡಿ: ಬುಕಿಂಗ್ ಅಂತರ ಹೆಚ್ಚಾಗುವುದರಿಂದ ನಿಮ್ಮ ಬಳಿ ಇರುವ ಗ್ಯಾಸ್ ಖಾಲಿಯಾಗುವ ಮೊದಲೇ ಯೋಜಿತವಾಗಿ ಬುಕಿಂಗ್ ಮಾಡಿ.
ಕೆವೈಸಿ ಪೂರ್ಣಗೊಳಿಸಿ: ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಥವಾ ಆನ್‌ಲೈನ್ ಮೂಲಕ ಆಧಾರ್ ಜೋಡಣೆ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಒಟಿಪಿ ಸಿದ್ಧವಿರಲಿ: ಸಿಲಿಂಡರ್ ವಿತರಣೆಯ ಸಮಯದಲ್ಲಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಿಮ್ಮ ಕೈಯಲ್ಲಿರಲಿ.
ಮೇ 1ರ ಬೆಲೆ ಪರಿಷ್ಕರಣೆಯು ಕೇವಲ ಅಡುಗೆಮನೆಯ ಬಜೆಟ್ ಮೇಲೆ ಮಾತ್ರವಲ್ಲದೆ, ಹೋಟೆಲ್ ಮತ್ತು ವಾಣಿಜ್ಯ ಉದ್ದೇಶಗಳ ಮೇಲೂ ಪರಿಣಾಮ ಬೀರಲಿದೆ. ಮಧ್ಯಪ್ರಾಚ್ಯದ ಪರಿಸ್ಥಿತಿ ಶಾಂತವಾಗದ ಹೊರತು ಬೆಲೆ ಇಳಿಕೆಯ ನಿರೀಕ್ಷೆ ಕಷ್ಟ ಎಂಬುದು ತಜ್ಞರ ಮಾತಾಗಿದೆ,(ಏಜೆನ್ಸೀಸ್).