Mahua Moitra | ಹೆನ್ರಿಯೊಂದಿಗೆ ಮೊಯಿತ್ರಾ ಮತ್ತು ಜೈ ಅನಂತ್ ದೇಹಾದ್ರಾಯಿ 
ದೇಶ

ಪೆಟ್ ಫೈಟ್​; ನಾಯಿಗಾಗಿ ಕೋರ್ಟ್​ ಮೆಟ್ಟಿಲೇರಿದ ಟಿಎಂಸಿ ಸಂಸದೆ..ಮಾಜಿ ಪ್ರಿಯಕರನಿಗೆ ನೋಟಿಸ್​​ | Mahua Moitra

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ತಮ್ಮ ಸಾಕುಪ್ರಾಣಿ ರೊಟ್ವೀಲರ್ ಹೆನ್ರಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ಪ್ರಕರಣದ ಪ್ರತಿವಾದಿಯಾಗಿರುವ ಮಾಜಿ ಪ್ರಿಯಕರ, ವಕೀಲ ಜೈ ಅನಂತ್ ದೇಹಾದ್ರಾಯಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಸಂಸದೆ ಮೊಯಿತ್ರಾ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದೆಹಾದ್ರಾಯಿಗೆ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ನೋಟಿಸ್ ನೀಡಿದ್ದು, ಈ ಪ್ರಕರಣವನ್ನು ಏಪ್ರಿಲ್ 29 ರಂದು ವಿಚಾರಣೆ ನಡೆಸಲಿದೆ.

ಮೇಲ್ಮನವಿ ಸಲ್ಲಿಸಿದ ಮೊಯಿತ್ರಾ

ಪ್ರತಿ ತಿಂಗಳು ಹೆನ್ರಿಯನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ಮೊಯಿತ್ರಾ ಮನವಿ ಮಾಡಿದ್ದನ್ನು ನಿರಾಕರಿಸಿದ ಸಾಕೇತ್ ನ್ಯಾಯಾಲಯದ ಆದೇಶವನ್ನು ಮೊಯಿತ್ರಾ ಪ್ರಶ್ನಿಸಿದ್ದಾರೆ. ಖುದ್ದಾಗಿ ಹಾಜರಾದ ದೇಹಾದ್ರಾಯಿ, ಅರ್ಜಿಯನ್ನು ವಜಾಗೊಳಿಸುವಂತೆ ಹೈಕೋರ್ಟ್​ನ್ನು ಒತ್ತಾಯಿಸಿದರು.
ಸಾಕೇತ್ ನ್ಯಾಯಾಲಯದ ಆದೇಶವು ಕಾನೂನು ಮತ್ತು ವಾಸ್ತವ ಎರಡರಲ್ಲೂ ದೋಷಪೂರಿತವಾಗಿದೆ ಎಂದು ಮೊಯಿತ್ರಾ ತಮ್ಮ ಅರ್ಜಿ ಮೂಲಕ ವಾದಿಸಿದ್ದು, ಹೆನ್ರಿ ತಮ್ಮೊಂದಿಗೆ ವಾಸಿಸುತ್ತಿತ್ತು, ಅಧಿಕೃತ ಕಾರ್ಯಕ್ರಮಗಳಿಗಾಗಿ ದೆಹಲಿಯಿಂದ ಹೊರಗೆ ಪ್ರಯಾಣಿಸಿದಾಗ ಮಾತ್ರ ತಮ್ಮ ಪತಿ ದೇಹದ್ರಾಯಿ ಜೊತೆ ಇರುತ್ತಿತ್ತು ಎಂದು ವಾದಿಸಿದ್ದಾರೆ.

ಮಹುವಾ ಮೊಯಿತ್ರಾ ವಾದವೇನು..?

ಮಹುವಾ ಪರವಾಗಿ ವಾದ ಮಂಡಿಸಿದ ವಕೀಲರು, ಹೆನ್ರಿ ಮಹುವಾ ಅವರಿಗೆ ಸೇರಿದೆ, ಕಳೆದ ಕೆಲವು ಸಮಯದಿಂದ ಜೈ ಅನಂತ್ ಆ ನಾಯಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇರಿಸಿಕೊಂಡಿದ್ದು, ಅದರ ಮೇಲಿನ ಸಂಪೂರ್ಣ ಹಕ್ಕು ಮಹುವಾ ಅವರದ್ದಾಗಿದೆ, ಆದ್ದರಿಂದ ತಕ್ಷಣವೇ ಅದನ್ನು ವಾಪಸ್ ಕೊಡಿಸಬೇಕು ತಮ್ಮ ವಾದ ಮಂಡಿಸಿದರು.
ಹೈಕೋರ್ಟ್‌ನ ಮುಂದಿರುವ ಅರ್ಜಿಯಲ್ಲಿ ದೇಹಾದ್ರಾಯಿ 2021 ರಲ್ಲಿ ಹೆನ್ರಿಯನ್ನು ಖರೀದಿಸಿದ್ದರು, ಇದಾದ ಬಳಿಕ ಮೊಯಿತ್ರಾ ಅದನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಕಸ್ಟಡಿ ಮೊಕದ್ದಮೆ ಹೂಡಿದರು ಎಂದು ತಿಳಿದುಬಂದಿದೆ(ಏಜೆನ್ಸೀಸ್​​).