ಮುಂಬೈ: ಮಹಾರಾಷ್ಟ್ರ ಮುನ್ಸಿಪಲ್ ಕೌನ್ಸಿಲ್ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳಲ್ಲಿ ಮಹಾಯುತಿ ಮೈತ್ರಿಕೂಟ 172 ಕೌನ್ಸಿಲ್‌ಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 90, ಶಿವಸೇನೆ 49 ಮತ್ತು ಎನ್‌ಸಿಪಿ 33 ಸ್ಥಾನಗಳಲ್ಲಿ ಮುಂದಿದೆ. ಇತ್ತ ಮಹಾ ವಿಕಾಸ್ ಅಘಾಡಿ 45 ಕೌನ್ಸಿಲ್‌ಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಕಾಂಗ್ರೆಸ್ 25, ಎನ್‌ಸಿಪಿ (ಶರದ್ ಬಣ) 12 ಮತ್ತು ಉದ್ಧವ ಶಿವಸೇನೆ 8, ಇತರರು 23 ಕೌನ್ಸಿಲ್‌ಗಳಲ್ಲಿ ಮುಂದಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ ನಗರ ಪಂಚಾಯತ್ ಚುನಾವಣೆಯಲ್ಲಿ, ಮಹಾಯುತಿ 34 ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 26, ಶಿವಸೇನೆ 5 ಮತ್ತು ಎನ್‌ಸಿಪಿ 3 ರಲ್ಲಿ ಮುನ್ನಡೆ ಸಾಧಿಸಿದೆ, ಎಂವಿಎ 5 ಕಾಂಗ್ರೆಸ್ 3 ಮತ್ತು ಶಿವಸೇನೆ ಯುಬಿಟಿ 2, ಇತರ ಇಬ್ಬರು ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಮಹಾರಾಷ್ಟ್ರದಾದ್ಯಂತ 286 ಪುರಸಭೆಗಳು ಮತ್ತು ನಗರ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿದೆ.
ಮಹಾರಾಷ್ಟ್ರ ಮುನ್ಸಿಪಲ್ ಕೌನ್ಸಿಲ್ ಚುನಾವಣಾ ಫಲಿತಾಂಶಗಳುಮಹಾಯುತಿ: 172
ಎಂವಿಎ: 45
ಮಹಾರಾಷ್ಟ್ರ ನಗರ ಪಂಚಾಯತ್ ಚುನಾವಣಾ ಫಲಿತಾಂಶಗಳು: ಮಹಾಯುತಿ: 34
ಡಿಸೆಂಬರ್ 2 ರಂದು 263 ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಶೇ. 67.3 ರಷ್ಟು ಮತದಾನ ದಾಖಲಾಗಿದ್ದು, ಶನಿವಾರ 23 ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಎರಡನೇ ಹಂತದಲ್ಲಿ ಶೇ. 47.04 ರಷ್ಟು ಮತದಾರರು ತಮ್ಮ ಅಧಿಕಾರ ಚಲಾಯಿಸಿದ್ದಾರೆ. ಧುಲೆಯ ದೊಂಡೈಚಾ ಮುನ್ಸಿಪಲ್ ಕೌನ್ಸಿಲ್ ಮತ್ತು ಸೋಲಾಪುರದ ಅಂಗರ್ ನಗರ ಪಂಚಾಯತ್‌ನ ಸದಸ್ಯರು ಮತ್ತು ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ(ಏಜೆನ್ಸೀಸ್).