ಸಾಂದರ್ಭಿಕ ಚಿತ್ರ 
ದೇಶ

ಮಹಾಶಿವರಾತ್ರಿ 2026: ಜನ್ಮ ಜನ್ಮಾಂತರದ ಪಾಪ ಕಳೆಯುವ ಉಪವಾಸ; ಎಷ್ಟು ಗಂಟೆ ವ್ರತ ಮಾಡಬೇಕು?ಇಲ್ಲಿದೆ ಪೂರ್ಣ ವಿವರ Mahashivratri

ಪ್ರಮುಖ ಮುಖ್ಯಾಂಶಗಳು

  • ಶಿವರಾತ್ರಿಯಂದು ಪ್ರತಿಯೊಬ್ಬ ಶಿವ ಭಕ್ತನು ಕೂಡಾ ಉಪವಾಸ ಮಾಡುವುದರ ಮೂಲಕ ಶಿವನನ್ನು ಪೂಜಿಸುತ್ತಾನೆ
  • ಶಿವರಾತ್ರಿಯ ಮೊದಲ ದಿನದಂದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ಹಗುರವಾದ, ಸಾತ್ವಿಕ ಆಹಾರವನ್ನು ಸೇವಿಸಬೇಕು
  • ನಿಮ್ಮ ಎಲ್ಲಾ ಕೆಟ್ಟ ಆಲೋಚನೆಗಳನ್ನು ಬದಿಗಿಟ್ಟು ಮನಸ್ಸನ್ನು ಶಿವನ ಭಕ್ತಿಯಿಂದ ಸಿದ್ಧಪಡಿಸಿಕೊಳ್ಳಬೇಕು
  • ಉಪವಾಸ ಮಾಡುವವರು ಆ ದಿನ ಅಕ್ಕಿ ಮತ್ತು ಇತರ ಧಾನ್ಯದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು
Mahashivratri: ಇನ್ನೇನು ಕೆಲವೇ ದಿನಗಳಲ್ಲಿ ಶಿವರಾತ್ರಿ ಹಬ್ಬ ಬರಲಿದೆ. ಈ ದಿನ ಶಿವನನ್ನು ಪೂಜಿಸಲು ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ. ಶಿವರಾತ್ರಿಯಂದು ಪ್ರತಿಯೊಬ್ಬ ಶಿವ ಭಕ್ತನು ಕೂಡಾ ಉಪವಾಸ ಮಾಡುವುದು ಮತ್ತು ಶಿವನನ್ನು ಪೂಜಿಸುತ್ತಾನೆ. ಈ ರೀತಿ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎಂದು ನಂಬಿರುತ್ತಾರೆ. ಹಾಗೆಯೇ ನೀವೇನಾದರೂ, ಉಪವಾಸವನ್ನು ಸರಿಯಾಗಿ ಆಚರಿಸಿದರೆ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು ಎಂದು ಹೇಳಲಾಗುತ್ತದೆ.
ಶಿವರಾತ್ರಿಯ ಮೊದಲ ದಿನದಂದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ಹಗುರವಾದ, ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ವೇಳೆ ಮದ್ಯ, ಮಾಂಸ, ತಂಬಾಕು ಸೇವನೆಯನ್ನು ತಪ್ಪಿಸಬೇಕು. ನಿಮ್ಮ ಎಲ್ಲಾ ಕೆಟ್ಟ ಆಲೋಚನೆಗಳನ್ನು ಬದಿಗಿಟ್ಟು ಮನಸ್ಸನ್ನು ಶಿವನ ಭಕ್ತಿಯಿಂದ ಸಿದ್ಧಪಡಿಸಿಕೊಳ್ಳಬೇಕು.
ಶಿವರಾತ್ರಿಯ ಹಬ್ಬದಂದು ಪ್ರತಿಯೊಬ್ಬರೂ ಕೂಡ, ಬೆಳಿಗ್ಗೆ ಸ್ನಾನ ಮಾಡಿ ಶುದ್ಧ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಈ ವೇಳೆ ಶಿವಲಿಂಗಕ್ಕೆ ಹಾಲು, ಜೇನುತುಪ್ಪ, ನೀರು, ಎಳನೀರು ಮತ್ತು ತುಪ್ಪವನ್ನು ಬಳಸಿ ಅಭಿಷೇಕ ಮಾಡಿ, ಬಿಲ್ವಪತ್ರೆ, ಬಿಳಿ ಹೂವುಗಳು, ಧೂಪ ಮತ್ತು ದೀಪವನ್ನು ಅರ್ಪಿಸುವುದರಿಂದ ಶಿವನ ತೃಪ್ತಿಯಾಗುತ್ತಾನೆಂದು ಹೇಳಲಾಗುತ್ತದೆ.
ಶಿವರಾತ್ರಿಯ ಪ್ರಮುಖ ಭಾಗವೆಂದರೆ ಉಪವಾಸ. ಕೆಲವರು ಸಂಪೂರ್ಣ ಉಪವಾಸ ಮಾಡಿದರೆ, ಕೆಲವರು ಹಣ್ಣು ಮತ್ತು ಹಾಲು ತಿನ್ನುವುದನ್ನು ಮಾತ್ರ ಮಾಡಿಕೊಂಡಿರುತ್ತಾರೆ. ಜನರು ತಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಉಪವಾಸ ಮಾಡಬೇಕು. ರಾತ್ರಿ ಇಡೀ ನಿದ್ರೆ ಮಾಡದೇ, ಶಿವನ ನಾಮ ಜಪಿಸುವುದು, ಭಜನೆ ಮತ್ತು ಪುರಾಣಗಳನ್ನು ಓದುತ್ತಾ ಜಾಗರಣೆ ಮಾಡಬೇಕು. 
ಉಪವಾಸ ಮಾಡುವವರು ಆ ದಿನ ಅಕ್ಕಿ ಮತ್ತು ಇತರ ಧಾನ್ಯದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಹಾಗೆಯೇ, ಉಪ್ಪು ಸೇರಿಸದ ಆಹಾರಗಳನ್ನು ತಪ್ಪಿಸಬೇಕು. ಹಾಗೆಯೇ, ವೃದ್ಧರು ಮತ್ತು ದೈಹಿಕ ಅಂಗವೈಕಲ್ಯ ಹೊಂದಿರುವವರು ಗೋಧಿಯಿಂದ ತಯಾರಿಸಿದ ಆಹಾರಗಳು ಮತ್ತು ಹಣ್ಣುಗಳನ್ನು ತಿನ್ನುವ ಮೂಲಕ  ಉಪವಾಸ ಮಾಡಬಹುದು. 
ಮಹಾ ಶಿವರಾತ್ರಿಯಂದು ಓಂ ನಮಃ ಶಿವಾಯ ಎಂಬ ಐದು ಅಕ್ಷರಗಳ ಮಂತ್ರವನ್ನು ಪಠಿಸುವುದು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನೀವು ಶಿವ ಪುರಾಣ ಮತ್ತು ಲಿಂಗ ಪುರಾಣವನ್ನು ಓದಬಹುದು ಅಥವಾ ಕೇಳಬಹುದು. ನಾಲ್ಕು ಪ್ರಹಾರಗಳಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಬಹುದು.

ಶಿವರಾತ್ರಿಯ ಮರುದಿನ ಏನು ಮಾಡಬೇಕು?

ಶಿವರಾತ್ರಿಯ ನಂತರದ ದಿನ, ಬೆಳಿಗ್ಗೆ ಸ್ನಾನ ಮಾಡಿ ಶಿವನನ್ನು ಪ್ರಾರ್ಥಿಸಿ ಉಪವಾಸವನ್ನು ಕೊನೆಗೊಳಿಸಬೇಕು. ಈ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸುವುದು ಹಾಗೆಯೇ ದಾನ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಶಿವರಾತ್ರಿ ಉಪವಾಸವನ್ನು ಸರಿಯಾದ ಭಕ್ತಿ ಮತ್ತು ನಂಬಿಕೆಯೊಂದಿಗೆ ಆಚರಿಸಿದರೆ, ಜೀವನದಲ್ಲಾಗುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿ ಶಾಂತಿ ಮತ್ತು ಸಮೃದ್ಧಿಯನ್ನು ಸಾಧಿಸಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.