Maharashtra Marriage Fraud Case 
ದೇಶ

ಹಣಕ್ಕಾಗಿ 9 ಮದುವೆ..ಲಕ್ಷ ಲಕ್ಷ ಲೂಟಿ; ಸೀರಿಯಲ್​ ವಂಚಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೀಗೆ..Maharashtra

ಪ್ರಮುಖ ಮುಖ್ಯಾಂಶಗಳು

  • ಹಣಕ್ಕಾಗಿ ಮದುವೆ ನಾಟಕವಾಡಿ ವಂಚಿಸುತ್ತಿದ್ದ ಮಹಿಳೆ
  • ಸಂತ್ರಸ್ತನಿಂದ ಚಕ್ಲಾಂಬ ಠಾಣೆಯ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲು
  • 9 ಮಂದಿ ಜೊತೆಗೆ ಮದುವೆ, ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದ ವಂಚಕಿ
ಮುಂಬೈ: ಅಮಾಯಕರನ್ನು ವಂಚಿಸಲು ಈಗ ನಾನಾ ವಿಧಗಳನ್ನು ವಂಚಕರು ಆರಿಸಿಕೊಳ್ಳುತ್ತಿದ್ದಾರೆ. ಸೈಬರ್​ ಕ್ರೈಂ, ಆನ್​ಲೈನ್​ ಪಾವತಿ, ಬ್ಯಾಂಕ್​ ಖಾತೆ ಹ್ಯಾಕ್​ ಹಾಗೂ ಮದುವೆ ಮಾಡಿಕೊಂಡು(Maharashtra Marriage Fraud Case) ವಂಚಿಸುವುದು ಸಹ ಈಗಿನ ಕಾಲಘಟ್ಟದಲ್ಲಿ ಒಂದು ಹಾದಿಯಾಗಿ ಬದಲಾಗಿದೆ.
ಹೌದು, ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಉಮಾಪುರ್​ ಗ್ರಾಮದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದ ಯುವತಿಯೊಬ್ಬಳು, ಆತನ ಲಕ್ಷಕ್ಕೂ ಹೆಚ್ಚು ಹಣವನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಣಕ್ಕಾಗಿ ಹತಕ್ಕೂ ಹೆಚ್ಚು ಮದುವೆ ಮಾಡಿಕೊಂಡು ವಂಚಿಸುವ ಏಜೆಂಟ್​ಗಳ ಜಾಲವನ್ನು ಮಹಾರಾಷ್ಟ್ರದಲ್ಲಿ ಬೇಧಿಸಲು ಪೊಲೀಸರು ಮುಂದಾಗಿದ್ದಾರೆ,

ಸಂತ್ರಸ್ತ ಕೊಟ್ಟ ದೂರಿನಲ್ಲಿ ಏನಿದೆ?

ಬ್ರೋಕರ್​ಗಳ ಮುಖೇನ ಸಂತ್ರಸ್ತ ಯುವಕನಿಗೆ ವಧುವಿನ ಪರಿಚಯವಾಯ್ತು. ಹುಡುಗಿ ಒಪ್ಪಿಗೆಯಾದ ಮೇಲೆ ನೇರ ಮದುವೆ ಏರ್ಪಾಟು ಆಯ್ತು. ಸಾಮಾನ್ಯವಾಗಿ ಬ್ರೋಕರ್​ಗಳು ಹೆಚ್ಚು ಹಣ ಪಡೆಯುತ್ತಾರೆ. ಆದರೆ, ಈತ ಮಾತ್ರ ತಾನು ಎಷ್ಟು ಒಳ್ಳೆಯವನು ಎಂದು ತೋರ್ಪಡಿಸಿಕೊಳ್ಳುವ ಸಲುವಾಗಿ ಹಣವನ್ನೇ ಸ್ವೀಕರಿಸಿಲ್ಲ.
ಆದರೆ, ಆಕೆ ಈ ಹಿಂದೆ ಎಂಟು ಮದುವೆ ಮಾಡಿಕೊಂಡಿದ್ದಳು. ನಾನು ಆಕೆಗೆ ಒಂಬತ್ತನೆಯ ಯುವಕನಾಗಿದ್ದೆ.ಆಕೆ ನನ್ನ ಹಣವನ್ನು ಹೊತ್ತೋಯ್ದ ನಂತರ ನನಗೆ ಆಕೆ ವಂಚಕಿ ಎಂದು ತಿಳಿದುಬಂದಿದೆ ಎಂದು ಚಕ್ಲಾಂಬಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ.

ವಂಚಕಿಗಾಗಿ ಹುಡುಕಾಟ

ವಂಚಕಿಯ ಈ ನಡೆಯಿಂದ ನನಗೆ ಮಾನಸಿಕವಾಗಿ ಆರ್ಥಿಕವಾಗಿ ನಷ್ಟವಾಗಿದೆ. ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಂಡು ಬಿಡಬೇಕು ಎಂತಲೂ ಎನಿಸಿದೆ. ವಂಚಕರನ್ನು ಬಂಧಿಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ದೂರಿನಲ್ಲಿ ಯುವಕ ಉಲ್ಲೇಖಿಸಿದ್ದಾನೆ.
ದೂರು ದಾಖಲಿಸಿಕೊಂಡ ಚಕ್ಲಾಂಬ ಠಾಣೆಯ ಪೊಲೀಸ್​​ ಅಧಿಕಾರಿ ಆರೋಪಿಗಳ ಪತ್ತೆಗಾಗಿ ಸಾಕಷ್ಟು ತನಿಖೆ ಮಾಡುತ್ತಿದ್ದೇವೆ, ಈ ಹಿಂದೆ ಆಕೆ ಮದುವೆಯಾಗಿದ್ದ ಎಂಟು ಮಂದಿಯ ಸಂಪರ್ಕ ಪಡೆದು ಇನ್ನಷ್ಟು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).