Bombay High Court  
ದೇಶ

Maharashtra Civic Poll | ಎಲ್ಲ ಸ್ಥಾನಗಳ ಚುನಾವಣೆ ಮುಗಿದ ಬಳಿಕವೇ ಫಲಿತಾಂಶ ಎಂದ ನ್ಯಾಯಾಲಯ...ಎಕ್ಸಿಟ್​ ಪೋಲ್​ಗೂ ದಿನಾಂಕ ನಿಗದಿ

ಮುಂಬೈ: ಮಹಾರಾಷ್ಟ್ರ ಪುರಸಭೆ ಮತ್ತು ನಗರ ಪಂಚಾಯತ್ ಚುನಾವಣೆಗಳ ಕುರಿತು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹತ್ವದ ತೀರ್ಪು ನೀಡಿದ್ದು. ಬಾಕಿ ಉಳಿದಿರುವ ಸ್ಥಾನಗಳ ಚುನಾವಣೆ ಮುಗಿದ ಬಳಿಕವೇ ಡಿಸೆಂಬರ್ 21 ರಂದು ಫಲಿತಾಂಶಗಳನ್ನು ಘೋಷಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಮತದಾನ ಮುಗಿದಿದ್ದು, ಸುಮಾರು 20 ಪುರಸಭೆಗಳಲ್ಲಿ ಕಾನೂನಿನ ಕಾರಣದಿಂದಾಗಿ ಚುನಾವಣೆ ವಿಳಂಬವಾಗಿದೆ. ಈ ನಡುವೆ ಫಲಿತಾಂಶಗಳನ್ನು ಎರಡೆರಡು ಬಾರಿ ಘೋಷಿಸುವುದು ಸರಿಯಾದ ಪ್ರಕ್ರಿಯೆ ಅಲ್ಲ ಎಂಬ ವಕೀಲರ ಮನವಿಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನ್ಯಾಯಯುತತೆಯನ್ನು ಕಾಪಾಡಿಕೊಳ್ಳಲು ಏಕಕಾಲದಲ್ಲಿ ಫಲಿತಾಂಶ ಘೋಷಣೆ ಅತ್ಯಗತ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಮತದಾನ ಮುಗಿದ ಬಳಿಕವೇ ಎಕ್ಸಿಟ್​ ಪೋಲ್​...

ಡಿಸೆಂಬರ್ 20 ರಂದು ಉಳಿದ ಚುನಾವಣೆಗಳು ನಡೆಯಲಿದ್ದು, ಅದಾದ ಅರ್ಧ ಘಂಟೆ ಬಳಿಕವೇ ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟಿಸಲು ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲಿಯವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.

ದೋಷಪೂರಿತ ಸಿಎಂ ದೇವೇಂದ್ರ ಫಡ್ನವೀಸ್...

ನ್ಯಾಯಾಲಯದ ತೀರ್ಪಿಗೆ ಕಾರಣವಾದ ಘಟನೆಗಳ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆಗಳನ್ನು ಮುಂದೂಡುವುದು ಮತ್ತು ಫಲಿತಾಂಶಗಳನ್ನು ವಿಳಂಬವಾಗಿ ಘೋಷಿಸುವುದು ಅಭೂತಪೂರ್ವವಾಗಿದೆ ಎಂದು ಟೀಕಿಸಿದರು. ಚುನಾವಣಾ ಆಯೋಗದ ವಿರುದ್ಧ ತಮ್ಮ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ ಫಡ್ನವೀಸ್, ಒಟ್ಟಾರೆ ಪ್ರಕ್ರಿಯೆಯಲ್ಲಿನ ಲೋಪ ದೋಷಗಳ ಬಗ್ಗೆ ಮಾತನಾಡಿದರು. ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಮಟ್ಟದ ಅಕ್ರಮಗಳನ್ನು ನೋಡುತಿದ್ದೇನೆ, ತುರ್ತಾಗಿ ಕಾರ್ಯವಿಧಾನಗಳಲ್ಲಿ ಸುಧಾರಣೆ ತರುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು

ರಾಜ್ಯದ ಚಿತ್ತ ಫಲಿತಾಂಶದತ್ತ....

ಹೈಕೋರ್ಟ್‌ನ ಸ್ಪಷ್ಟ ನಿರ್ದೇಶನದ ಪ್ರಕಾರ ಎಲ್ಲಾ ಪುರಸಭೆ ಮತ್ತು ನಗರ ಪಂಚಾಯತ್ ಫಲಿತಾಂಶಗಳು ಇದೇ ತಿಂಗಳ 21 ರಂದು ಘೋಷಿಣೆಯಾಗಲಿದ್ದು, ದೀರ್ಘಕಾಲದ ಅನಿಶ್ಚಿತತೆಯ ನಂತರ ನಡೆಸ ಈ ಚುನಾವಣೆಯ ಫಲಿತಾಂಶಕ್ಕೆ ಎಲ್ಲ ಅಭ್ಯರ್ಥಿಗಳು, ಪಕ್ಷಗಳು ಮತ್ತು ಅದರ ಕಾರ್ಯಕರ್ತರು ಕಾಯುತ್ತಿದ್ದಾರೆ(ಏಜೆನ್ಸೀಸ್​).